AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satyendar Jain: ಅನಾರೋಗ್ಯ; ತಿಹಾರ್ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್​​ನ್ನು ಆಸ್ಪತ್ರೆಗೆ ಕರೆತಂದ ಪೊಲೀಸ್

ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಮಾಜಿ ಸಚಿವರು 35 ಕೆಜಿ ತೂಕ ಕಳೆದುಕೊಂಡು  ಅಸ್ಥಿಪಂಜರವಾಗಿದ್ದಾರೆ. ಅವರೂ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.

Satyendar Jain: ಅನಾರೋಗ್ಯ; ತಿಹಾರ್ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್​​ನ್ನು ಆಸ್ಪತ್ರೆಗೆ ಕರೆತಂದ ಪೊಲೀಸ್
ಸತ್ಯೇಂದ್ರ ಜೈನ್
Follow us
ರಶ್ಮಿ ಕಲ್ಲಕಟ್ಟ
|

Updated on: May 22, 2023 | 1:01 PM

ಹಣ ವರ್ಗಾವಣೆ ಪ್ರಕರಣಕ್ಕೆ(money-laundering case) ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಎಎಪಿ (AAP) ನಾಯಕ ಮತ್ತು ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendar Jain) ಆರೋಗ್ಯ ಹದಗೆಟ್ಟಿದ್ದು ಅವರನ್ನು ಸೋಮವಾರ ಸಫ್ದರ್​​ಜಂಗ್ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಉಲ್ಲೇಖಿಸಿ ಜಾಮೀನು ಕೋರಿದ್ದರು ಜೈನ್. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸತ್ಯೇಂದ್ರ ಜೈನ್ ಅವರ ವಕೀಲರು ತಮ್ಮ ಕಕ್ಷಿದಾರರು ತೀವ್ರ ಆರೋಗ್ಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅವರು ಅಸ್ಥಿಪಂಜರವಾಗಿ ಮಾರ್ಪಟ್ಟಿದ್ದಾರೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಮಾಜಿ ಸಚಿವರು 35 ಕೆಜಿ ತೂಕ ಕಳೆದುಕೊಂಡು  ಅಸ್ಥಿಪಂಜರವಾಗಿದ್ದಾರೆ. ಅವರೂ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.

ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಇಡಿಗೆ ನೋಟಿಸ್ ಜಾರಿ ಮಾಡಿದ್ದು, ಪರಿಹಾರಕ್ಕಾಗಿ ರಜಾ ಪೀಠದ ಮುಂದೆ ಹೋಗಲು ಜೈನ್‌ಗೆ ಅನುಮತಿ ನೀಡಿತ್ತು.

ಇದಕ್ಕೂ ಮೊದಲು, ಏಪ್ರಿಲ್ 6 ರಂದು, ದೆಹಲಿ ಹೈಕೋರ್ಟ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಅವರು ಆಪಾದಿತ ಅಪರಾಧದ ಪರಿಕಲ್ಪನೆ, ಪ್ರಾರಂಭಿಕ ಮತ್ತು ನಿಧಿ ಪೂರೈಕೆದಾರರು ಎಂಬ ಸಾಕ್ಷಿಗಳ ಹೇಳಿಕೆಯನ್ನು ಗಮನಿಸಿತ್ತು.

ಇದನ್ನೂ ಓದಿ:  ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಹುಡುಗನ ಹೆಸರು, ಗಲಾಟೆ, ಕೊನೆಗೆ ಮಗಳ ಮದುವೆಯನ್ನೇ ರದ್ದು ಮಾಡಿದ ಬಿಜೆಪಿ ನಾಯಕ

ಎಎಪಿಯ ಹಿರಿಯ ನಾಯಕ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯಗಳನ್ನು ತಿರುಚುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017 ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಅವರನ್ನು ಇಡಿ ಬಂಧಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ