AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನ ಬಲವಂತಕ್ಕೆ ನೊಂದು ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುತ್ರಿ; ಅಂಥದ್ದೇನು ಹೇಳಿದರು ಪಾಲಕರು?

ಈ ಹುಡುಗಿಗೆ ತನ್ನ ಅಪ್ಪ-ಅಮ್ಮನ ಮೇಲೆ ಕೋಪ ಕೂಡ ಬಂದಿತ್ತು. ಬಸ್​​ನಲ್ಲಿ ಬರುತ್ತಿದ್ದಾಗಲೇ ಅವಳು ತನ್ನ ಮೊಬೈಲ್​​ನ್ನು ಎಸೆದಿದ್ದಳು. ಮರುದಿನವೇ ಪಾಲಕರು ಹೊಸ ಮೊಬೈಲ್​ ತಂದು ಕೊಟ್ಟಿದ್ದರು. 

ಅಪ್ಪ-ಅಮ್ಮನ ಬಲವಂತಕ್ಕೆ ನೊಂದು ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪುತ್ರಿ; ಅಂಥದ್ದೇನು ಹೇಳಿದರು ಪಾಲಕರು?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 17, 2022 | 11:43 AM

Share

ಆಂಧ್ರಪ್ರದೇಶದ ವಿಜಯನಗರಂನ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್​ ನಾಲೇಡ್ಜ್​ ಟೆಕ್ನಾಲಜೀಸ್​ (ಐಐಐಟಿ-ಶ್ರೀಕಾಕುಲಂ)ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 16ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಕಾಲೇಜಿನ ಹಾಸ್ಟೆಲ್​ ಕೋಣೆಯಲ್ಲೇ ಫೆ.16ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಹಪಾಠಿಗಳು ಬುಧವಾರ ಬಂದು ಬಾಗಿಲು ಬಡಿದರೂ ಯುವತಿ ಬಾಗಿಲು ತೆರೆಯಲಿಲ್ಲ. ಅನುಮಾನ ಬಂದು ಕಾಲೇಜಿನ ಸಿಬ್ಬಂದಿಗೆ ತಿಳಿಸಲಾಯಿತು. ಅವರೆಲ್ಲ ಬಂದು ಬಾಗಿಲು ಒಡೆದು ನೋಡಿದರೆ, ವಿದ್ಯಾರ್ಥಿನಿ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು.

ಮೃತ ಹುಡುಗಿಯ ಹೆಸರು ಕೊಂಡಪಲ್ಲಿ ಮನೀಶಾ ಅಂಜು. ಈಕೆ ವಿಜಯನಗರಂನ ನೆಲ್ಲಿಮಾರ್ಲ ನಿವಾಸಿ. ಐಐಐಟಿ-ಶ್ರೀಕಾಕುಲಂನಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದಳು. ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಪಾಲಕರು ಮಾಡಿದ ಒತ್ತಾಯ ಎಂದು ಹೇಳಲಾಗಿದೆ.  ಪ್ರಸಕ್ತ ಶೈಕ್ಷಣಿಕ ವರ್ಷ ಶುರುವಾದಾಗಿನಿಂದ ಇಲ್ಲಿಯವರೆಗೂ ಆಕೆ ಮನೆಯಲ್ಲೇ ಮನೆಯಲ್ಲೇ ಇದ್ದುಕೊಂಡು ಆನ್​ಲೈನ್ ಕ್ಲಾಸ್​ ಮೂಲಕ ಶಿಕ್ಷಣ ಪಡೆಯುತ್ತಿದ್ದಳು. ಆದರೆ ಇದೀಗ ಕಾಲೇಜುಗಳೆಲ್ಲ ಶುರುವಾದ ಹಿನ್ನೆಲೆಯಲ್ಲಿ ಪಾಲಕರು, ನೀನು ಕಾಲೇಜಿಗೇ ಹೋಗಿ, ಆಫ್​ಲೈನ್​ ಕ್ಲಾಸ್​ಗೆ ಹಾಜರಾಗು ಎಂದು ಹೇಳಿದ್ದಾರೆ. ಅವಳಿಗೆ ಇಷ್ಟವಿಲ್ಲದೆ ಇದ್ದರೂ, ಬಲವಂತವಾಗಿ ಕರೆತಂದು ಹಾಸ್ಟೆಲ್​​ನಲ್ಲಿ ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಕೊವಿಡ್​ 19 ಜಾಸ್ತಿ ಇದ್ದಾಗ ಈ ಕಾಲೇಜು ಆನ್​ಲೈನ್​ ಕ್ಲಾಸ್ ಪ್ರಾರಂಭ ಮಾಡಿತ್ತು. ಇದೀಗ ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಫ್​ಲೈನ್​ ಕ್ಲಾಸ್​ಗೆಂದು ಕಾಲೇಜಿಗೆ ಬೇಕಾದರೂ ಬರಬಹುದು. ಹಾಗೊಮ್ಮೆ ಇಲ್ಲಿ ಬರಲು ತೊಂದರೆಯಿದ್ದವರು, ಇಷ್ಟವಿಲ್ಲದೆ ಇದ್ದವರು ಮನೆಯಲ್ಲೇ ಇದ್ದು, ಪ್ರತಿದಿನ ಆನ್​ಲೈನ್​ ಕ್ಲಾಸ್​ ಅಟೆಂಡ್ ಆಗಬೇಕು ಎಂದು ಕಾಲೇಜು ಹೇಳಿತ್ತು. ಹುಡುಗಿಗೆ ಮನೆಯಲ್ಲೇ ಇದ್ದು ಆನ್​ಲೈನ್​ ಕ್ಲಾಸ್​ ತೆಗೆದುಕೊಳ್ಳುವ ಆಸೆ. ಆದರೆ ಪಾಲಕರಿಗೆ ಆಕೆ ಕಾಲೇಜಿಗೆ ಹೋಗಲಿ ಎಂಬ ಬಯಕೆ. ಅವರೇ ಬಲವಂತವಾಗಿ ಹಾಸ್ಟೆಲ್​​ಗೆ ಕರೆತಂದು ಬಿಟ್ಟಿದ್ದರು. ಇದರಿಂದಾಗಿ ಹುಡುಗಿಗೆ ಕೋಪ ಕೂಡ ಬಂದಿತ್ತು. ಬಸ್​​ನಲ್ಲಿ ಬರುತ್ತಿದ್ದಾಗಲೇ ಅವಳು ತನ್ನ ಮೊಬೈಲ್​​ನ್ನು ಎಸೆದಿದ್ದಳು. ಮರುದಿನವೇ ಪಾಲಕರು ಹೊಸ ಮೊಬೈಲ್​ ತಂದು ಕೊಟ್ಟಿದ್ದರು.  ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಸಿಎಂ ಕೆ ಚಂದ್ರಶೇಖರರಾವ್ 68ನೆ ಹುಟ್ಟುಹಬ್ಬ: ಕೋಳಿ ವಿತರಣೆ ಮಾಡಿದ ಕರೀಂನಗರ ಮೇಯರ್​!

Published On - 9:51 am, Thu, 17 February 22

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!