ಆಪ್ ನಾಯಕ ಹುಸೇನ್ ಮನೆಯಲ್ಲಿ ಬಾಂಬ್ ಪತ್ತೆ, IB ಅಧಿಕಾರಿ ಹತ್ಯೆಗೆ ಕುಮ್ಮಕ್ಕು ಅರೋಪ
ದೆಹಲಿ: ಪೌರತ್ವ ಕಾಯ್ದೆ ಪರ-ವಿರೋಧ ಕಿಚ್ಚು ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಿದೆ. ಇದರಿಂದಾಗಿ ಈಗಾಗಲೇ 34 ಮಂದಿ ಮೃತಪಟ್ಟಿದ್ದಾರೆ ಹಾಗೂ 200 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಹಿಂಸಾಚಾರಕ್ಕೆ ಮುಖ್ಯ ಕಾರಣವೇನು. ಇದರ ಹಿಂದಿರುವವರ್ಯಾರು, ಕಿಚ್ಚನ್ನು ಹೊತ್ತಿಸುತ್ತಿರುವವರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಷ್ಟ್ರ ರಾಜಧಾನಿ ದೆಹಲಿ ಗಲಭೆಯ ಕರಾಳ ಮುಖ ಬಯಲು! ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಇಂದು ಕರಾಳ ಮುಖವಿದೆ ಎಂಬುದು ಈಗ ಬಯಲಾಗಿದೆ. ಈ ದಳ್ಳುರಿ ನಡೆಯುವ ಮೊದಲೇ ಬಿಗ್ ಸ್ಕೆಚ್ […]
ದೆಹಲಿ: ಪೌರತ್ವ ಕಾಯ್ದೆ ಪರ-ವಿರೋಧ ಕಿಚ್ಚು ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಿದೆ. ಇದರಿಂದಾಗಿ ಈಗಾಗಲೇ 34 ಮಂದಿ ಮೃತಪಟ್ಟಿದ್ದಾರೆ ಹಾಗೂ 200 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಹಿಂಸಾಚಾರಕ್ಕೆ ಮುಖ್ಯ ಕಾರಣವೇನು. ಇದರ ಹಿಂದಿರುವವರ್ಯಾರು, ಕಿಚ್ಚನ್ನು ಹೊತ್ತಿಸುತ್ತಿರುವವರ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ರಾಷ್ಟ್ರ ರಾಜಧಾನಿ ದೆಹಲಿ ಗಲಭೆಯ ಕರಾಳ ಮುಖ ಬಯಲು! ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಇಂದು ಕರಾಳ ಮುಖವಿದೆ ಎಂಬುದು ಈಗ ಬಯಲಾಗಿದೆ. ಈ ದಳ್ಳುರಿ ನಡೆಯುವ ಮೊದಲೇ ಬಿಗ್ ಸ್ಕೆಚ್ ಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ. ಇದರ ಸಾಕ್ಷಿಯಂತೆ ಆಪ್ ನಾಯಕನಿಗೆ ಸೇರಿದ ಕಟ್ಟದಲ್ಲಿ ಭಾರಿ ಪ್ರಮಾಣದ ಪೆಟ್ರೋಲ್ ಬಾಂಬ್ ಕಲ್ಲು ಪತ್ತೆಯಾಗಿದೆ. ಆಮ್ ಆದ್ಮಿ ಪಕ್ಷದ ನಾಯಕ ತಾಹೀರ್ ಹುಸೇನ್ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಕಲ್ಲು ಪತ್ತೆಯಾಗಿದ್ದು, ಗಲಭೆಕೋರರು ಹುಸೇನ್ ಮನೆಯ ಮೇಲಿಂದಲೇ ದಾಳಿ ಮಾಡುತ್ತಿದ್ದರು.
ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ಗಲಭೆಯಲ್ಲಿ ದುಷ್ಕರ್ಮಿಗಳು ಇದೇ ಮನೆಯಿಂದ ಪೆಟ್ರೋಲ್ ಬಾಂಬ್, ಕಲ್ಲು, ಬಾಟಲ್ ತೂರಾಟ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಗಲಭೆ ವೇಳೆ ಚಾಂದ್ಬಾಗ್ನಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾ ಬರ್ಬರ ಹತ್ಯೆಯ ಹಿಂದೆ ಆಪ್ ನಾಯಕನ ಕೈವಾಡ ಇದೆ. ಹಾಗೂ ಗಲಭೆಕೋರರಿಗೆ ತಾಹೀರ್ ಹುಸೇನ್ ನೆರವು ನೀಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಆಪ್ ನಾಯಕ ತಾಹೀರ್ ಹುಸೇನ್ ತಳ್ಳಿ ಹಾಕಿದ್ದಾರೆ.