Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡಿ ಅಧಿಕಾರಿ ಸೋಗಿನಲ್ಲಿ ರಾತ್ರಿ ಶಾಸಕರೊಬ್ಬರ ಮನೆಗೆ ಬಂದು ಆಸ್ತಿ ಬಗ್ಗೆ ತನಿಖೆ ನಡೆಸುತ್ತಿದ್ದ ವ್ಯಕ್ತಿಯ ಬಂಧನ

ಓರ್ವ ವ್ಯಕ್ತಿ ತಾನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿ ಎಂದು ಹೇಳಿಕೊಂಡು ಶಾಸಕರೊಬ್ಬರ ಮನೆಗೆ ನುಗ್ಗಿದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈ ವ್ಯಕ್ತಿ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಯಂತೆ ನಟಿಸಿದ್ದು, ಶಾಸಕರನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ ಅವರ ಆಸ್ತಿ ಮತ್ತು ಆದಾಯದ ವಿವರಗಳನ್ನು ಕೇಳಿದ್ದಾರೆ. ಭಾನುವಾರ ತಡರಾತ್ರಿ ಪೊಲೀಸರು ಈ ನಕಲಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಆದರೆ, ಈ ವ್ಯಕ್ತಿಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬಂಧನ
Follow us
ನಯನಾ ರಾಜೀವ್
|

Updated on: Oct 23, 2023 | 11:56 AM

ಓರ್ವ ವ್ಯಕ್ತಿ ತಾನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿ ಎಂದು ಹೇಳಿಕೊಂಡು ಶಾಸಕರೊಬ್ಬರ ಮನೆಗೆ ನುಗ್ಗಿದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈ ವ್ಯಕ್ತಿ, ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಯಂತೆ ನಟಿಸಿದ್ದು, ಶಾಸಕರನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ ಅವರ ಆಸ್ತಿ ಮತ್ತು ಆದಾಯದ ವಿವರಗಳನ್ನು ಕೇಳಿದ್ದಾರೆ. ಭಾನುವಾರ ತಡರಾತ್ರಿ ಪೊಲೀಸರು ಈ ನಕಲಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಆದರೆ, ಈ ವ್ಯಕ್ತಿಯ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.

ಶಾಸಕರ ಮನೆ ತಲುಪಿದ ನಕಲಿ ಇಡಿ ಅಧಿಕಾರಿ ಓಲ್ಗರೆಟ್ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಶಾಸಕ ಶಿವಶಂಕರ್ ಪ್ರಕಾರ, ಕಳೆದ ಭಾನುವಾರ ರಾತ್ರಿ ವ್ಯಕ್ತಿಯೊಬ್ಬ ಸ್ಕೂಟರ್​ನಲ್ಲಿ ಅವರ ಮನೆಗೆ ಬಂದಿದ್ದಾನೆ. ವ್ಯಕ್ತಿ ತನ್ನನ್ನು ತಾನು ಚೆನ್ನೈನ ಕಚೇರಿಯ ಇಡಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಈ ವೇಳೆ ವ್ಯಕ್ತಿಯೊಬ್ಬರು ಶಾಸಕರ ಬಳಿ ಕಳೆದ ಕೆಲವು ವರ್ಷಗಳಲ್ಲಿ ಗಳಿಸಿದ ಆಸ್ತಿ ವಿವರ ಕೇಳಿದ್ದಾರೆ. ಆರೋಪಿಯು ಮನೆಗೆ ಬಂದಿದ್ದ ಸ್ಕೂಟರ್ ಅನ್ನು ಸಹ ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು ಎಂದು ಶಾಸಕರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ಸಿಇಒಗೆ ಬೆದರಿಕೆ ಹಾಕಿದ ನಕಲಿ ಪಿಎಂಒ ಅಧಿಕಾರಿ

ಆರೋಪಿಯ ಬಳಿ ಗುರುತಿನ ಚೀಟಿ ಇರಲಿಲ್ಲ ಇದೇ ವೇಳೆ ವ್ಯಕ್ತಿಯ ಮುಖಭಾವ ನೋಡಿ ಶಾಸಕ ಶಿವಶಂಕರ್‌ಗೆ ಅನುಮಾನ ಬಂದಿದ್ದು, ಬಳಿಕ ಶಾಸಕರು ವ್ಯಕ್ತಿ ಬಳಿ ಗುರುತಿನ ಚೀಟಿ ಕೇಳಿದ್ದಾರೆ. ಈ ಕುರಿತು ಆರೋಪಿಯು ಪ್ರಸ್ತುತ ತನ್ನ ಬಳಿ ಗುರುತಿನ ಚೀಟಿ ಇಲ್ಲ ಎಂದು ಹೇಳಿದ್ದ, ಕಚೇರಿಯ ದೂರವಾಣಿ ಸಂಖ್ಯೆ ಕೇಳಿದರೂ ಕೊಡಲು ನಿರಾಕರಿಸಿದ್ದ. ಆಗ ಶಾಸಕರ ಅನುಮಾನ ನಂಬಿಕೆಯಾಗಿ ಬದಲಾಗಿದ್ದು, ತಡಮಾಡದೆ ರೆಡ್ಡಿಪಾಳ್ಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಆರೋಪಿಗಳು 7 ಶಾಸಕರನ್ನು ಸಂಪರ್ಕಿಸಿದ್ದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಶಾಸಕರ ಮನೆಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ತನ್ನನ್ನು ಮಾತ್ರವಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರನ್ನು ಒಳಗೊಂಡ ಪುದುಚೇರಿಯ ಏಳು ಶಾಸಕರನ್ನೂ ಸಂಪರ್ಕಿಸಿದ್ದಾನೆ ಎಂದು ಶಾಸಕ ಶಿವಶಂಕರ್ ಹೇಳಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?

Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ

ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ

ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ

‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ

ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ

ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ

ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ