Maharashtra: ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ, ಕಾಪಾಡಿದ ಮತ್ತೊಂದು ಶ್ವಾನ
ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಎರಡು ಶ್ವಾನಗಳು ಸೇರಿ ಓಡಿಸಿರುವ ಘಟನೆ ಮಹಾರಾಷ್ಟ್ದದ ನಾಸಿಕ್ನಲ್ಲಿ ನಡೆದಿದೆ.
ನಾಸಿಕ್, ಜು.28: ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಎರಡು ಶ್ವಾನಗಳು ಸೇರಿ ಓಡಿಸಿರುವ ಘಟನೆ ಮಹಾರಾಷ್ಟ್ದದ ನಾಸಿಕ್ನಲ್ಲಿ ನಡೆದಿದೆ. ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದಾಗ ಪಕ್ಕದಲ್ಲೇ ಇದ್ದ ಮತ್ತೊಂದು ನಾಯಿ, ದಾಳಿಗೊಳಗಾಗಿದ್ದ ನಾಯಿಯ ಕೂಗು ಕೇಳಿ ಓಡಿ ಬಂದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ.
ನಾಸಿಕ್‌ನ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ, ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿರುವಂತೆ ವಿಡಿಯೋದಲ್ಲಿ ಚಿರತೆಯು ಮನೆ ಆವರಣದಿಂದ ಶ್ವಾನ ಮಲಗಿರುವ ಕಡೆಗೆ ಬರುವುದನ್ನು ನೋಡಬಹುದು. ಮನೆಯ ದ್ವಾರದ ಬಳಿ ಮಲಗಿದ್ದ ಶ್ವಾನದ ಬಳಿ ನಿಧಾನವಾಗಿ ಹೆಜ್ಜೆ ಹಾಕುತ್ತ ಬಂದು ಥಟ್ಟನೆ ದಾಳಿ ಮಾಡಿದೆ. ಈ ನಾಯಿ ಕೂಗು ಕೇಳಿ ಪಕ್ಕದಲ್ಲೇ ಮಲಗಿದ್ದ ಮತ್ತೊಂದು ಶ್ವಾನ ಚಿರತೆಯನ್ನು ಓಡಿಸಲು ಮುಂದಾಗಿದೆ. ನಂತರ ಎರಡು ನಾಯಿಗಳು ಸೇರಿ ಚಿರತೆಯನ್ನು ಮನೆಯ ಆವರಣದಿಂದ ಓಡಿಸಿದೆ.
#महाराष्ट्र: नाशिक में कुत्ते पर तेंदुवे का हमला।#Maharashtra #Nashik #Leopard #ATTACK #Dog #CCTV pic.twitter.com/Wce1PF0yCr
— Sanjay ᗪєsai ?? (@sanjay_desai_26) July 26, 2023
ಇದನ್ನೂ ಓದಿ: ಒಂದೂವರೆ ತಾಸು ಮುಂಚಿತವಾಗಿ ಬಂದು 45 ಪ್ರಯಾಣಿಕರನ್ನು ಬಿಟ್ಟು ಹೊರಟೇ ಬಿಡ್ತು ಗೋವಾ ಎಕ್ಸ್ಪ್ರೆಸ್ ರೈಲು
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿ ವೃಶಾಲಿ ಗಾಡೆ ಅವರು ಸುದ್ದಿ ಸಂಸ್ಥೆ ಎಎನ್ಐಗೆ ನೀಡಿರುವ ಹೇಳಿಕೆ ಪ್ರಕಾರ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿ ಪ್ರಭಾವ್ಕರ್ ಮನುಡೆ ಎಂಬವವರ ಮನೆಗೆ ಈ ಚಿರತೆ ಬಂದಿದೆ. ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದೆ. ಮತ್ತೊಂದು ಶ್ವಾನ ದಾಳಿಗೊಳಗಾಗಿದ್ದ ನಾಯಿಯ ಕೂಗು ಕೇಳಿ ಚಿರತೆಯನ್ನು ಅಲ್ಲಿಂದ ಓಡಿಸಿದೆ. ಚಿರತೆ ಪಕ್ಕದಲ್ಲೇ ಇರುವ ಹೊಲದ ಮೂಲಕ ಈ ಪ್ರದೇಶಕ್ಕೆ ಬಂದಿದೆ ಎಂದು ಶಂಕಿಸಲಾಗಿದೆ. ಇನ್ನೂ ಈ ಚಿರತೆಯನ್ನು ಪತ್ತೆ ಮಾಡಲು ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ಚಿರತೆ ಮನುಷ್ಯರ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ