2022 ರ ಗಣರಾಜ್ಯೋತ್ಸವದ (Republic Day 2022) ಮುನ್ನಾದಿನದಂದು 939 ಪೊಲೀಸ್ ಪದಕಗಳನ್ನು(Police Medals) ಘೋಷಿಸಿದ್ದು, ಇದರಲ್ಲಿ ಶೌರ್ಯಕ್ಕಾಗಿ 189 ಪದಕಗಳು ಸೇರಿವೆ. ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 25 ರ ಮಂಗಳವಾರದಂದು ಈ ಕುರಿತು ಪ್ರಕಟಣೆ ಹೊರಡಿಸಿದೆ. ಮಂಗಳವಾರದ ಗೃಹ ಸಚಿವಾಲಯದ ಪ್ರಕಟಣೆಯ ಪ್ರಕಾರ, 939 ಪದಕಗಳಲ್ಲಿ 189 ಶೌರ್ಯಕ್ಕಾಗಿ ಪೊಲೀಸ್ ಪದಕ (ಪಿಎಂಜಿ), 88 ವಿಶಿಷ್ಟ ಸೇವೆ (ಪಿಪಿಎಂ) ಮತ್ತು 662 ಮೆರಿಟೋರಿಯಸ್ ಸೇವೆಗಳಿಗೆ (ಪಿಎಂ) ನೀಡಲಾಗಿದೆ. ಗಣರಾಜ್ಯೋತ್ಸವದ ಮೊದಲು ಘೋಷಿಸಲಾದ ಒಟ್ಟು ಶೌರ್ಯ ಪದಕಗಳ ಪೈಕಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅತ್ಯಧಿಕ ಪದಕ ಪಡೆದುಕೊಂಡಿದ್ದಾರೆ. ಅವರ ಧೈರ್ಯ ಮತ್ತು ಶೌರ್ಯಕ್ಕಾಗಿ ಒಟ್ಟು 189 ರಲ್ಲಿ 115 ಪೊಲೀಸ್ ಪದಕಗಳನ್ನು ನೀಡಲಾಗಿದೆ. ಅರೆಸೇನಾ ಪಡೆಗಳ ಪೈಕಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಅತಿ ಹೆಚ್ಚು ಶೌರ್ಯ ಪದಕಗಳನ್ನು ಪಡೆದುಕೊಂಡಿದೆ. ಸಿಆರ್‌ಪಿಎಫ್ ಒಟ್ಟು 30 ಪದಕಗಳನ್ನು ಪಡೆದಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ಶಾಸ್ತ್ರ ಸೀಮಾ ಬಲ್ (SSB) ತಲಾ ಮೂರು ಪದಕಗಳನ್ನು ಪಡೆದಿದೆ.
Award of Gallantry Medals / Service Medals on the occasion of Republic Day, 2022
Press release-https://t.co/Kr0x323AEQ pic.twitter.com/IrdsDevGiA
— Spokesperson, Ministry of Home Affairs (@PIBHomeAffairs) January 25, 2022
ಸಿಆರ್‌ಪಿಎಫ್ ವಿಶೇಷ ಸೇವೆಗಾಗಿ ಐದು ರಾಷ್ಟ್ರಪತಿ ಪೊಲೀಸ್ ಪದಕ ಮತ್ತು ಪ್ರತಿಭಾನ್ವಿತ ಸೇವೆಗಾಗಿ 57 ಪೊಲೀಸ್ ಪದಕಗಳನ್ನು ಸ್ವೀಕರಿಸಲಿದೆ. ಐಟಿಬಿಪಿಯು ಶೌರ್ಯಕ್ಕಾಗಿ ಮೂರು ಪೊಲೀಸ್ ಪದಕಗಳು, ವಿಶಿಷ್ಟ ಸೇವೆಗಾಗಿ ಮೂರು ರಾಷ್ಟ್ರಪತಿಗಳ ಪೊಲೀಸ್ ಪದಕಗಳು ಮತ್ತು ಪ್ರತಿಭಾನ್ವಿತ ಸೇವೆಗಾಗಿ 12 ಪೊಲೀಸ್ ಪದಕಗಳು ಸೇರಿದಂತೆ ಒಟ್ಟು 18 ಪದಕಗಳನ್ನು ಪಡೆದುಕೊಂಡಿದೆ.
ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ಪ್ರಕಾರ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು (PPMG) ಈ ವರ್ಷ ಯಾರಿಗೂ ನೀಡಲಾಗುವುದಿಲ್ಲ. 2021 ರಲ್ಲಿ, ಪಿಪಿಎಂಜಿ ಅನ್ನು ಮರಣೋತ್ತರವಾಗಿ ಜಾರ್ಖಂಡ್‌ನ ಇಬ್ಬರು ಪೊಲೀಸ್ ಸಿಬ್ಬಂದಿಗೆ ನೀಡಲಾಯಿತು.
ಪೊಲೀಸರಿಗೆ ಶೌರ್ಯ ಮತ್ತು ಸೇವಾ ಪದಕಗಳಲ್ಲದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಗ್ನಿಶಾಮಕ ಸೇವೆಗಳ 42 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ನೀಡಲಾಗಿದೆ. 42 ಪದಕಗಳಲ್ಲಿ ಒಬ್ಬರಿಗೆ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು ನೀಡಲಾಗಿದ್ದು, ಇಬ್ಬರಿಗೆ ಶೌರ್ಯ ಮತ್ತು ಶೌರ್ಯಕ್ಕಾಗಿ ಅಗ್ನಿಶಾಮಕ ಸೇವಾ ಪದಕವನ್ನು ನೀಡಲಾಗಿದೆ.
ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕರ ಸಿಬ್ಬಂದಿಗೆ ಶೌರ್ಯಕ್ಕಾಗಿ ರಾಷ್ಟ್ರಪತಿ ಪದಕ, ವಿಶಿಷ್ಟ ಸೇವೆಗಳಿಗಾಗಿ ರಾಷ್ಟ್ರಪತಿ ಪದಕ, ಶೌರ್ಯ ಪದಕ ಮತ್ತು ಮೆರಿಟೋರಿಯಸ್ ಸೇವೆಗಳ ಪದಕಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೇಜಾನ್; ಟ್ವಿಟರ್ನಲ್ಲಿ ಟ್ರೆಂಡ್ ಆಗ್ತಿದೆ Boycott Amazon ಹ್ಯಾಷ್ಟ್ಯಾಗ್
Published On - 6:31 pm, Tue, 25 January 22