ಉತ್ತರ ಪ್ರದೇಶದಲ್ಲಿನ ಎಫ್ಐಆರ್ ರದ್ದು ಮಾಡುವಂತೆ ಮೊಹಮ್ಮದ್ ಜುಬೇರ್ ಅರ್ಜಿ, ಸಿಜೆಐ ಹೇಳಿದ್ದೇನು?

ಸೀತಾಪುರದಲ್ಲಿ ಮಾತ್ರವಲ್ಲದೆ ಜುಬೇರ್ ವಿರುದ್ಧ ಮುಜಾಫರ್ ನಗರ್, ಗಾಜಿಯಾಬಾದ್, ಲಖಿಂಪುರ್ ಮತ್ತು ಹಾಥರಸ್​​ನಲ್ಲಿ ಎಫ್ಐಆರ್ ದಾಖಲಾಗಿದೆ.

ಉತ್ತರ ಪ್ರದೇಶದಲ್ಲಿನ ಎಫ್ಐಆರ್ ರದ್ದು ಮಾಡುವಂತೆ ಮೊಹಮ್ಮದ್ ಜುಬೇರ್ ಅರ್ಜಿ, ಸಿಜೆಐ ಹೇಳಿದ್ದೇನು?
ಮೊಹಮ್ಮದ್ ಜುಬೇರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 18, 2022 | 2:29 PM

ಉತ್ತರ ಪ್ರದೇಶದಲ್ಲಿ (Uttar pradesh) ತನ್ನ ವಿರುದ್ಧ ದಾಖಲಾಗಿರುವ ಆರು ಎಫ್ಐಆರ್​​ಗಳನ್ನು ರದ್ದು ಮಾಡಬೇಕು ಎಂದು ಪತ್ರಕರ್ತ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಈ ಅರ್ಜಿಗಳನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಜುಬೇರ್ ಅವರ ವಕೀಲರಾದ ವೃಂದಾ ಗ್ರೋವರ್ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಈ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದಿದೆ ಎಂದು ಹೇಳಿದ್ದಾರೆ. ಜುಬೇರ್ ಒಬ್ಬ ಫ್ಯಾಕ್ಟ್ ಚೆಕರ್. ಅವರಿಗೆ ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ ಕೂಡಲೇ ಅವರ ವಿರುದ್ಧ ಹಲವಾರು ಎಫ್ಐಆರ್ ದಾಖಲಿಸಲಾಗಿದೆ ಎಂದು ವೃಂದಾ ಗ್ರೋವರ್ ಹೇಳಿದ್ದು, ಆದಷ್ಟು ಬೇಗ ಅರ್ಜಿ ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ನಾವು ಅದೇ ನ್ಯಾಯಪೀಠದ ಮುಂದೆ ಈ ಅರ್ಜಿಗಳನ್ನಿರಿಸುತ್ತೇವೆ. ನೀವು ಇದನ್ನು ಅಲ್ಲಿ ಹೋಗಿ ಹೇಳಿ ಎಂದು ಸಿಜೆಐ ರಮಣ ಅವರು ವೃಂದಾ ಗ್ರೋವರ್​​ಗೆ ಹೇಳಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ನ್ಯಾಯಪೀಠವು ಉತ್ತರ ಪ್ರದೇಶದ ಸೀತಾಪುರದಲ್ಲಿ ಜುಬೇರ್ ವಿರುದ್ಧ ದಾಖಲಿಸಲಾದ ಪ್ರಕರಣ ರದ್ದು ಮಾಡಬೇಕು ಎಂಬ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಇದೇ ನ್ಯಾಯಪೀಠ ರಜಾಕಾಲದ ನ್ಯಾಯಪೀಠ ನೀಡಿದ್ದ ಜಾಮೀನನ್ನು ಜುಲೈ 12ರಂದು ವಿಸ್ತರಣೆ ಮಾಡಿತ್ತು.

ಸೀತಾಪುರ ಪ್ರಕರಣದ ಮಧ್ಯಂತರ ಜಾಮೀನು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ನ್ಯಾಯಮೂರ್ತಿ ಚಂದ್ರಚೂಡ್ ಅವರ ನ್ಯಾಯಪೀಠವು ಸೆಪ್ಟೆಂಬರ್ 7ರಂದು ಮುಂದಿನ ವಿಚಾರಣೆ ನಡೆಸಲಿದ್ದು, ಸೀತಾಪುರ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವಂತೆ ಹೇಳಿದೆ.

ಸೀತಾಪುರದಲ್ಲಿ ಮಾತ್ರವಲ್ಲದೆ ಜುಬೇರ್ ವಿರುದ್ಧ ಮುಜಾಫರ್ ನಗರ್, ಗಾಜಿಯಾಬಾದ್, ಲಖಿಂಪುರ್ ಮತ್ತು ಹಾಥರಸ್​​ನಲ್ಲಿ ಎಫ್ಐಆರ್ ದಾಖಲಾಗಿದೆ. ಈ ಪ್ರಕರಗಳನ್ನು ತನಿಖೆ ನಡೆಸುವುದಕ್ಕೆ ಉತ್ತರ ಪ್ರದೇಶದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದನ್ನೂ ರದ್ದು ಮಾಡಬೇಕೆಂದು ಜುಬೇರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ
Image
ನಿಮಿಷಗಳ ಅಂತರದಲ್ಲಿ 3 ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ ನರಿಂದರ್ ಬಾತ್ರಾ
Image
ಉತ್ತರಪ್ರದೇಶ: ಕಸದ ಗಾಡಿಯಲ್ಲಿ ಯೋಗಿ ಆದಿತ್ಯನಾಥ, ಪ್ರಧಾನಿ ಮೋದಿ ಫೋಟೊ; ಪೌರಕಾರ್ಮಿಕ ವಜಾ
Image
296 ಕಿ.ಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಹೆದ್ದಾರಿಯ ಕೆಲವು ಫೋಟೋಗಳು ಇಲ್ಲಿವೆ
Image
ಆಲ್ಟ್ ನ್ಯೂಸ್​​​ ಸಹಸಂಸ್ಥಾಪಕ ಮೊಹಮ್ಮದ್​​ ಜುಬೇರ್​​ಗೆ ಜಾಮೀನು; ಹಿಂದೂ ಧರ್ಮ ಸಹಿಷ್ಣು ಎಂದ ನ್ಯಾಯಾಲಯ

ಉತ್ತರ ಪ್ರದೇಶದಲ್ಲಿನ ಪ್ರಕರಣಗಳನ್ನು ರದ್ದು ಮಾಡದೇ ಇದ್ದರೆ ಸುಪ್ರೀಂಕೋರ್ಟ್ ಪರ್ಯಾಯವಾಗಿ ದೆಹಲಿಯಲ್ಲಿ ದಾಖಲಾಗಿರುವ ಕೇಸು ಸೇರದಂತೆ ಎಲ್ಲ ಪ್ರಕರಣಗಳನ್ನು ಒಗ್ಗೂಡಿಸಬೇಕು ಎಂದು ಹೇಳಿದ್ದಾರೆ. ದೆಹಲಿ ಪ್ರಕರಣದಲ್ಲಿ ಜುಬೇರ್ ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು. ಜುಲೈ 27ರಂದು ಜುಬೇರ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು|

ಉತ್ತರ ಪ್ರದೇಶದಲ್ಲಿ ಜುಬೇರ್ ವಿರುದ್ಧ 6 ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪೈಕಿ 2 ಹಾಥರಸ್ ನಲ್ಲಿ ಗಾಜಿಯಾಬಾದ್, ಮುಜಾಫರ್ ನಗರ, ಲಖಿಂಪುರ ಖೇರಿ ಮತ್ತು ಸೀತಾಪುರದಲ್ಲಿ ಒಂದೊಂದು ಪ್ರಕರಣ ದಾಖಲಾಗಿದೆ.

Published On - 1:59 pm, Mon, 18 July 22