ಮದುವೆಯಲ್ಲಿ ಶೇ. 99ರಷ್ಟು ಪುರುಷರದೇ ತಪ್ಪಿರುತ್ತೆ; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್​ ಆತ್ಮಹತ್ಯೆ ಬಗ್ಗೆ ಕಂಗನಾ ರಣಾವತ್ ಪ್ರತಿಕ್ರಿಯೆ

| Updated By: Digi Tech Desk

Updated on: Dec 12, 2024 | 11:01 AM

ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಇದೀಗ ದೇಶಾದ್ಯಂತ ಸುದ್ದಿಯಾಗಿದೆ. ಮೆನ್​ಟೂ ಎಂಬ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಇದೀಗ ಈ ಪ್ರಕರಣದ ಬಗ್ಗೆ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ನೀಡಿರುವ ಪ್ರತಿಕ್ರಿಯೆ ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ.

ಮದುವೆಯಲ್ಲಿ ಶೇ. 99ರಷ್ಟು ಪುರುಷರದೇ ತಪ್ಪಿರುತ್ತೆ; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್​ ಆತ್ಮಹತ್ಯೆ ಬಗ್ಗೆ ಕಂಗನಾ ರಣಾವತ್ ಪ್ರತಿಕ್ರಿಯೆ
ಅತುಲ್ ಸುಭಾಷ್ - ಕಂಗನಾ ರಣಾವತ್
Follow us on

ನವದೆಹಲಿ: ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಶೇ. 99ರಷ್ಟು ಮದುವೆಗಳಲ್ಲಿ ಪುರುಷರೇ ತಪ್ಪಿತಸ್ಥರಾಗಿರುತ್ತಾರೆ. ಇದೊಂದು ಉದಾಹರಣೆಯನ್ನಿಟ್ಟುಕೊಂಡು ಎಲ್ಲ ಮಹಿಳೆಯರನ್ನೂ ದೂರುವಂತಿಲ್ಲ. ನಿಜವಾಗಿಯೂ ಮದುವೆಯಲ್ಲಿ ಪುರುಷರಿಂದ ತೊಂದರೆಗಳನ್ನು ಎದುರಿಸುತ್ತಿರುವ ಮಹಿಳೆಯರು ಸಾಕಷ್ಟು ಜನರಿದ್ದಾರೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

ಬೆಂಗಳೂರು ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪತ್ನಿಯ ಕಿರುಕುಳ ತಾಳಲಾರದೆ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ 24 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ತನಗಾದ ಸಂಕಷ್ಟವನ್ನು ವಿಡಿಯೋದಲ್ಲಿ ದಾಖಲಿಸಿದ್ದಾರೆ. ಈ ವೀಡಿಯೋ ಹೊರಬಿದ್ದ ನಂತರ ದೇಶಾದ್ಯಂತ ಅತುಲ್ ಸುಭಾಷ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ನಡೆದಿದ್ದು, ಪತ್ನಿಯ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಆತನಿಗೆ ಎಷ್ಟು ತೊಂದರೆಯಾಗಿರಬಹುದು ಎಂಬ ಚರ್ಚೆ ನಡೆದಿದೆ. ಪುರುಷ ಆತ್ಮಹತ್ಯೆ ಮಾಡಿಕೊಂಡಾಗ ಮಹಿಳೆಯ ವಿರುದ್ಧ ಕೇಸ್ ದಾಖಲಾಗುವುದು ಕಡಿಮೆ. ಆದರೆ, ಈ ಆತ್ಮಹತ್ಯೆ ಪತ್ರದಲ್ಲಿ ನಮೂದಿಸಿರುವಂತೆ ಅತುಲ್ ಸುಭಾಷ್​ಗೆ ಅವರ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ನೀಡಿದ ಹಿಂಸೆಗೆ ತಕ್ಕ ಶಿಕ್ಷೆ ಆಗಬೇಕೆಂಬ ಅಭಿಯಾನವೂ ಶುರುವಾಗಿದೆ. ಈ ಕುರಿತು ಈಗಾಗಲೇ ನಿಖಿತಾ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: Rape: 3 ವರ್ಷದ ಬಳಿಕ ಉತ್ತರ ಪ್ರದೇಶದ ಬಿಎಸ್​ಪಿ ಸಂಸದ ಅತುಲ್ ರೈ ಅತ್ಯಾಚಾರ ಆರೋಪದಿಂದ ಖುಲಾಸೆ

ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಅತುಲ್ ಆತ್ಮಹತ್ಯೆ ವಿಷಯ ನನ್ನನ್ನೂ ಆಘಾತಗೊಳಿಸಿದೆ. ಈ ವಿಷಯವನ್ನು ಪರಿಶೀಲಿಸಬೇಕು, ಜೊತೆಗೆ ಇಂತಹ ಘಟನೆಗಳನ್ನು ಎದುರಿಸಲು ಪ್ರತ್ಯೇಕ ಸಂಸ್ಥೆಯನ್ನು ರಚಿಸಬೇಕು ಎಂದು ಕಂಗನಾ ಹೇಳಿದ್ದಾರೆ. ಮದುವೆಯು ನಮ್ಮ ಭಾರತೀಯ ಸಂಪ್ರದಾಯದೊಂದಿಗೆ ಸಂಪರ್ಕ ಹೊಂದಿರುವವರೆಗೂ ಅದು ಉತ್ತಮವಾಗಿದೆ. ಆದರೆ ಕಮ್ಯುನಿಸಂ, ಸಮಾಜವಾದ ಮತ್ತು ಸ್ತ್ರೀವಾದದ ಧೋರಣೆಗಳು ಮದುವೆಯ ಸಾಂಪ್ರದಾಯಿಕತೆಯ ಹಳಿ ತಪ್ಪಿಸುತ್ತವೆ ಎಂದು ಕಂಗನಾ ಹೇಳಿದ್ದಾರೆ.


ಅತುಲ್ ಸುಭಾಷ್ ಬಳಿ ಅವರ ಹೆಂಡತಿ ಕೋಟ್ಯಂತರ ರೂಪಾಯಿ ಬೇಡಿಕೆ ಇಟ್ಟಿದ್ದು ಖಂಡನೀಯ. ಯುವಕರ ಮೇಲೆ ಅಂತಹ ಹೊರೆ ಬೀಳಬಾರದು. ಅವರು ತಮ್ಮ ಸಂಬಳದ ಮೂರರಿಂದ ನಾಲ್ಕು ಪಟ್ಟು ಹೆಚ್ಚು ನೀಡುತ್ತಿದ್ದರು ಎಂಬುದು ಗೊತ್ತಾಗಿದೆ. ಆದರೆ, ತಪ್ಪು ಮಾಡಿದ ಒಬ್ಬಳು ಮಹಿಳೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಪ್ರತಿದಿನ ಕಿರುಕುಳಕ್ಕೆ ಒಳಗಾಗುತ್ತಿರುವ ಮಹಿಳೆಯರ ಸಂಖ್ಯೆಯನ್ನು ನಿರಾಕರಿಸುವುದು ಸರಿಯಲ್ಲ. ಶೇಕಡ 99ರಷ್ಟು ಮದುವೆಗಳಲ್ಲಿ ಪುರುಷರ ತಪ್ಪೇ ಇರುತ್ತದೆ, ಹಾಗಾಗಿಯೇ ಇಂತಹ ತಪ್ಪುಗಳು ನಡೆಯುತ್ತವೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಇದಕ್ಕೆ ಹಲವರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಜೌನ್​ಪುರಕ್ಕೆ 40 ಬಾರಿ ಹೋಗಿದ್ದ ಅತುಲ್, ಬೆಂಗಳೂರು ಟೆಕ್ಕಿ ಸಾವಿನ ಬಳಿಕ ಪೋಷಕರು ಹೇಳಿದ್ದೇನು?

ತನ್ನ 24 ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಅತುಲ್ ಸುಭಾಷ್ ತನ್ನ ಪತ್ನಿಗೆ ಜೀವನಾಂಶವಾಗಿ 80,000 ರೂ ನೀಡುತ್ತಿದ್ದು, ಅದನ್ನು 2 ಲಕ್ಷಕ್ಕೆ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಜೌನ್‌ಪುರದ ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ಲಂಚ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಟೆಕ್ಕಿ ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:48 pm, Wed, 11 December 24