ಜಮ್ಮು: ಜಮ್ಮು ಮತ್ತು ಕಾಶ್ಮೀರದ (Jammu And kashmir) ಪೂಂಚ್ ಜಿಲ್ಲೆಯಲ್ಲಿನ ನಿಯಂತ್ರಣ ಗಡಿ ರೇಖೆ ಬಳಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟ (Grenade Blast) ಸಂಭವಿಸಿದ್ದು ಸೇನಾಪಡೆಯ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಭಾನುವಾರ ರಾತ್ರಿ ಇಲ್ಲಿನ ಮೆಂಧರ್ ಸೆಕ್ಟರ್ನಲ್ಲಿ ಭಾರತೀಯ ಸೇನಾಪಡೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಜಮ್ಮುನಲ್ಲಿರುವ ರಕ್ಷಣಾ ಪಡೆಯ ಪಿಆರ್ ಒ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ಹೇಳಿದ್ದಾರೆ. ಸ್ಫೋಟದಲ್ಲಿ ಕ್ಯಾಪ್ಟನ್ ಆನಂದ್ ಮತ್ತು ಜೆಸಿಒ ನಯೀಬ್ ಸುಬೇದಾರ್ ಭಗವಾನ್ ಸಿಂಗ್ಗೆ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಹೆಲಿಕಾಪ್ಟರ್ನಲ್ಲಿ ಉಧಂಪುರದಲ್ಲಿರುವ ಕಮಾಂಡ್ ಹಾಸ್ಪಿಟಲ್ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.
Captain Anand and Nb Sub Bhagwan Singh lost their lives in a grenade blast that occurred while they were performing their duties on the Line of Control (LoC) in Mendhar Sector (J&K): Indian Army officials pic.twitter.com/IhURxzSEnv
— ANI (@ANI) July 18, 2022
ಕ್ಯಾಪ್ಟನ್ ಆನಂದ್ ಬಿಹಾರದ ಭಾಗಲ್ ಪುರ್ ಜಿಲ್ಲೆಯ ಚಂಪಾ ನಗರ್ ಪ್ರದೇಶದವರಾಗಿದ್ದು ನಯೀಬ್ ಸುಬೇದಾರ್ ಭಗವಾನ್ ಉತ್ತರ ಪ್ರದೇಶದ ಅಂಬೇಡ್ಕರ್ ನಗರ್ ಜಿಲ್ಲೆಯ ಪೋಖರ್ ಭಿಟ್ಟಾ ಗ್ರಾಮದವರಾಗಿದ್ದಾರೆ.