ಲೋಕಸಭೆ ಚುನಾವಣೆಯಲ್ಲಿ 544 ಸ್ಥಾನಗಳಿಗೆ ಮತದಾನ? ಏನಿದು ಲೆಕ್ಕಾಚಾರ?

|

Updated on: Mar 16, 2024 | 8:37 PM

ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತೇವೆ. ನಾವು ಯೋಜನೆಯನ್ನು ರೂಪಿಸಿದ್ದೇವೆ, ಶಿಬಿರದಲ್ಲಿರುವ ಮತದಾರರಿಗೆ ಶಿಬಿರದಿಂದಲೇ ಮತದಾನ ಮಾಡಲು ನಾವು ಸೂಚಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರ ವಲಸಿಗರಿಗೆ ಒಂದು ಯೋಜನೆ ಇದೆ, ಅದೇ ರೀತಿಯಲ್ಲಿ ಮಣಿಪುರದಲ್ಲಿ ಯೋಜನೆಯು ಜಾರಿಯಾಗಲಿದೆ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 544 ಸ್ಥಾನಗಳಿಗೆ ಮತದಾನ? ಏನಿದು ಲೆಕ್ಕಾಚಾರ?
ರಾಜೀವ್ ಕುಮಾರ್
Follow us on

ದೆಹಲಿ ಮಾರ್ಚ್ 16: ಲೋಕಸಭೆಯ (Lok sabha Election) 543 ಸ್ಥಾನಗಳಿಗೆ ಏಪ್ರಿಲ್ 19 ರಂದು ಪ್ರಾರಂಭವಾಗುವ ಚುನಾವಣೆಯು ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಆದರೆ, ಚುನಾವಣಾ ಆಯೋಗವು (Election Commission) ಇಂದು (ಶನಿವಾರ) ಸಂಜೆ ವೇಳಾಪಟ್ಟಿಯನ್ನು ಪ್ರಕಟಿಸಿದಾಗ, 543 ಲೋಕಸಭಾ ಸ್ಥಾನಗಳ ಬದಲಿಗೆ 544 ಕ್ಷೇತ್ರ ಎಂದು ಹೇಳಿದೆ. ಹಾಗಾದರೆ ಒಂದು ಕ್ಷೇತ್ರ ಸೇರ್ಪಡೆ ಆಗಿದೆಯೇ ಎಂಬ ಯೋಚನೆ ನಿಮಗೆ ಬರದೇ ಇರದು. ಆದರೆ ಲೆಕ್ಕಾಚಾರ ಹಾಗಲ್ಲ. ಮಣಿಪುರದ ಎರಡು ಕ್ಷೇತ್ರಗಳಲ್ಲಿ ಒಂದಕ್ಕೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಈ ಬಗ್ಗೆ ವಿವರಿಸಿದ್ದಾರೆ. ಹಾಗಾಗಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 544 ಎಂದು ಅವರು ಹೇಳಿದ್ದಾರೆ.

ಮಣಿಪುರದ ಎರಡು ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದ ಒಳಭಾಗ ಮತ್ತು ಹೊರ ಮಣಿಪುರದ ಕೆಲವು ಭಾಗಗಳಲ್ಲಿ ಏಪ್ರಿಲ್ 19 ರಂದು ಹಂತ 1 ರಲ್ಲಿ ಮತ್ತು ಏಪ್ರಿಲ್ 26 ರಂದು 2 ನೇ ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ಭಾಗಗಳು ಹೊರ ಮಣಿಪುರ ಮತ್ತೆ ಮತ ಚಲಾಯಿಸಲಿದೆ. ಕಳೆದ ವರ್ಷ ಮೇ 3 ರಂದು ಎರಡು ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳು ಮೊದಲ ಬಾರಿಗೆ ಭುಗಿಲೆದ್ದ ನಂತರ ಪುನರಾವರ್ತಿತ ಹಿಂಸಾಚಾರದಿಂದ ನಲುಗಿರುವ ರಾಜ್ಯದಲ್ಲಿ ಜನರು ಸ್ಥಳಾಂತರಗೊಂಡ ಕಾರಣ ಒಂದು ಸ್ಥಾನಕ್ಕೆ ಎರಡು ಬಾರಿ ಮತದಾನ ನಡೆಯಲಿದೆ.

ಮಣಿಪುರದ ಒಳ ಮತ್ತು ಹೊರ ಸ್ಥಾನಗಳನ್ನು ಕ್ರಮವಾಗಿ ಬಿಜೆಪಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಹೊಂದಿದೆ. ಮಣಿಪುರದ ಹೊರ ಕ್ಷೇತ್ರವು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿದೆ.

ಮುಂಬರುವ ಚುನಾವಣೆಯಲ್ಲಿ ಮಣಿಪುರದ ಶಿಬಿರಗಳಲ್ಲಿ ವಾಸಿಸುವ ಜನರಿಗೆ ಅವರ ಶಿಬಿರಗಳಿಂದ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ.

“ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತೇವೆ. ನಾವು ಯೋಜನೆಯನ್ನು ರೂಪಿಸಿದ್ದೇವೆ, ಶಿಬಿರದಲ್ಲಿರುವ ಮತದಾರರಿಗೆ ಶಿಬಿರದಿಂದಲೇ ಮತದಾನ ಮಾಡಲು ನಾವು ಸೂಚಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರ ವಲಸಿಗರಿಗೆ ಒಂದು ಯೋಜನೆ ಇದೆ, ಅದೇ ರೀತಿಯಲ್ಲಿ ಮಣಿಪುರದಲ್ಲಿ ಯೋಜನೆಯು ಜಾರಿಯಾಗಲಿದೆ. ಮತದಾರರಿಗೆ ಆಯಾ ಕ್ಯಾಂಪ್‌ಗಳಿಂದ ಕೆಳಗಿನ ಕ್ಷೇತ್ರದಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ ಎಂದು ಕುಮಾರ್ ಹೇಳಿದರು.

ಇದನ್ನೂ ಓದಿ: Lok Sabha Election Opinion Poll: ಲೋಕಸಭೆ ಚುನಾವಣೆ ಸಮೀಕ್ಷೆ, ಎನ್​ಡಿಎ vs ಇಂಡಿಯಾ ಬಲಾಬಲ ಹೀಗಿದೆ

“ಮತದಾರರಲ್ಲಿ ನನ್ನ ಮನವಿ ಏನೆಂದರೆ, ಶಾಂತಿಯುತವಾಗಿ ಚುನಾವಣೆಯಲ್ಲಿ ಭಾಗವಹಿಸಿ, ಮತದಾನದ ಮೂಲಕ ಪ್ರತಿನಿಧಿಗಳನ್ನು ನಿರ್ಧರಿಸೋಣ, ನಾವು ವ್ಯವಸ್ಥೆ ಮಾಡುತ್ತೇವೆ” ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, 25,000 ಕ್ಕೂ ಹೆಚ್ಚು ಜನರನ್ನು ಭದ್ರತಾ ಪಡೆಗಳು ರಕ್ಷಿಸಿದ್ದು, ಸುಮಾರು 50,000 ಜನರು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ 96 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ, ಅದರಲ್ಲಿ 49.72 ಕೋಟಿ ಪುರುಷ ಮತದಾರರು ಮತ್ತು 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 1.82 ಕೋಟಿ ಪ್ರಥಮ ಬಾರಿ ಮತದಾರರಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ