Tamil Nadu Assembly Election 2021: ಭರ್ಜರಿ ಪ್ರಚಾರ ನಡೆಸುತ್ತಿರುವ ಖುಷ್ಬೂ ಸುಂದರ್; ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ಶೇರ್
ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಬೂ 2020ರ ಅಕ್ಟೋಬರ್ನಲ್ಲಿ ಆ ಪಕ್ಷಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿವೆ. ಬಿಜೆಪಿಯಿಂದ ನಟಿ ಖುಷ್ಬೂ ಸುಂದರ್ಗೆ ಟಿಕೆಟ್ ಸಿಕ್ಕಿದ್ದು, ಅವರು ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಹಾಗೇ, ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನೂ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮಾರ್ಚ್ 19ರಂದು ನಾಮಪತ್ರ ಸಲ್ಲಿಸಿರುವ ಖುಷ್ಬೂ ತಮ್ಮ ಆಸ್ತಿ ₹22.55 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಖುಷ್ಬೂ ಸುಂದರ್ ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. ಆರು ವರ್ಷಗಳ ಬಳಿಕ, 2020ರ ಆಕ್ಟೋಬರ್ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ರಾಜಕೀಯಕ್ಕೆ ಸೇರುವ ಮೊದಲು ಖುಷ್ಬೂ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ಮಾಣ, ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೂರು ಬಾರಿ ತಮಿಳುನಾಡು ಫಿಲ್ಮ್ ಫೇರ್ ಅವಾರ್ಡ್ ವಿಜೇತರೂ ಹೌದು. 2014ರ ನವೆಂಬರ್ನಲ್ಲಿ ಇವರು ದೆಹಲಿಯಲ್ಲಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ, ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಅಲ್ಲದೆ, ಇದು ನನ್ನ ಪಾಲಿಗೆ ಅದ್ಭುತ ಕ್ಷಣ. ಜಾತ್ಯತೀತ ಪಕ್ಷ ಕಾಂಗ್ರೆಸ್ ಸೇರಲು ನನಗೆ ಹೆಮ್ಮೆಯಾಗುತ್ತದೆ ಎಂದು ಹೇಳಿಕೊಂಡಿದ್ದರು. ಇನ್ನು ಕಾಂಗ್ರೆಸ್ ಸೇರುವುದಕ್ಕೂ ಮೊದಲು ಅವರು 2010ರ ಮೇ ತಿಂಗಳಲ್ಲಿ, ತಮಿಳುನಾಡಿನ ಕರುಣಾನಿಧಿಯವರ ಪಕ್ಷ ಡಿಎಂಕೆ ಸೇರ್ಪಡೆಯಾಗಿದ್ದು. ಲೋಕಸಭಾ ಮತ್ತು ವಿಧಾನಸಭಾ ಎರಡೂ ಚುನಾವಣೆಗಳಲ್ಲಿ ಡಿಎಂಕೆ ಪ್ರಮುಖ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು. ಕರುಣಾನಿಧಿಯವರ ಬೆಂಬಲ ಸಂಪೂರ್ಣವಾಗಿದ್ದರೂ, ಕೊನೆಗೆ ಅವರ ಪುತ್ರ ಎಂ.ಕೆ.ಸ್ಟಾಲಿನ್ ಮತ್ತು ಖುಷ್ಬೂ ಅವರ ಮಧ್ಯದ ಮನಸ್ತಾಪ ಆ ಪಕ್ಷವನ್ನು ಬಿಡುವಂತೆ ಮಾಡಿತ್ತು.
2020ರಲ್ಲಿ ಬಿಜೆಪಿಗೆ ಸೇರ್ಪಡೆ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆಯಾಗಿದ್ದ ಖುಷ್ಬೂ 2020ರ ಅಕ್ಟೋಬರ್ನಲ್ಲಿ ಆ ಪಕ್ಷಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗೇ ಈ ಬಾರಿ ಟಿಕೆಟ್ ಕೂಡ ಗಿಟ್ಟಿಸಿದ್ದಾರೆ. ನಟಿ ಖುಷ್ಬೂ ತಮ್ಮ ಚುನಾವಣಾ ಪ್ರಚಾರದ ಒಂದಷ್ಟು ಫೋಟೋಗಳನ್ನು, ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
#womenpower #mystrength #myconstituency #Vote4Kushboo #kushboo4thousandlights #Vote4BJP @BJP4TamilNadu @BJP4India @CTRavi_BJP @blsanthosh @Murugan_TNBJP @ReddySudhakar21 @kishanreddybjp pic.twitter.com/ZQKUcbNQq1
— KhushbuSundar ❤️ (@khushsundar) March 21, 2021
View this post on Instagram
Published On - 7:22 pm, Mon, 22 March 21