AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ರಿಯಲ್ ಲೈಫ್ ದೇವದಾಸ್​: ಬಿಹಾರ ಬಿಜೆಪಿ ಕಚೇರಿ ಎದುರು ಹೀಗೊಂದು ಪೋಸ್ಟರ್

ಪಾಟ್ನಾದ ಬೀದಿಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಪೋಸ್ಟರ್​ಗಳು ರಾರಾಜಿಸುತ್ತಿವೆ. ಈ ಪೋಸ್ಟರ್​ಗಳನ್ನು ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಕಿದ್ದಾರೆ.

ರಾಹುಲ್ ಗಾಂಧಿ ರಿಯಲ್ ಲೈಫ್ ದೇವದಾಸ್​: ಬಿಹಾರ ಬಿಜೆಪಿ ಕಚೇರಿ ಎದುರು ಹೀಗೊಂದು ಪೋಸ್ಟರ್
ರಾಹುಲ್ ಗಾಂಧಿ ಪೋಸ್ಟರ್
Follow us
ನಯನಾ ರಾಜೀವ್
|

Updated on: Jun 23, 2023 | 10:29 AM

ಪಾಟ್ನಾದ ಬೀದಿಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಪೋಸ್ಟರ್​ಗಳು ರಾರಾಜಿಸುತ್ತಿವೆ. ಈ ಪೋಸ್ಟರ್​ಗಳನ್ನು ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಕಿದ್ದಾರೆ. ಈ ಪೋಸ್ಟರ್​ಗಳ ಮೂಲಕವೇ ಪರಸ್ಪರ ಟಾರ್ಗೆಟ್ ಮಾಡುತ್ತಿದ್ದಾರೆ. ಬಿಹಾರದ ಬಿಜೆಪಿ ಕಚೇರಿಯ ಹೊರಗೆ ಹಾಕಲಾದ ಪೋಸ್ಟರ್​ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ(Rahul Gandhi)ಯನ್ನು ದೇವದಾಸ್​ನಂತೆ ತೋರಿಸಲಾಗಿದೆ.

ಪೋಸ್ಟರ್​ನ ಮೇಲ್ಭಾಗದಲ್ಲಿ ಶಾರೂಖ್ ಖಾನ್ ಚಿತ್ರ ಇರಿಸಲಾಗಿದ್ದು, ಕೆಳಭಾಗದಲ್ಲಿ ರಾಹುಲ್ ಗಾಂಧಿ ಚಿತ್ರ ಇದೆ. ರೀಲ್ ಲೈಫ್ ದೇವದಾಸ್ ಶಾರೂಖ್ ಖಾನ್ , ರಿಯಲ್ ಲೈಫ್ ದೇವದಾಸ್ ರಾಹುಲ್ ಗಾಂಧಿ ಎಂದು ಬರೆಯಲಾಗಿದೆ.

ಮಮತಾ ಬ್ಯಾನರ್ಜಿ ಬಂಗಾಳವನ್ನು ತೊರೆಯಿರಿ ಎಂದು ಹೇಳಿದರು, ಕೇಜ್ರಿವಾಲ್ ದೆಹಲಿ ಹಾಗೂ ಪಂಜಾಬ್ ಬಿಡಿ ಎಂದು ಹೇಳಿದರು, ಲಾಲು, ನಿತೀಶ್​ ಬಿಹಾರವನ್ನು ಬಿಡಿ ಎಂದು ಹೇಳಿದರು, ಅಖಿಲೇಶ್ ಉತ್ತರ ಪ್ರದೇಶವನ್ನು ಬಿಡಿ ಎಂದರು, ಸ್ಟಾಲಿನ್ ತಮಿಳುನಾಡು ಬಿಡಿ ಎಂದರು ಎಲ್ಲರೂ ಒಟ್ಟಾಗಿ ಕಾಂಗ್ರೆಸ್​ ಹಾಗೂ ರಾಜಕೀಯ ಎರಡನ್ನೂ ಬಿಡಿ ಎಂದು ಹೇಳುವ ಸಮಯ ಸನ್ನಿಹಿತವಾಗಿದೆ ಎಂದು ಬರೆಯಲಾಗಿದೆ.

ಮತ್ತಷ್ಟು ಓದಿ: Rahul Gandhi: ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ

ಆರ್​ಜೆಡಿ ಬಿಜೆಪಿ ಪೋಸ್ಟರ್ ವಿರುದ್ಧ ವಾಗ್ದಾಳಿ ನಡೆಸಿದೆ, ಆರ್​ಜೆಡಿ ಕಚೇರಿಯ ಹೊರಗೆ ವಿಷ್ಣುವಿನ ಪೋಸ್ಟರ್ ಹಾಕಲಾಗಿದೆ. ವಿಷ್ಣುವಿನ ಚಿತ್ರದ ಸುತ್ತ 18 ನಾಯಕರ ಚಿತ್ರವನ್ನು ಇರಿಸಲಾಗಿದೆ.

ಆ ಪೋಸ್ಟರ್​ನಲ್ಲಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜುನ ಖರ್ಗೆ, ದೀಪಾಂಕರ್ ಭಟ್ಟಾಚಾರ್ಯ, ಸೀತಾರಾಮ್ ಯೆಚೂರಿ, ಶರದ್ ಪವಾರ್ ಅವರ ಜೊತೆ ವಿಷ್ಣು ಅವರ ಚಿತ್ರ ಹಾಕಲಾಗಿದ್ದು, ಇನ್ನೊಂದು ಕಡೆ ವಿಷ್ಣು ಅವರ ಪಕ್ಕದಲ್ಲಿ ರಾಹುಲ್ ಗಾಂಧಿ, ನಂತರ ತೇಜಸ್ವಿ ಯಾದವ್, ಅಖಿಲೇಶ್ ಅವರ ಚಿತ್ರ ಹಾಕಲಾಗಿದೆ. ಯಾದವ್, ಮಮತಾ ಬ್ಯಾನರ್ಜಿ, ಸ್ಟಾಲಿನ್, ಹೇಮಂತ್ ಸೊರೆನ್, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಹಾಕಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ