ನನಗೆ ಮೋಸ ಮಾಡಿದವರಿಗೆ ಪಕ್ಷದ ನಾಯಕರು ಸಹಾಯ ಮಾಡುತ್ತಿದ್ದಾರೆ, ಬಿಜೆಪಿ ತೊರೆದಿದ್ದಕ್ಕೆ ಕಾರಣ ಹೇಳಿದ ನಟಿ ಗೌತಮಿ

25 ವರ್ಷಗಳ ಕಾಲ ಬಿಜೆಪಿ ಸದಸ್ಯೆಯಾಗಿದ್ದ ತಮಿಳು ನಟಿ ಗೌತಮಿ ತಡಿಮಲ್ಲ(Gautami Tadimalla) ಅವರು ಸೋಮವಾರ (ಅಕ್ಟೋಬರ್ 23) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕಾರಣವನ್ನು ಕೂಡ ತಿಳಿಸಿದ್ದಾರೆ. ಗೌತಮಿ ಪಕ್ಷದ ಬಗೆಗೆ ನನಗೆ ಗೌರವವಿದೆ. ಆದರೆ ಬಿಜೆಪಿಯಿಂದ ನನಗೆ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದು ಹೇಳಿದ್ದಾರೆ, ಇದರಿಂದಾಗಿ ತನ್ನ ಜೀವನದ ದೊಡ್ಡ ಬಿಕ್ಕಟ್ಟಿನಲ್ಲಿ ಸಿಲುಕಿದೆ. ನನಗೆ ಮೋಸ ಮಾಡಿದವರನ್ನು ಪಕ್ಷದ ನಾಯಕರು ಬೆಂಬಲಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಗೌತಮಿ ತಡಿಮಲ್ಲ
Follow us
ನಯನಾ ರಾಜೀವ್
|

Updated on: Oct 23, 2023 | 10:41 AM

25 ವರ್ಷಗಳ ಕಾಲ ಬಿಜೆಪಿ ಸದಸ್ಯೆಯಾಗಿದ್ದ ತಮಿಳು ನಟಿ ಗೌತಮಿ ತಡಿಮಲ್ಲ(Gautami Tadimalla) ಅವರು ಸೋಮವಾರ (ಅಕ್ಟೋಬರ್ 23) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕಾರಣವನ್ನು ಕೂಡ ತಿಳಿಸಿದ್ದಾರೆ. ಗೌತಮಿ ಪಕ್ಷದ ಬಗೆಗೆ ನನಗೆ ಗೌರವವಿದೆ. ಆದರೆ ಬಿಜೆಪಿಯಿಂದ ನನಗೆ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದು ಹೇಳಿದ್ದಾರೆ, ಇದರಿಂದಾಗಿ ತನ್ನ ಜೀವನದ ದೊಡ್ಡ ಬಿಕ್ಕಟ್ಟಿನಲ್ಲಿ ಸಿಲುಕಿದೆ. ನನಗೆ ಮೋಸ ಮಾಡಿದವರನ್ನು ಪಕ್ಷದ ನಾಯಕರು ಬೆಂಬಲಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟನ್ನು ಎದುರಿಸುತ್ತಿದ್ದೇನೆ. ಪಕ್ಷದ ನಾಯಕರಿಂದ ನನಗೆ ಯಾವುದೇ ಬೆಂಬಲ ಸಿಕ್ಕಿಲ್ಲ. ನನಗೆ ದ್ರೋಹ ಬಗೆದಿದ್ದಲ್ಲದೆ ನನ್ನ ಜೀವನದ ಸಂಪಾದನೆಯನ್ನೂ ಕಿತ್ತುಕೊಂಡಿರುವ ಇಂತಹ ವ್ಯಕ್ತಿಗೆ ಸಹಾಯ ಮಾಡಿ ಬೆಂಬಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಳಗಪ್ಪನ್ ಬಗ್ಗೆ ನಟಿ ಮಾತನಾಡಿದ್ದು, ಹಣ, ಆಸ್ತಿ, ದಾಖಲೆ ಪತ್ರ ಪಡೆದು ವಂಚಿಸಿದ್ದಾರೆ. ತಮಿಳುನಾಡು ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ಮೇಲೆ ನಂಬಿಕೆಯಿದ್ದು, ತನಗೆ ಹಾಗೂ ತನ್ನ ಮಗುವಿನ ಭವಿಷ್ಯಕ್ಕಾಗಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ಎಬಿಪಿ-ಸಿ ವೋಟರ್ ಸಮೀಕ್ಷೆ: ವಿಧಾನಸಭಾ ಚುನಾವಣೆಯಲ್ಲಿ ಸಂಸದರನ್ನು ಕಣಕ್ಕಿಳಿಸುವ ಬಿಜೆಪಿಯ ತಂತ್ರ ವರ್ಕ್​ ಆಗುತ್ತಾ?

ವೇಲಾಚೇರಿಯಲ್ಲಿ ನೆಲೆಸಿರುವ ತಮ್ಮ ಪರಿಚಯಸ್ಥರಾದ ಸಿ.ಅಳಗಪ್ಪನ್ ಮತ್ತು ಅವರ ಪತ್ನಿ ನಾಚಲ್ ಅವರು 25 ಕೋಟಿ ರೂಪಾಯಿ ಮತ್ತು ಆಸ್ತಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗೌತಮಿ ಸೆಪ್ಟೆಂಬರ್‌ನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.

ತಮಿಳುನಾಡಿನಲ್ಲಿ 2021 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯು ತಮಗೆ ರಾಜಪಾಳ್ಯಂ ಕ್ಷೇತ್ರವನ್ನು ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಪಕ್ಷದಿಂದ ಸ್ಥಾನ ನೀಡಲಾಗುವುದು ಎಂಬ ಭರವಸೆಯೂ ಸಿಕ್ಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಸೀಟು ನೀಡಲಿಲ್ಲ. ಇಷ್ಟೆಲ್ಲಾ ಘಟನೆಗಳ ನಂತರವೂ ಪಕ್ಷಕ್ಕೆ ನಿಷ್ಠವಾಗಿಯೇ ಇದ್ದೆ ಎಂದು ತಮಿಳು ನಟಿ ಹೇಳಿದ್ದಾರೆ. ಆದರೆ ಪಕ್ಷದಿಂದ ಬೆಂಬಲ ಸಿಗದೇ ಇದ್ದಾಗ ಅನಿವಾರ್ಯವಾಗಿ ಪಕ್ಷದಿಂದ ಹೊರಬರಬೇಕಾಯಿತು ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ