Jammu and Kashmir: ಅಮಿತ್​​ ಶಾ ಜಮ್ಮು-ಕಾಶ್ಮೀರಕ್ಕೆ ಕಾಲಿಡುವ ಕೆಲ ಗಂಟೆಗಳ ಮೊದಲೇ ನಾಲ್ವರು ಭಯೋತ್ಪಾದಕರ ಎನ್​​ಕೌಂಟರ್​​

|

Updated on: Jun 23, 2023 | 11:34 AM

4 ಭಯೋತ್ಪಾದಕರು ಭಾರತದ ಒಳಬರಲು ಪ್ರಯತ್ನ ಮಾಡಿದ್ದಾರೆ. ಇದನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಜಮ್ಮು-ಕಾಶ್ಮೀರದ (Jammu and Kashmir) ಕುಪ್ವಾರದಲ್ಲಿ 4 ಭಯೋತ್ಪಾದಕರು ಎನ್​​ಕೌಂಟರ್​​​ ಮಾಡಿದ್ದಾರೆ.

Jammu and Kashmir: ಅಮಿತ್​​ ಶಾ ಜಮ್ಮು-ಕಾಶ್ಮೀರಕ್ಕೆ ಕಾಲಿಡುವ ಕೆಲ ಗಂಟೆಗಳ ಮೊದಲೇ ನಾಲ್ವರು ಭಯೋತ್ಪಾದಕರ ಎನ್​​ಕೌಂಟರ್​​
ಸಾಂದರ್ಭಿಕ ಚಿತ್ರ
Follow us on

ಕುಪ್ವಾರ: 4 ಭಯೋತ್ಪಾದಕರು ಭಾರತದ ಒಳಗೆ ಬರಲು ಪ್ರಯತ್ನ ಮಾಡಿದ್ದಾರೆ. ಇದನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಜಮ್ಮು-ಕಾಶ್ಮೀರ(Jammu and Kashmir) ಕುಪ್ವಾರದಲ್ಲಿ 4 ಭಯೋತ್ಪಾದಕರು ಎನ್​​ಕೌಂಟರ್​​​ ಮಾಡಿದ್ದಾರೆ. ಇನ್ನೂ ಇಂದಿನಿಂದ ಅಮಿತ್​​ ಶಾ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.  ಭಾರೀ ಭದ್ರತೆಯನ್ನು ಕೂಡ ನೀಡಲಾಗಿದೆ. ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದು, ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ POJK ನಿಂದ ನಮ್ಮ ಕಡೆಗೆ ನುಸುಳಲು ಪ್ರಯತ್ನಿಸುತ್ತಿದ್ದ ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಕಾಲಾ ಜಂಗಲ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಎನ್​​ಕೌಂಟರ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಒಂದು ವಾರದ ಹಿಂದೆ ಇದೇ ರೀತಿಯಲ್ಲಿ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಸಮೀಪವಿರುವ ಜಮ್‌ಗುಂಡ್ ಕೆರಾನ್‌ನಲ್ಲಿ ಒಳನುಸುಳುವಿಕೆಯ ಪ್ರಯತ್ನ ಮಾಡಿದ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಎನ್​​ ಕೌಂಟರ್​​ ಮಾಡಿದ ನಂತರ ಈ ಘಟನೆ ನಡೆದಿದೆ.

ವಜ್ರ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್, ಮೇಜರ್ ಜನರಲ್ ಗಿರೀಶ್ ಕಾಲಿಯಾ, ಕಾರ್ಯಾಚರಣೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಈ ಒಪ್ಪಂದವನ್ನು ಅವರು ಮುರಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಗುಪ್ತಚರ ಮಾಹಿತಿಯನ್ನು ಕೂಡ ಅವರು ಪಡೆಯುತ್ತಿದ್ದಾರೆ.

ಇದನ್ನೂ ಓದಿ: Jammu And Kashmir: ಕುಪ್ವಾರಾದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ, ಐವರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರಕ್ಕೆ ಅಮಿತ್​​ ಶಾ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಜಮ್ಮು ಕಾಶ್ಮೀರ ಭೇಟಿ ಮಾಡಲಿದ್ದು ಎರಡು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಜಮ್ಮುವಿನ ತ್ರಿಕೂಟ ನಗರಕ್ಕೆ ಭೇಟಿ ನೀಡಲಿದ್ದು. ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 11.15ಕ್ಕೆ ಜೆಡಿಎ ಮೈದಾನದಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ. ಸಾಂಬಾದಲ್ಲಿ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ಶಂಕುಸ್ಥಾಪನೆ ಮಾಡಲಿದ್ದಾರೆ. ಮಜಿನ್‌ನಲ್ಲಿರುವ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಅಮೀತ್​​ ಶಾ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದರ ಜತೆಗೆ ಅಮರನಾಥ ಯಾತ್ರೆಯ ಭದ್ರತಾ ವ್ಯವಸ್ಥೆಗಳನ್ನು ಕೂಡ ಪರಿಶೀಲನೆ ಮಾಡಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Fri, 23 June 23