ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ತಂಡ ಕೇಜ್ರಿವಾಲ್‌ಗೆ ಸಮನ್ಸ್ ನೀಡದೆ ಮನೆಯಿಂದ ಹೊರಬರುವುದಿಲ್ಲ: ಮೂಲಗಳು
ಮೂಲಗಳ ಪ್ರಕಾರ, ನೋಟಿಸ್ ನಿರ್ದಿಷ್ಟವಾಗಿ ಕೇಜ್ರಿವಾಲ್ ಅವರನ್ನು ಉದ್ದೇಶಿಸಿದೆ. ಅವರು ಅದನ್ನು ಸ್ವೀಕರಿಸಬೇಕು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರೇ ಖುದ್ದಾಗಿ ನೋಟಿಸ್ ಸ್ವೀಕರಿಸುವವರೆಗೆ ಕ್ರೈಂ ಬ್ರಾಂಚ್ ತಂಡವು ಮುಖ್ಯಮಂತ್ರಿಗಳ ನಿವಾಸದಲ್ಲಿಯೇ ಇರುತ್ತದೆ. ಆದಾಗ್ಯೂ ‘ಕೇವಲ ಮಾನಹಾನಿ ಮಾಡಲು ಪೊಲೀಸರು ಬಂದಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಕಚೇರಿ ಆರೋಪಿಸಿದೆ.
ದೆಹಲಿ ಜನವರಿ 03: ಖುದ್ದು ನೋಟಿಸ್ ನೀಡುವ ಉದ್ದೇಶದಿಂದ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ (ACP) ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿವಾಸಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸಿಪಿ ನೇರವಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೋಟಿಸ್ ಹಸ್ತಾಂತರಿಸಲು ಬಯಸಿದ್ದು, ಸ್ವೀಕೃತಿಗಾಗಿ ಕಾಯುತ್ತಿದ್ದಾರೆ ಎಂದು ನ್ಯೂಸ್ 9 ವರದಿ ಮಾಡಿದೆ. ಮೂಲಗಳ ಪ್ರಕಾರ, ನೋಟಿಸ್ ನಿರ್ದಿಷ್ಟವಾಗಿ ಕೇಜ್ರಿವಾಲ್ ಅವರನ್ನು ಉದ್ದೇಶಿಸಿದೆ. ಅವರು ಅದನ್ನು ಸ್ವೀಕರಿಸಬೇಕು. ಕೇಜ್ರಿವಾಲ್ ಅವರೇ ಖುದ್ದಾಗಿ ನೋಟಿಸ್ ಸ್ವೀಕರಿಸುವವರೆಗೆ ಕ್ರೈಂ ಬ್ರಾಂಚ್ ತಂಡವು ಮುಖ್ಯಮಂತ್ರಿಗಳ ನಿವಾಸದಲ್ಲಿಯೇ ಇರುತ್ತದೆ. ಆದಾಗ್ಯೂ ‘ಕೇವಲ ಮಾನಹಾನಿ ಮಾಡಲು ಪೊಲೀಸರು ಬಂದಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಕಚೇರಿ ಆರೋಪಿಸಿದೆ.
ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಅಧಿಕಾರಿಗಳು ನೋಟಿಸ್ ಸ್ವೀಕರಿಸಲು ಸಿದ್ಧರಿದ್ದಾರೆ. ಆದರೆ ದೆಹಲಿ ಪೊಲೀಸರು ಅವರ ಕೈಗೆ ನೋಟಿಸ್ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
“ಮುಖ್ಯಮಂತ್ರಿ ಕಚೇರಿ ನೋಟಿಸ್ ಸ್ವೀಕರಿಸಲು ಸಿದ್ಧವಾಗಿದೆ ಮತ್ತು ಅದರ ಸ್ವೀಕೃತಿಯನ್ನು ಸಹ ನೀಡಲು ಸಿದ್ಧವಾಗಿದೆ, ಆದರೆ ಪೊಲೀಸರು ನೋಟಿಸ್ ಅನ್ನು ಹಸ್ತಾಂತರಿಸುತ್ತಿಲ್ಲ. ಪೊಲೀಸರು ಮಾಧ್ಯಮಗಳೊಂದಿಗೆ ಬಂದಿದ್ದು, ಪೊಲೀಸರ ಉದ್ದೇಶ ಮುಖ್ಯಮಂತ್ರಿಗೆ ಮಾನಹಾನಿ ಮಾಡುವುದೇ ಹೊರತು ನೋಟಿಸ್ ನೀಡುವುದಲ್ಲ ಎಂದು ಸಿಎಂ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#WATCH | A team of Delhi Police Crime Branch officials arrive at the residence of CM Arvind Kejriwal in Delhi.
Yesterday, Police officials came here to serve notice in connection with Aam Aadmi Party’s allegation against BJP “of trying to buy AAP MLAs”. Delhi Police asked him… pic.twitter.com/qrBXaBnDzc
— ANI (@ANI) February 3, 2024
ಏನಿದು ಪ್ರಕರಣ?
ಕಳೆದ ವಾರ, ಆಮ್ ಆದ್ಮಿ ಪಕ್ಷ (ಎಎಪಿ) ಬಿಜೆಪಿ ತಮ್ಮ ಪಕ್ಷಕ್ಕೆ ಬರಲು ತನ್ನ ಏಳು ಶಾಸಕರಿಗೆ ತಲಾ 25 ಕೋಟಿ ರೂಪಾಯಿಗಳನ್ನು ಆಫರ್ ನೀಡಿದೆ ಆರೋಪಿಸಿದೆ. ಜೊತೆಗೆ ಕೇಜ್ರಿವಾಲ್ ಸರ್ಕಾರವನ್ನು ಉರುಳಿಸುವ ಬೆದರಿಕೆ ಹಾಕಿದೆ. ಅರವಿಂದ್ ಕೇಜ್ರಿವಾಲ್ ಅವರು ಎಕ್ಸ್ ಪೋಸ್ಟ್ ನಲ್ಲಿ ಈ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ, ಅತಿಶಿ ಅವರು ದೆಹಲಿಯಲ್ಲಿ ಬಿಜೆಪಿಯು ‘ಆಪರೇಷನ್ ಕಮಲ 2.0’ ಅನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಎಎಪಿ ಶಾಸಕರಿಗೆ ಹಣದ ಆಮಿಷ ಒಡ್ಡುವ ಪ್ರಯತ್ನವನ್ನು ಪುನರಾವರ್ತಿಸಲಾಯಿತು, ಅದು ವಿಫಲವಾಗಿದೆ ಎಂದು ಆರೋಪಿಸಿದರು. 2022 ರಲ್ಲಿ ಆರ್ಥಿಕ ಉತ್ತೇಜನ ನೀಡುವ ಭರವಸೆ ನೀಡುವ ಮೂಲಕ ಎಎಪಿ ಶಾಸಕರನ್ನು ತಮ್ಮ ಶ್ರೇಣಿಗೆ ಸೇರಲು ಬಿಜೆಪಿ ಪ್ರಲೋಭಿಸಲು ಪ್ರಯತ್ನಿಸಿದ ಹಿಂದಿನ ನಿದರ್ಶನಗಳನ್ನು ಅತಿಶಿ ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ಪ್ರತಿಭಟನೆಯ ನಡುವೆ ಎಎಪಿ ನಾಯಕರ ಬಂಧನ, ಕೇಜ್ರಿವಾಲ್ ರಾಜೀನಾಮೆಗೆ ಬಿಜೆಪಿ ಒತ್ತಾಯ
ಎಎಪಿಯ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ವೀರೇಂದ್ರ ಸಚ್‌ದೇವ ನೇತೃತ್ವದ ದೆಹಲಿ ಬಿಜೆಪಿಯ ನಿಯೋಗವು ಜನವರಿ 30 ರಂದು ನಗರ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗಳ ಬಗ್ಗೆ ತನಿಖೆಗೆ ಮನವಿ ಮಾಡಿತು. ಪೊಲೀಸ್ ಪ್ರಧಾನ ಕಚೇರಿಯಲ್ಲಿ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರನ್ನು ಭೇಟಿಯಾದ ನಂತರ ವೀರೇಂದ್ರ ಸಚ್‌ದೇವ ಅವರು ಕೇಜ್ರಿವಾಲ್ ಅವರು ಮಾಡಿದ ಆರೋಪಗಳನ್ನು ಸಾಬೀತುಪಡಿಸಿ ಎಂದು ಒತ್ತಾಯಿಸಿದ್ದಾರೆ. ಆದರೆ ಎಎಪಿಯಿಂದ ಯಾರೂ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲಿಲ್ಲ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕರು ಮಾಡಿರುವ ಆರೋಪಗಳು ‘ಸಂಪೂರ್ಣ ಆಧಾರರಹಿತ’ ಎಂದು ಸಚ್‌ದೇವ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Sat, 3 February 24