ನೇಪಾಳ್ಗಂಜ್ನಿಂದ ಹರಿದ್ವಾರಕ್ಕೆ ಬರುತ್ತಿದ್ದ ಬಸ್ ಒಂದು ಮಾರ್ಗಮಧ್ಯೆ ತುಂಬಿ ಹರಿಯುತ್ತಿದ್ದ ನದಿ ನೀರಿನಲ್ಲಿ ಸಿಲುಕಿದ್ದು, 53 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಬಸ್ ನೀರಿನಲ್ಲಿ ಸಿಲುಕಿದ ತಕ್ಷಣ ಹರಿದ್ವಾರದ ಸಿಟಿ ಕಂಟ್ರೋಲ್ ರೂಂ ಎಸ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಿತ್ತು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರ ರಕ್ಷಣೆಗಾಗಿ ಎಸ್‌ಡಿಆರ್‌ಎಫ್‌ನ ಸಹಾಯವನ್ನು ಕೋರಲಾಗಿತ್ತು.
ಮಾಹಿತಿ ಲಭಿಸಿದ ತಕ್ಷಣ ಎಸ್‌ಡಿಆರ್‌ಎಫ್ ರಕ್ಷಣಾ ತಂಡವು ಹೆಚ್ಚುವರಿ ಸಬ್ ಇನ್‌ಸ್ಪೆಕ್ಟರ್ ಪರ್ವಿಂದರ್ ಧಸ್ಮಾನ್ ಅವರ ಮಾರ್ಗದರ್ಶನದಲ್ಲಿ ರಕ್ಷಣಾ ಸಾಧನಗಳೊಂದಿಗೆ ತಕ್ಷಣ ಸ್ಥಳಕ್ಕೆ ತೆರಳಿದರು. ಮಾಹಿತಿ ಮೇರೆಗೆ ತಕ್ಷಣ ಕ್ರಮ ಕೈಗೊಂಡ ಎಸ್ ಡಿಆರ್ ಎಫ್ ತಂಡ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಬಸ್ ನಲ್ಲಿದ್ದವರನ್ನು ಒಬ್ಬೊಬ್ಬರಾಗಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಮತ್ತಷ್ಟು ಓದಿ: ರೈತರಿಗೆ ಗುಡ್ನ್ಯೂಸ್: ಆಗಸ್ಟ್ ಮೊದಲ ವಾರದಲ್ಲಿ ಕಾಲುವೆಗೆ ಭದ್ರಾ ನದಿ ನೀರು
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಭಯಭೀತರಾಗಿ ಬಸ್ಸಿನಿಂದ ಹೊರಬಂದು ಸೇತುವೆಯ ಕೆಳಗಿರುವ ಪಿಲ್ಲರ್‌ಗಳ ಮೇಲೆ ಹತ್ತಿದ್ದಾರೆ. ಎಸ್‌ಡಿಆರ್‌ಎಫ್ ಹಗ್ಗ ಬಳಸಿ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದರು.
#Uttarakhand news: बरसाती नदी में फंसी 53 सवारी लेकर आ रही बस, एसडीआरएफ ने किया रेस्क्यू pic.twitter.com/5CUh76f1TR
— Riya Pandey (@pandeyriya0607) September 15, 2023
ಬಸ್ಸಿನಲ್ಲಿ 53 ಜನರಿದ್ದರು, ಬಹುತೇಕರು ನೇಪಾಳಮೂಲದವರಾಗಿದ್ದರು. ಮಾರ್ಗಮಧ್ಯೆ ಮಳೆಯ ರಭಸಕ್ಕೆ ನದಿಯಲ್ಲಿ ಇದ್ದಕ್ಕಿದ್ದಂತೆ ನೀರು ಹರಿದಿದ್ದರಿಂದ ಪ್ರಯಾಣಿಕರಿದ್ದ ಬಸ್ ನದಿಯಲ್ಲಿ ಸಿಲುಕಿಕೊಂಡಿತು. ಎಸ್‌ಡಿಆರ್‌ಎಫ್‌ನಿಂದ ಸಕಾಲದಲ್ಲಿ ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಬಸ್‌ನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ