ಚೀನಾಗೆ 15 ಟನ್​ ವೈದ್ಯಕೀಯ ಸಾಮಗ್ರಿ ಹೊತ್ತು ತೆರಳಿದ ಸಿ-17 ಗ್ಲೋಬ್​ ಮಾಸ್ಟರ್

ಚೀನಾಗೆ 15 ಟನ್​ ವೈದ್ಯಕೀಯ ಸಾಮಗ್ರಿ ಹೊತ್ತು ತೆರಳಿದ ಸಿ-17 ಗ್ಲೋಬ್​ ಮಾಸ್ಟರ್

ದೆಹಲಿ: ಮಹಾಮಾರಿ ಕೊರೊನಾ ವೈರಸ್​ನಿಂದ ತತ್ತರಿಸಿರುವ ಚೀನಾಗೆ ನೆರವಾಗಲು ಭಾರತದಿಂದ ವುಹಾನ್​ಗೆ ಸಿ-17 ಗ್ಲೋಬ್​ ಮಾಸ್ಟರ್ ವಿಮಾನ ತೆರಳಿದೆ. ಇದು ಸುಮಾರು 15 ಟನ್​ ವೈದ್ಯಕೀಯ ಸಾಮಗ್ರಿ ಹೊತ್ತು ಚೀನಾಗೆ ಪ್ರಯಾಣ ಬೆಲೆಸಿದ್ದು, ಹಿಂದಿರುಗುವಾಗ ವುಹಾನ್​ನಲ್ಲಿರುವ ಭಾರತೀಯರನ್ನು ಕರೆತರಲಿದೆ. ಸಿ-17 ಗ್ಲೋಬ್​ ಮಾಸ್ಟರ್ ವಿಮಾನದಲ್ಲಿ ಕೊರೊನಾ ವೈರಸ್​ಗೆ ತುತ್ತಾದವರಿಗೆ ಬೇಕಾದ ಅಗತ್ಯ ವಸ್ತುಗಳಾದ ಮಾಸ್ಕ್, ಕೈವಸುಗಳು ಮತ್ತು ಇತರ ತುರ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸುಮಾರು 15 ಟನ್ ವೈದ್ಯಕೀಯ ಸಾಮಗ್ರಿಯನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ […]

sadhu srinath

|

Feb 26, 2020 | 7:41 PM

ದೆಹಲಿ: ಮಹಾಮಾರಿ ಕೊರೊನಾ ವೈರಸ್​ನಿಂದ ತತ್ತರಿಸಿರುವ ಚೀನಾಗೆ ನೆರವಾಗಲು ಭಾರತದಿಂದ ವುಹಾನ್​ಗೆ ಸಿ-17 ಗ್ಲೋಬ್​ ಮಾಸ್ಟರ್ ವಿಮಾನ ತೆರಳಿದೆ. ಇದು ಸುಮಾರು 15 ಟನ್​ ವೈದ್ಯಕೀಯ ಸಾಮಗ್ರಿ ಹೊತ್ತು ಚೀನಾಗೆ ಪ್ರಯಾಣ ಬೆಲೆಸಿದ್ದು, ಹಿಂದಿರುಗುವಾಗ ವುಹಾನ್​ನಲ್ಲಿರುವ ಭಾರತೀಯರನ್ನು ಕರೆತರಲಿದೆ.

ಸಿ-17 ಗ್ಲೋಬ್​ ಮಾಸ್ಟರ್ ವಿಮಾನದಲ್ಲಿ ಕೊರೊನಾ ವೈರಸ್​ಗೆ ತುತ್ತಾದವರಿಗೆ ಬೇಕಾದ ಅಗತ್ಯ ವಸ್ತುಗಳಾದ ಮಾಸ್ಕ್, ಕೈವಸುಗಳು ಮತ್ತು ಇತರ ತುರ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸುಮಾರು 15 ಟನ್ ವೈದ್ಯಕೀಯ ಸಾಮಗ್ರಿಯನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ವೂಹನ್‌ಗೆ ತೆರಳಿದೆ.

ಚೀನಾದಲ್ಲಿ ಬಲಿ ಪಡೆಯುತ್ತಿರುವ ಕೋವಿಡ್-19 ಪೀಡಿತರಿಗೆ ವಿತರಿಸಲು ಮಾಸ್ಕ್ ಮತ್ತು ವೈದ್ಯಕೀಯ ಸಲಕರಣೆಗಳಂತಹ ಸರಬರಾಜು ಮಾಡುವಂತೆ ಚೀನಾ ಕೋರಿ ಕೊಂಡಿತ್ತು ಈ ಹಿನ್ನೆಲೆಯಲ್ಲಿ ಈ ನೆರವು ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೊನಾ ಇದುವರೆಗೆ 2,770 ಜನರನ್ನು ಬಲಿ ಪಡೆದುಕೊಂಡಿದೆ ಮತ್ತು ಸುಮಾರು 81,000 ಜನರು ಮಹಾಮಾರಿ ಕೊರೊನಾಗೆ ತುತ್ತಾಗಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada