ಕೇರಳದಲ್ಲಿ ಲಾಕ್​ಡೌನ್ ವೇಳೆ 66 ಮಕ್ಕಳು ಆತ್ಮಹತ್ಯೆ!

| Updated By: ಸಾಧು ಶ್ರೀನಾಥ್​

Updated on: Oct 27, 2020 | 4:27 PM

ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಲಾಕ್​ಡೌನ್ ವೇಳೆ 66 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮಾರ್ಚ್​ 25ರಿಂದ ಜುಲೈ 10ರವರೆಗೆ 66 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು DGP ಶೀಲಾ ನೇತೃತ್ವದ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆತ್ಮಹತ್ಯೆ ಸಂಖ್ಯೆ ಕೊಂಚ ತಗ್ಗಿದೆ. 2019ರ ಇದೇ ಅವಧಿಯಲ್ಲಿ 83 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೊತೆಗೆ, 2020ರ ಜೂನ್ 10ರೊಳಗೆ ಒಟ್ಟು 158 ಯುವಕರು ಸಾವನ್ನಪ್ಪಿದ್ದರು. […]

ಕೇರಳದಲ್ಲಿ ಲಾಕ್​ಡೌನ್ ವೇಳೆ 66 ಮಕ್ಕಳು ಆತ್ಮಹತ್ಯೆ!
Follow us on

ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಲಾಕ್​ಡೌನ್ ವೇಳೆ 66 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮಾರ್ಚ್​ 25ರಿಂದ ಜುಲೈ 10ರವರೆಗೆ 66 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು DGP ಶೀಲಾ ನೇತೃತ್ವದ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಅಚ್ಚರಿಯ ಸಂಗತಿಯೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆತ್ಮಹತ್ಯೆ ಸಂಖ್ಯೆ ಕೊಂಚ ತಗ್ಗಿದೆ. 2019ರ ಇದೇ ಅವಧಿಯಲ್ಲಿ 83 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಜೊತೆಗೆ, 2020ರ ಜೂನ್ 10ರೊಳಗೆ ಒಟ್ಟು 158 ಯುವಕರು ಸಾವನ್ನಪ್ಪಿದ್ದರು. ಕಳೆದ ವರ್ಷ ಕೇರಳದಲ್ಲಿ ಒಟ್ಟು 147 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಡಿಜಿಪಿ ಶೀಲಾ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಮಕ್ಕಳ ಆತ್ಮಹತ್ಯೆ ಬಗ್ಗೆ ವರದಿ ನೀಡಲು ಕೇರಳ ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು. DGP ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

Published On - 4:22 pm, Tue, 27 October 20