AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಪ್ರತಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ: ಕೃಷಿ ಕಾಯ್ದೆ ವಿರುದ್ಧ ಅಹವಾಲು ಮಂಡನೆ

ನೂತನ ಕೃಷಿ ಕಾಯ್ದೆಗಳ ಕುರಿತು 5 ಪ್ರತಿಪಕ್ಷಗಳ ನಾಯಕರು ಇಂದು ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಡಿಎಂಕೆ ಮತ್ತು ಸಿಪಿಐ ಪ್ರತಿನಿಧಿಗಳು ರಾಷ್ಟ್ರಪತಿಗಳನ್ನು ಭೇಟಿಯಾಗಲಿದ್ದಾರೆ.

ಇಂದು ಪ್ರತಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ: ಕೃಷಿ ಕಾಯ್ದೆ ವಿರುದ್ಧ ಅಹವಾಲು ಮಂಡನೆ
ಸತತ 14ನೇ ದಿನಕ್ಕೆ ಕಾಲಿಟ್ಟ ದೆಹಲಿ ಚಲೋವಿನಲ್ಲಿ ಬಳಸುತ್ತಿರುವ ಟ್ರ್ಟಾಕ್ಟರ್​ಗಳಿಗೆ ಶಿರೋಮಣಿ ಅಕಾಲಿದಳದ ಕಾರ್ಯಕರ್ತರು ಉಚಿತ ಡೀಸೆಲ್ ವಿತರಿಸಿದರು.
guruganesh bhat
|

Updated on:Dec 09, 2020 | 12:58 PM

Share

ದೆಹಲಿ: ನೂತನ ಕೃಷಿ ಕಾಯ್ದೆಗಳ ಕುರಿತು 5 ಪ್ರತಿಪಕ್ಷಗಳ ನಾಯಕರು ಇಂದು ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ. ಅದಕ್ಕೂ ಮುನ್ನ ಎನ್​ಸಿಪಿ ನಾಯಕ ಶರದ್ ಪವಾರ್ ಅವರ ಮನೆಯಲ್ಲಿ ಚರ್ಚಿಸಿ ಸಲಹೆಗಳನ್ನು ಸಿದ್ಧಪಡಿಸಲಿರುವ ಪ್ರತಿಪಕ್ಷ ನಾಯಕರು ನಂತರ ರಾಷ್ಟ್ರಪತಿಗಳಿಗೆ ತಮ್ಮ ಅಹವಾಲು ಮಂಡಿಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ, ಡಿಎಂಕೆ ಮತ್ತು ಸಿಪಿಐ ಪ್ರತಿನಿಧಿಗಳು ರಾಷ್ಟ್ರಪತಿಯನ್ನು ಭೇಟಿಯಾಗಲಿದ್ದಾರೆ.

ತಮ್ಮ ಪತ್ರದ ಕುರಿತು ಸ್ಪಷ್ಟನೆ ನೀಡಿದ ಮಾಜಿ ಕೃಷಿ ಸಚಿವ ಶರದ್ ಪವಾರ್ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಖಾಸಗಿ ಸಹಭಾಗಿತ್ವದ ಅಗತ್ಯವಿದೆ ಎಂಬ ತಾವು ಕೃಷಿ ಸಚಿವರಾಗಿದ್ದಾಗ ಬರೆದ ಪತ್ರದ ಕುರಿತು ಬಿಜೆಪಿ ನಾಯಕರ ಟೀಕೆಗೆ ಶರದ್ ಪವಾರ್ ಸ್ಪಷ್ಟನೆ ನೀಡಿದ್ದಾರೆ.

‘ನಾನು ಎಪಿಎಂಸಿ ಕಾಯ್ದೆಯಲ್ಲಿ ಗಮನಾರ್ಹ ಸುಧಾರಣೆ ಆಗಬೇಕು ಎಂದು ಪತ್ರ ಬರೆದದ್ದು ನಿಜ. ಈ ಕುರಿತು ಯಾವುದೇ ಸಂದೇಹ ಇಲ್ಲ. ಆದರೆ ಈಗಿನ ನೂತನ ಕೃಷಿ ಕಾಯ್ದೆಗಳಲ್ಲಿ ಎಪಿಎಂಸಿ ಪ್ರಸ್ತಾಪವೇ ಇಲ್ಲ. ಕೇವಲ ವಿಷಯವನ್ನು ತಿರುಚಲೆಂದೇ ಬಿಜೆಪಿ ನಾನು ಬರೆದ ಪತ್ರವನ್ನು ಉಪಯೋಗಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.

ಎಪಿಎಂಸಿ ಕಾಯ್ದೆಗೆ ತಮ್ಮ ರಾಜ್ಯಗಳಲ್ಲಿ ತಿದ್ದುಪಡಿ ತರುವಂತೆ ಆಗ ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಮತ್ತು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್​ಗೆ ಅವರು ಪತ್ರ ಬರೆದಿದ್ದರು. ಈ ಪತ್ರವನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿತ್ತು. ಪಂಜಾಬ್ ರೈತರ ದೆಲ್ಲಿ ಚಲೋಗೆ ಈ ಎಲ್ಲ ಪ್ರತಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

APMC Act ಅಂದು ತಿದ್ದುಪಡಿ ಪರ ಇದ್ದ ಶರದ್ ಪವಾರ್ ಪತ್ರವನ್ನು ಓದಿದ ಶಿವರಾಜ್ ಸಿಂಗ್ ಚೌಹಾಣ್

Published On - 11:25 am, Wed, 9 December 20