ಸರಗಳ್ಳ ಚಿನ್ನದ ಸರ ಕದ್ದು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಮಾಯವಾದ, ಶಾಕಿಂಗ್ ವಿಡಿಯೋ ನೋಡಿ
ರೈಲು ನಿಲ್ದಾಣದಿಂದ ನಿಧಾನವಾಗಿ ಚಲಿಸುತ್ತಿದ್ದಾಗ ವಲರ್ಮತಿ ಅವರ ಹಿಂದೆ ನಿಂತಿದ್ದ ಯುವಕ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ಚಲಿಸುತ್ತಿದ್ದ ರೈಲಿನಿಂದ ಹಾರಿ ಓಡಿ ಹೋಗಿದ್ದಾನೆ.
ಚೆನ್ನೈನಲ್ಲಿ (Chennai) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ (gold chain) ಕದ್ದಿದ್ದ ಸರಗಳ್ಳನೊಬ್ಬ (Chain snatcher) ಓಡುತ್ತಿದ್ದ ರೈಲಿನಿಂದ ಜಿಗಿದಿದ್ದಾನೆ. ನಂತರ ಆತ ಕ್ಷಣಾರ್ಧದಲ್ಲಿ ನಿಲ್ದಾಣದಿಂದ ಪರಾರಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಚೆನ್ನೈನ ತಿರುಮುಳ್ಳೆವಾಯಲ್ ಪ್ರದೇಶದ ವಲರ್ಮತಿ (43) ಎಂಬ ಮಹಿಳಾ ಪ್ರಯಾಣಿಕರಿಂದ ಚಿನ್ನದ ಸರವನ್ನು ಕಿತ್ತುಕೊಂಡು ಕಳ್ಳನೊಬ್ಬ ಪ್ಲಾಟ್‌ಫಾರ್ಮ್‌ನಲ್ಲಿ ಓಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈನ ತಿರುಮುಲೇವಾಯಲ್ ಪ್ರದೇಶದ ವಲರ್ಮತಿ ಅವರು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯವನ್ನು ಮುಗಿಸಿ.. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ, ರೈಲಿನಲ್ಲಿ ತಿರುವಳ್ಳೂರ್‌ಗೆ ಮರಳಿದರು. ಬೆಸಿನಾ ಸೇತುವೆ ನಿಲ್ದಾಣದಲ್ಲಿ ರೈಲು ನಿಂತಿತ್ತು.
Chennai crime: CCTV visuals shows an unidentified thief snatched a gold chain from a moving train near Basin bridge railway station. #Viralvideo #Chennai #TamilNadu #Chainsnatching #Chennaicentral #train pic.twitter.com/h0gFV4WYWG
— RAMKUMAR R (@imjournalistRK) June 24, 2023
ರೈಲು ನಿಲ್ದಾಣದಿಂದ ನಿಧಾನವಾಗಿ ಚಲಿಸುತ್ತಿದ್ದಾಗ ವಲರ್ಮತಿ ಅವರ ಹಿಂದೆ ನಿಂತಿದ್ದ ಯುವಕ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ಚಲಿಸುತ್ತಿದ್ದ ರೈಲಿನಿಂದ ಹಾರಿ ಓಡಿ ಹೋಗಿದ್ದಾನೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ, ಕಳ್ಳತನದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ