ಶ್ರೀಲಂಕಾದ ವಶದಲ್ಲಿ ತಮಿಳುನಾಡು ಮೀನುಗಾರರು; ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಜೈಶಂಕರ್ ಭರವಸೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಎನ್‌ಡಿಎ ಸರ್ಕಾರವು ನಮ್ಮ ಮೀನುಗಾರ ಸಮುದಾಯದ ಜೀವನೋಪಾಯದ ಹಿತಾಸಕ್ತಿಗಳನ್ನು ಮತ್ತು ಅದರ ಮಾನವೀಯ ಅಂಶಗಳನ್ನು ಪರಿಹರಿಸಲು ಪ್ರಯತ್ನಿಸಿದೆ. ಈ ಪ್ರಯತ್ನಗಳು ಶ್ರೀಲಂಕಾ ಸರ್ಕಾರವನ್ನು ತೊಡಗಿಸಿಕೊಳ್ಳುವುದರ ಮೂಲಕವೂ ಸೇರಿದಂತೆ ಅವುಗಳ ಬಹು ಆಯಾಮಗಳಲ್ಲಿ ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.

ಶ್ರೀಲಂಕಾದ ವಶದಲ್ಲಿ ತಮಿಳುನಾಡು ಮೀನುಗಾರರು; ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಜೈಶಂಕರ್ ಭರವಸೆ
ಎಸ್. ಜೈಶಂಕರ್
Follow us
|

Updated on: Jun 27, 2024 | 8:17 PM

ದೆಹಲಿ ಜೂನ್ 27: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಗುರುವಾರ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪತ್ರಕ್ಕೆ  ಪ್ರತಿಕ್ರಿಯಿಸಿದ್ದು, ಶ್ರೀಲಂಕಾದಲ್ಲಿ ಬಂಧಿತ ಮೀನುಗಾರರ ಬಿಡುಗಡೆಗೆ ಕೇಂದ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 34 ಭಾರತೀಯ ಮೀನುಗಾರರು ಪ್ರಸ್ತುತ ಶ್ರೀಲಂಕಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತರ ಆರು ಮಂದಿ ಅಪರಾಧಿಗಳು  ಅಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಎನ್‌ಡಿಎ ಸರ್ಕಾರವು ಮೀನುಗಾರ ಸಮುದಾಯದ ಜೀವನೋಪಾಯದ ಹಿತಾಸಕ್ತಿಗಳನ್ನು ಪರಿಹರಿಸಲು ಪ್ರಯತ್ನಿಸಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ ಮತ್ತು ಜಾಫ್ನಾದಲ್ಲಿರುವ ಕಾನ್ಸುಲೇಟ್ ಬಂಧಿತರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಇಂತಹ ಪ್ರಕರಣಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುತ್ತಿದೆ. ಆಗಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ತಿಳುವಳಿಕೆಯನ್ನು ಅನುಸರಿಸಿ, ಈ ಸಮಸ್ಯೆಯ ಮೂಲವು 1974 ರ ಹಿಂದಿನದು ಎಂದು ನಿಮಗೆ ತಿಳಿದಿದೆ .

“2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಎನ್‌ಡಿಎ ಸರ್ಕಾರವು ನಮ್ಮ ಮೀನುಗಾರ ಸಮುದಾಯದ ಜೀವನೋಪಾಯದ ಹಿತಾಸಕ್ತಿಗಳನ್ನು ಮತ್ತು ಅದರ ಮಾನವೀಯ ಅಂಶಗಳನ್ನು ಪರಿಹರಿಸಲು ಪ್ರಯತ್ನಿಸಿದೆ. ಈ ಪ್ರಯತ್ನಗಳು ಶ್ರೀಲಂಕಾ ಸರ್ಕಾರವನ್ನು ತೊಡಗಿಸಿಕೊಳ್ಳುವುದರ ಮೂಲಕವೂ ಸೇರಿದಂತೆ ಅವುಗಳ ಬಹು ಆಯಾಮಗಳಲ್ಲಿ ಮುಂದುವರಿಯುತ್ತವೆ. ಭಾರತೀಯ ಮೀನುಗಾರರ ಕಲ್ಯಾಣ ಮತ್ತು ಭದ್ರತೆಗೆ ನಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ. ಅದನ್ನು ಯಾವಾಗಲೂ ಮಾಡುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇವೆ ಎಂದಿದ್ದಾರೆ ಜೈಶಂಕರ್.

ಜೈಶಂಕರ್ ಟ್ವೀಟ್

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಹಿಂದೆ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರಿಗೆ ಜೂನ್ 19, 24 ಮತ್ತು 25 ರಂದು ಮೂರು ಪತ್ರಗಳನ್ನು ಬರೆದಿದ್ದು, ಶ್ರೀಲಂಕಾ ವಶಪಡಿಸಿಕೊಂಡಿರುವ ಎಲ್ಲಾ ಮೀನುಗಾರರು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು

ಇದನ್ನೂ ಓದಿ: ನೀಟ್ ವಿವಾದದ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಲು ವಿಪಕ್ಷ ನಿರ್ಧಾರ

“ಜೂನ್ 18, 2024 ರಂದು ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ ನಾಲ್ವರು ಮೀನುಗಾರರನ್ನು ಬಂಧಿಸಿದ ಬಗ್ಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಪುದುಕೊಟ್ಟೈ ಜಿಲ್ಲೆಯ ಕೊಟ್ಟೈಪಟ್ಟಿನಂ ಮೀನುಗಾರಿಕಾ ಬಂದರಿನಿಂದ ತಮ್ಮ ಯಾಂತ್ರೀಕೃತ ಮೀನುಗಾರಿಕೆ ದೋಣಿಯಲ್ಲಿ ಹೊರಟಿದ್ದ ಈ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.  “ಈ ಘಟನೆಗಳು ಮೀನುಗಾರರ ಜೀವನೋಪಾಯಕ್ಕೆ ಅಡ್ಡಿಪಡಿಸುವುದಲ್ಲದೆ, ಅವರ ಕುಟುಂಬಗಳು ಮತ್ತು ಇಡೀ ಕರಾವಳಿ ಸಮುದಾಯಗಳಲ್ಲಿ ಭಯ ಮತ್ತು ಅನಿಶ್ಚಿತತೆಯ ಭಾವನೆಯನ್ನು ಉಂಟುಮಾಡುತ್ತದೆ” ಎಂದು ಸ್ಟಾಲಿನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ