Student Ragging: ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್ ತಡೆಯಲಾಗದೇ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಜಿಗಿದ ಜೂನಿಯರ್ ವಿದ್ಯಾರ್ಥಿ
ಜೂನಿಯರ್‌ಗಳಿಗೆ ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ ಐವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ದಿಬ್ರುಗಢ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಜೂನಿಯರ್ ವಿದ್ಯಾರ್ಥಿ ಆನಂದ್ ಶರ್ಮಾ, ತನ್ನ ಸಿನಿಯರ್ಗಳು ರ್ಯಾಗಿಂಗ್ ತಡೆಯಲಾಗದೇ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಹಾರಿದ್ದಾನೆ ಎಂದು ಹೇಳಲಾಗಿದೆ.
ಗುವಾಹಟಿ: ದಿಬ್ರುಗಢ ವಿಶ್ವವಿದ್ಯಾನಿಲಯದಲ್ಲಿ ಜೂನಿಯರ್‌ಗಳಿಗೆ ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ ಐವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ದಿಬ್ರುಗಢ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಜೂನಿಯರ್ ವಿದ್ಯಾರ್ಥಿ ಆನಂದ್ ಶರ್ಮಾ, ತನ್ನ ಸಿನಿಯರ್ಗಳು ರ್ಯಾಗಿಂಗ್ ತಡೆಯಲಾಗದೇ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಹಾರಿದ್ದಾನೆ ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿ ಆನಂದ್ ಶರ್ಮಾನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯಾರ್ಥಿಯ ಕುಟುಂಬದವರ ದೂರಿನ ಮೇರೆಗೆ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ನಾಲ್ವರು ಹಾಲಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ರೀತಿ ರ‍್ಯಾಗಿಂಗ್ ಎಲ್ಲ ಮಾಡಬಾರದು, ಇದು ತಪ್ಪು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ದಿಬ್ರುಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ರ‍್ಯಾಗಿಂಗ್ ಆರೋಪದ ಪ್ರಕರಣ ಗಮನಕ್ಕೆ ಬಂದಿದೆ. ತೀವ್ರ ನಿಗಾ ವಹಿಸಲಾಗಿದೆ ಮತ್ತು ಮುಂದಿನ ಕ್ರಮದ ಬಗ್ಗೆ ಜಿಲ್ಲಾ ಆಡಳಿತದೊಂದಿಗೆ ಮಾತನಾಡಲಾಗಿದೆ. ಆರೋಪಿಗಳನ್ನು ಬಂಧಿಸುವಂತೆ, ಗಾಯಗೊಂಡಿರುವ ವಿದ್ಯಾರ್ಥಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಅವನೊಂದಿಗೆ ಇನ್ನೂ ಇಬ್ಬರು ಜೂನಿಯರ್‌ಗಳಿದ್ದರು, ಅವರು ಕೂಡ ರ್ಯಾಗಿಂಗ್ಗೆ ಬಲಿಯಾಗಿದ್ದಾರೆ. ಈ ಬಗ್ಗೆ ವಿಶ್ವವಿದ್ಯಾನಿಲಯವು ಗಮನಿಸಿದೆ, ಆದರೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
It has come to notice that a Dibrugarh University student is hurt in an alleged case of ragging. Close watch maintained & followup action coordinated with district admn. Efforts on to nab the accused, victim being provided medical care. Appeal to students, say NO to Ragging.
— Himanta Biswa Sarma (@himantabiswa) November 27, 2022
ಮೂಲಗಳ ಪ್ರಕಾರ, ಗಾಯಗೊಂಡಿರುವ ವಿದ್ಯಾರ್ಥಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದಿಬ್ರುಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಗಾಯಗೊಂಡಿರುವ ವಿದ್ಯಾರ್ಥಿಯ ತಾಯಿ ಸರಿತಾ ಶರ್ಮಾ, ತನ್ನ ಮಗನಿಗೆ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ನನ್ನ ಮಗನ್ನು ಕೊಲ್ಲಲು ಪ್ರಯತ್ನಿಸಿ, ಹಣ ಲೂಟಿ ಮಾಡಿ, ಮತ್ತು ಅವನ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: Ragging | ಜೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ್ದಕ್ಕೆ ಅರೆಸ್ಟ್ ಆದ್ರು 11 ಸೀನಿಯರ್ಸ್
ನನ್ನ ಮಗ ಕಳೆದ ನಾಲ್ಕು ತಿಂಗಳಿಂದ ತನಗೆ ಹಿರಿಯ ವಿದ್ಯಾರ್ಥಿಗಳು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದ್ದ, ನಿನ್ನೆ ರಾತ್ರಿ, ನಾನು ಹಾಸ್ಟೆಲ್‌ಗೆ ಹೋಗುತ್ತೇನೆ ಎಂದು ನನಗೆ ಕರೆ ಮಾಡಿದ್ದ, ಆದರೆ ಅವರು ನನ್ನ ಮಗನಿಗೆ ರಾತ್ರಿಯಿಂದ ಬೆಳಿಗ್ಗೆ ತನಕ ಅವರು ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾನೆ. ನನ್ನ ಮಗನ ಮೂಳೆ ಮುರಿದಿದ್ದಾರೆ, ಕಾಲು ಮತ್ತು ಎದೆಯ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಹೇಳಿದರು.
ಬಂಧಿತ ಆರೋಪಿಗಳು ಹಳೆಯ ವಿದ್ಯಾರ್ಥಿ ರಾಹುಲ್ ಚೆಟ್ರಿ ಮತ್ತು ಪ್ರಸ್ತುತ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತೀರುವ ನಾಲ್ವರು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಕ್ರಿಮಿನಲ್ ಪಿತೂರಿ, ವ್ಯಕ್ತಿಯನ್ನು ಅಕ್ರಮವಾಗಿ ತಡೆಯುವುದು, ಡಕಾಯಿತಿ, ಕೊಲೆ ಯತ್ನ ಮತ್ತು ಕಾನೂನುಬಾಹಿರ ಸಭೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆನಂದ್ ಶರ್ಮಾ ಅವರು ರ್ಯಾಗಿಂಗ್ ಕುರಿತು ವಿಶ್ವವಿದ್ಯಾನಿಲಯಕ್ಕೆ ದೂರು ನೀಡುತ್ತಿದ್ದರು ಮತ್ತು ಈ ವರ್ಷದ ನವೆಂಬರ್ 17 ರಂದು “ಪದ್ಮನಾಥ ಗೊಹೈನ್ ಬರುವಾ ಛತ್ರ ನಿವಾಸ” (ಪಿಎನ್‌ಜಿಬಿಸಿಎನ್ ಹಾಸ್ಟೆಲ್) ನ ‘ಸಿ’ ಬ್ಲಾಕ್‌ನ ವಾರ್ಡನ್‌ಗೆ ಲಿಖಿತ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ