ಬಾಲಿವುಡ್ ನಟ ಅನುಪಮ್ ಖೇರ್ ಪತ್ನಿ ನಟಿ, ರಾಜಕಾರಣಿ ಕಿರಣ್ ಖೇರ್​ಗೆ ಬ್ಲಡ್ ಕ್ಯಾನ್ಸರ್

|

Updated on: Apr 01, 2021 | 2:38 PM

Kirron Kher: ಕಿರಣ್ ಖೇರ್ ಅವರಿಗೆ ಬ್ಲಡ್ ಕ್ಯಾನ್ಸರ್​ನ ವಿಧಗಳಲ್ಲೊಂದಾದ ಮಲ್ಟಿಪಲ್ ಮೈಲೋಮಾ ಕಾಣಿಸಿಕೊಂಡಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅನುಪಮ್ ಖೇರ್ ಹೇಳಿದ್ದಾರೆ.

ಬಾಲಿವುಡ್ ನಟ ಅನುಪಮ್ ಖೇರ್ ಪತ್ನಿ ನಟಿ, ರಾಜಕಾರಣಿ ಕಿರಣ್ ಖೇರ್​ಗೆ ಬ್ಲಡ್ ಕ್ಯಾನ್ಸರ್
ಕಿರಣ್ ಖೇರ್
Follow us on

ದೆಹಲಿ: ಬಾಲಿವುಡ್​ನ ಖ್ಯಾತ ನಟಿ ಹಾಗೂ ರಾಜಕಾರಣಿ ಕಿರಣ್ ಖೇರ್ ರಕ್ತದ ಅರ್ಬುದದಿಂದ (blood cancer) ಬಳಲುತ್ತಿದ್ದಾರೆ ಎಂದು ಅವರ ಪತಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಹೇಳಿದ್ದಾರೆ. ಕಿರಣ್ ಖೇರ್ ಅವರಿಗೆ ಬ್ಲಡ್ ಕ್ಯಾನ್ಸರ್​ನ ವಿಧಗಳಲ್ಲೊಂದಾದ ಮಲ್ಟಿಪಲ್ ಮೈಲೋಮಾ ಕಾಣಿಸಿಕೊಂಡಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅನುಪಮ್ ಖೇರ್ ಮತ್ತು ಅವರ ಪುತ್ರ ಸಿಕಂದರ್ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

ಕಿರಣ್ ಅವರು ಮಲ್ಟಿಪಲ್ ಮೈಲೊಮಾ ರೋಗದ ಚಿಕಿತ್ಸೆಗೊಳಪಡಲಿದ್ದಾರೆ. ವದಂತಿಗಳಿಂದಾಗಿ ಪರಿಸ್ಥಿತಿ ಬಿಗಡಾಯಿಸುವುದಕ್ಕಿಂತ ಮುನ್ನ ಸಿಕಂದರ್ ಮತ್ತು ನಾನು ಈ ಬಗ್ಗೆ ಎಲ್ಲರಿಗೆ ವಿಷಯವನ್ನು ತಿಳಿಸಲು ಬಯಸುತ್ತೇವೆ . ಅವರು ಈಗ ಚಿಕಿತ್ಸೆಗೊಳಪಟ್ಟಿದ್ದು, ಮತ್ತಷ್ಟು ಶಕ್ತಿಶಾಲಿಯಾಗಿ ಮರಳಿ ಬರುತ್ತಾರೆ. ಅವರನ್ನು ತಜ್ಞ ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಆಕೆ ಛಲಗಾತಿ, ಇದನ್ನೂ ಗೆಲ್ಲುತ್ತಾಳೆ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

ಆಕೆಯ ಹೃದಯ ವಿಶಾಲವಾದುದು. ಹಾಗಾಗಿ ತುಂಬಾ ಜನರು ಆಕೆಯನ್ನು ಪ್ರೀತಿಸುತ್ತಾರೆ. ಆಕೆಗೆ ನಿಮ್ಮ ಪ್ರೀತಿಯನ್ನು ಕಳಿಸಿ, ನಿಮ್ಮ ಹೃದಯ ಮತ್ತು ಪ್ರಾರ್ಥನೆಯಲ್ಲಿ ಆಕೆ ಇರಲಿ. ಆಕೆ ಚೇತರಿಸಿಕೊಳ್ಳುತ್ತಿದ್ದು, ಬೆಂಬಲ ಮತ್ತು ಪ್ರೀತಿ ನೀಡಿದ ಎಲ್ಲರಿಗೂ ನಮ್ಮ ಧನ್ಯವಾದಗಳು ಎಂದಿದ್ದಾರೆ ಅನುಪಮ್ ಖೇರ್.

ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಬಿಜೆಪಿ ನಾಯಕಿ ಕಿರಣ್ ನಾಪತ್ತೆಯಾಗಿದ್ದಾರೆ, ಕಾಣೆಯಾಗಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಆಕೆ ಮಲ್ಟಿಪಲ್ ಮೈಲೋಮಾದಿಂದ ಬಳಲುತ್ತಿದ್ದು ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚಂಡೀಗಢದ ಬಿಜೆಪಿ ಮುಖ್ಯಸ್ಥ ಅರುಣ್ ಸೂದ್ ಹೇಳಿಕೆ ನೀಡಿದ ಬೆನ್ನಲ್ಲೇ ಅನುಪಮ್ ಖೇರ್ ಮತ್ತು ಅವರ ಪುತ್ರ ಈ ವಿಷಯ ಬಹಿರಂಗಪಡಿಸಿದ್ದಾರೆ.


ನವೆಂಬರ್ 11ಕ್ಕೆ ಕಿರಣ್ ಅವರನ್ನು ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಕೈಗೆ ಏಟಾಗಿದ್ದರಿಂದಲೋ, ಮೂಳೆ ಮುರಿದಿರುವುದರಿಂದಲೋ ಅವರನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಆಕೆ ಕುಸಿದು ಬಿದ್ದಿಲ್ಲ. ಆಮೇಲೆ PET ಸ್ಕ್ಯಾನ್ ಮಾಡಿದಾಗ ಆಕೆಯ ಭುಜ ಮತ್ತು ಬಲ ತೋಳಿನಲ್ಲಿ ಮಲ್ಟಿಪಲ್ ಮೈಲೋಮಾ ಇರುವುದಾಗಿ ಪತ್ತೆಯಾಗಿತ್ತು ಎಂದು ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ್ದ ಸೂದ್ ಹೇಳಿದ್ದರು.

ಇದನ್ನೂ ಓದಿ:   ಮಗ್ಗುಲ ಮುಳ್ಳಂತಿದ್ದ ಕ್ಯಾನ್ಸರ್​ ಜತೆ ಹೋರಾಡುತ್ತ, ಕೊರೊನಾ ರೋಗಿಗಳ ಸೇವೆ ಮಾಡಿದ ನರ್ಸ್​ ಕೃಪಾ ಶಿಲಬದ್ರ

Published On - 2:37 pm, Thu, 1 April 21