ಕೊರೊನಾದಿಂದ, ಕನಕ ದುರ್ಗಾದೇವಿ ದೇಗುಲಕ್ಕೆ 25 ಕೋಟಿ ಆದಾಯ ನಷ್ಟ!
ಹೈದರಾಬಾದ್: ಕೊರೊನಾ ಮಹಾಮಾರಿಯನ್ನು ಹೋಗಲಾಡಿಸಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಅದರ ಪರಿಣಾಮ ಆಂಧ್ರಪ್ರದೇಶದ ವಿಜಯವಾಡದ ಪ್ರಸಿದ್ದ ಕನಕ ದುರ್ಗಾದೇವಿ ದೇವಾಲಯ 25ಕೋಟಿ ರೂ. ಆದಾಯ ಕಳೆದುಕೊಂಡಿದೆ. ಕಳೆದ 55 ದಿನಗಳ ಲಾಕ್ ಡೌನ್ ನಿಂದ ಹುಂಡಿ ಆದಾಯಕ್ಕೆ 7ಕೋಟಿ ರೂ.ಗೆ ಕತ್ತರಿ ಬಿದ್ದಿದೆ. ತಲೆಗೂದಲು ಕೊಡುವುದರಿಂದ ಬರುತ್ತಿದ್ದ 1 ಕೋಟಿ ಆದಾಯಕ್ಕೆ ಧಕ್ಕೆಯಾಗಿದೆ. ಸೀರೆಗಳ ಹರಾಜಿನಿಂದ ಬರಬೇಕಿದ್ದ 1ಕೋಟಿ ಆದಾಯಕ್ಕೆ ಕತ್ತರಿಯಾಗಿದೆ. ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುತ್ತಿದ್ದ ದುರ್ಗಾ ದೇವಾಲಯ […]
ಹೈದರಾಬಾದ್: ಕೊರೊನಾ ಮಹಾಮಾರಿಯನ್ನು ಹೋಗಲಾಡಿಸಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಅದರ ಪರಿಣಾಮ ಆಂಧ್ರಪ್ರದೇಶದ ವಿಜಯವಾಡದ ಪ್ರಸಿದ್ದ ಕನಕ ದುರ್ಗಾದೇವಿ ದೇವಾಲಯ 25ಕೋಟಿ ರೂ. ಆದಾಯ ಕಳೆದುಕೊಂಡಿದೆ.
ಕಳೆದ 55 ದಿನಗಳ ಲಾಕ್ ಡೌನ್ ನಿಂದ ಹುಂಡಿ ಆದಾಯಕ್ಕೆ 7ಕೋಟಿ ರೂ.ಗೆ ಕತ್ತರಿ ಬಿದ್ದಿದೆ. ತಲೆಗೂದಲು ಕೊಡುವುದರಿಂದ ಬರುತ್ತಿದ್ದ 1 ಕೋಟಿ ಆದಾಯಕ್ಕೆ ಧಕ್ಕೆಯಾಗಿದೆ. ಸೀರೆಗಳ ಹರಾಜಿನಿಂದ ಬರಬೇಕಿದ್ದ 1ಕೋಟಿ ಆದಾಯಕ್ಕೆ ಕತ್ತರಿಯಾಗಿದೆ.
ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುತ್ತಿದ್ದ ದುರ್ಗಾ ದೇವಾಲಯ ಭಕ್ತರಿಲ್ಲದೇ ಬಿಕೋ ಬಿಕೋ ಎನ್ನುತ್ತಿದೆ. ಈ ನಾಲ್ಕು ತಿಂಗಳಲ್ಲಿನ ದೇವಾಲಯ ಪ್ರಮುಖ ಆದಾಯ ಕಳೆದುಕೊಂಡಿದೆ. ಬಾಕಿ ಉಳಿದುಕೊಂಡಿರುವ ಗುತ್ತಿಗೆ ಕಾರ್ಯಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರು, ಮುಂದೆ ಬರುತ್ತಿಲ್ಲ. ಆದಾಯವಿಲ್ಲದೇ ಸಂಕಷ್ಟದಲ್ಲಿದ್ದೇವೆ ಎಂದು ದುರ್ಗಾದೇವಿ ಆಡಳಿತ ಮಂಡಳಿ ಅಧಿಕಾರಿ ಸುರೇಶ್ ತಿಳಿಸಿದ್ದಾರೆ.