Muslim woman: ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಮಹಿಳೆಗೆ ಕೊಲೆ ಬೆದರಿಕೆ
ತನ್ನ ನಿವಾಸದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಕ್ಕಾಗಿ ಬಿಜೆಪಿ ನಾಯಕಿ ರೂಬಿ ಆಸಿಫ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದು ಅವರಿಗೆ ಭದ್ರತೆಯನ್ನು ನೀಡಲಾಗಿದೆ. ಜೊತೆಗೆ ಗಣೇಶ ವಿಸರ್ಜನೆಗೆ ಮಾಡಲು ಕೂಡ ಭದ್ರತೆಯನ್ನು ನೀಡಲಾಗಿದೆ.
ಅಲಿಗಢ: ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ತನ್ನ ನಿವಾಸದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಕ್ಕಾಗಿ ಬಿಜೆಪಿ ನಾಯಕಿ ರೂಬಿ ಆಸಿಫ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದು ಅವರಿಗೆ ಭದ್ರತೆಯನ್ನು ನೀಡಲಾಗಿದೆ. ಜೊತೆಗೆ ಗಣೇಶ ವಿಸರ್ಜನೆಗೆ ಮಾಡಲು ಕೂಡ ಭದ್ರತೆಯನ್ನು ನೀಡಲಾಗಿದೆ. ರೂಬಿ ಆಸಿಫ್ ಖಾನ್ನ ಇಬ್ಬರು ಸಹೋದರಿಯರು ಮತ್ತು ಆಕೆಯ ಪತಿ ಆಸಿಫ್ ಜೊತೆಗಿದ್ದರು. ತನ್ನ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದಂದಿನಿಂದ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ನಾನು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ವಿಗ್ರಹವನ್ನು ಪೂಜಿಸಿದ್ದಕ್ಕಾಗಿ ಆಕೆಯ ವಿರುದ್ಧ ಫತ್ವಾ ಕೂಡ ಹೊರಡಿಸಲಾಗಿದೆ.
ಎಎನ್‌ಐ ಜೊತೆ ಮಾತನಾಡಿದ ಅವರು, ನಾನು ನರೋರಾ ಘಾಟ್‌ನಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ಆಗಸ್ಟ್ 31ರಂದು ನನ್ನ ನಿವಾಸದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದೆ. ಅಂದಿನಿಂದ ಈ ಫತ್ವಾ ಹೊರಡಿಸಲಾಗಿದೆ. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರಿಂದ ನಾನು ಹಿಂದೂ ಆಗಿದ್ದೇನೆ ಎಂದು ಮೌಲಾನರು (ಮೌಲ್ವಿಗಳು) ಹೇಳುತ್ತಿದ್ದಾರೆ. ನನ್ನನ್ನು ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವುದಾಗಿ ಮತ್ತು ನನ್ನ ಕುಟುಂಬವನ್ನು ಜೀವಂತವಾಗಿ ಸುಡುವುದಾಗಿ ನನಗೆ ಬೆದರಿಕೆಗಳು ಬರುತ್ತಿವೆ. ನಾನು ಹೊರಗೆ ಹೋದಾಗ, ಜನರು ನನ್ನನ್ನು ಹಿಂದೂ ಎಂದು ಕರೆಯುತ್ತಾರೆ. ನಾನು ವಿಗ್ರಹವನ್ನು ಪ್ರತಿಷ್ಠಾಪಿಸಿದ ರೀತಿಯಲ್ಲಿಯೇ ನಾನು ಶ್ರದ್ಧೆಯಿಂದ ವಿಸರ್ಜನೆ ಮಾಡುತ್ತೇನೆ.
ಮೌಲ್ವಿಗಳು ಆಕೆಯ ವಿರುದ್ಧ ಫತ್ವಾ ಹೊರಡಿಸಿ ಇಸ್ಲಾಂ ಧರ್ಮದಿಂದ ಬಹಿಷ್ಕಾರ ಹಾಕುವಂತೆ ಕರೆ ನೀಡಿದ್ದಾರೆ.”ನಾನು ಭದ್ರತೆಗಾಗಿ ಜಿಲ್ಲಾಡಳಿತವನ್ನು ಕೇಳಿದ್ದೇನೆ ಆದರೆ ಇಲ್ಲಿಯವರೆಗೆ ನನಗೆ ಭದ್ರತೆಯನ್ನು ಒದಗಿಸಿಲ್ಲ ಆದರೆ ಪ್ರತಿದಿನ ಎರಡು ಅಥವಾ ಮೂರು ಗಂಟೆಗಳ ಕಾಲ ಪೊಲೀಸ್ ಪೇದೆ ನನ್ನ ಮನೆಗೆ ಬರುತ್ತಾರೆ. ಇಂದು, ನನ್ನ ಕುಟುಂಬದ ಭದ್ರತೆಗಾಗಿ ಪೊಲೀಸ್ ಠಾಣೆಯು ಇಬ್ಬರು ಅಧಿಕಾರಿಗಳನ್ನು ಕಳುಹಿಸಿದೆ,ಎಂದು ಅವರು ಹೇಳಿದರು. ತಾನು ಫತ್ವಾಗಳಿಗೆ ಹೆದರುವುದಿಲ್ಲ ಎಂದು ಹೇಳುವ ಮೂಲಕ ಗಣೇಶನ ವಿಗ್ರಹವನ್ನು ಪೂಜಿಸುವುದು ಮತ್ತು ಪ್ರತಿಷ್ಠಾಪಿಸುವುದು ಮುಂದುವರಿಸುವುದಾಗಿ ಅವರು ಹೇಳಿದರು.
Published On - 6:22 pm, Wed, 7 September 22