ಈ ಬಾರಿ ವಿದ್ಯುತ್ ಅವಘಡ: ಸುಟ್ಟು ಕರಕಲಾದ 8 ಕೃಷಿ ಕಾರ್ಮಿಕರು
ಹೈದರಾಬಾದ್: ಕಾರ್ಮಿಕರ ವಿಷಯದಲ್ಲಿ ಈ ಬಾರಿ ಆಂಧಪ್ರದೇಶದಿಂದ ಭಾರಿ ದಾರುಣ ಘಟನೆಯೊಂದು ವರದಿಯಾಗಿದೆ. ಮೆಣಿಸಿನ ಕಾಯಿ ತುಂಬಿಕೊಂಡು ಕಾರ್ಮಿಕರೊಂದಿಗೆ ತೆರಳುತ್ತಿದ್ದ ಟ್ರಾಕ್ಟರ್ಗೆ ವಿದ್ಯುತ್ ತಂತಿ ತಗುಲಿದೆ. ಆ ವೇಳೆ ವಿದ್ಯುತ್ ಹರಿದು 8 ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿವೆ. ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಘಟನೆ ಸಂಭವಿಸಿದೆ. ಪ್ರಕಾಶಂ ಜಿಲ್ಲೆಯ ನಾಗಲುಪ್ಪಲಪಾಡು ಮಂಡಲಂ ಮಾಚವರಂನಲ್ಲಿ ಈ ದುರ್ಘಟನೆ ನಡೆದಿದೆ. ಮೃತರ ಪೈಕಿ ಐವರು ಮಹಿಳಾ ಕಾರ್ಮಿಕರಿದ್ದರೆ, ಮೂವರು ಪುರುಷ ಕಾರ್ಮಿಕರು. ದುರಂತದ […]
ಹೈದರಾಬಾದ್: ಕಾರ್ಮಿಕರ ವಿಷಯದಲ್ಲಿ ಈ ಬಾರಿ ಆಂಧಪ್ರದೇಶದಿಂದ ಭಾರಿ ದಾರುಣ ಘಟನೆಯೊಂದು ವರದಿಯಾಗಿದೆ. ಮೆಣಿಸಿನ ಕಾಯಿ ತುಂಬಿಕೊಂಡು ಕಾರ್ಮಿಕರೊಂದಿಗೆ ತೆರಳುತ್ತಿದ್ದ ಟ್ರಾಕ್ಟರ್ಗೆ ವಿದ್ಯುತ್ ತಂತಿ ತಗುಲಿದೆ. ಆ ವೇಳೆ ವಿದ್ಯುತ್ ಹರಿದು 8 ಜನ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿವೆ. ಟ್ರಾಕ್ಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದದ್ದರಿಂದ ಘಟನೆ ಸಂಭವಿಸಿದೆ. ಪ್ರಕಾಶಂ ಜಿಲ್ಲೆಯ ನಾಗಲುಪ್ಪಲಪಾಡು ಮಂಡಲಂ ಮಾಚವರಂನಲ್ಲಿ ಈ ದುರ್ಘಟನೆ ನಡೆದಿದೆ.
ಮೃತರ ಪೈಕಿ ಐವರು ಮಹಿಳಾ ಕಾರ್ಮಿಕರಿದ್ದರೆ, ಮೂವರು ಪುರುಷ ಕಾರ್ಮಿಕರು. ದುರಂತದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ದುರ್ಘಟನೆಯಲ್ಲಿ ಗಾಯಗೊಂಡವರಿಗೆ ಸ್ಥಳೀಯವಾಗಿ ಕೂಡಲೇ ಚಿಕಿತ್ಸೆ ನೀಡಲು ಅದೇಶಿಸಿದ್ದಾರೆ.
Published On - 10:42 am, Fri, 15 May 20