ಸರ್ ಪದ ಬಳಕೆ ಕೈ ಬಿಟ್ಟು ಲಿಂಗ ತಟಸ್ಥ ಪದ ಬಳಸಲು ಸಂಸತ್​​ ನಿರ್ಧಾರ

"ಸದನದ ಎಲ್ಲಾ ಪ್ರಕ್ರಿಯೆಗಳನ್ನು (ಸಂಸದೀಯ ಪ್ರಶ್ನೆಗಳಿಗೆ ಉತ್ತರಗಳನ್ನು ಒಳಗೊಂಡಂತೆ) ಸಭಾಪತಿಗೆ ತಿಳಿಸಲಾಗುತ್ತದೆ. ಆದಾಗ್ಯೂ, ರಾಜ್ಯಸಭೆಯ ಮುಂದಿನ ಅಧಿವೇಶನದಿಂದ ಲಿಂಗ-ತಟಸ್ಥ ಉತ್ತರಗಳನ್ನು ಒದಗಿಸಲು ಸಚಿವಾಲಯಗಳಿಗೆ ತಿಳಿಸಲಾಗುವುದು...

ಸರ್ ಪದ ಬಳಕೆ ಕೈ ಬಿಟ್ಟು ಲಿಂಗ ತಟಸ್ಥ ಪದ ಬಳಸಲು ಸಂಸತ್​​ ನಿರ್ಧಾರ
ಸಂಸತ್ ಭವನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 21, 2022 | 9:47 PM

ದೆಹಲಿ: “ಸರ್” ಬಳಕೆಯನ್ನು ಕೈಬಿಡುವಂತೆ ಶಿವಸೇನಾ (ShivSena) ಸಂಸದೆ ಪ್ರಿಯಾಂಕಾ ಚತುರ್ವೇದಿ(Priyanka Chaturvedi) ಮನವಿ ಮಾಡಿದ ನಂತರ ಸಂಸತ್ತಿನ ಪ್ರಶ್ನೆಗಳಿಗೆ ಉತ್ತರಗಳಿಗೆ ಇನ್ನು ಮುಂದೆ ಲಿಂಗ ತಟಸ್ಥ ಪದಗಳನ್ನು ಬಳಸಲಾಗುವುದು. ಪ್ರಿಯಾಂಕಾ ಕಳೆದ ತಿಂಗಳು ಸಂಸದೀಯ ವ್ಯವಹಾರಗಳ ಸಚಿವರಿಗೆ ಪತ್ರ ಬರೆದಿದ್ದುಸಂಸತ್‌ನಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲಾಗಿದೆ, ಉತ್ತರವು ನಕಾರಾತ್ಮಕವಾಗಿರುವ ಸಂದರ್ಭಗಳಲ್ಲಿ No Sir ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸಂಸದೆ ಆಗಿ ಪ್ರಜಾಪ್ರಭುತ್ವದ ದೇಗುಲವೆಂಬ ಸಂಸತ್ತಿನಲ್ಲಿ ಲಿಂಗ ಬೇಧವಿಲ್ಲದ ಪದ ಬಳಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದರು. ಇಂದು, ಮಹಾರಾಷ್ಟ್ರ ಸಂಸದೆ ಸೆಪ್ಟೆಂಬರ್ 20 ರಂದು ರಾಜ್ಯಸಭಾ ಸಚಿವಾಲಯದಿಂದ ಪಡೆದ ಉತ್ತರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹೀಗೆ ಹೇಳಲಾಗಿದೆ “ಸದನದ ಎಲ್ಲಾ ಪ್ರಕ್ರಿಯೆಗಳನ್ನು (ಸಂಸದೀಯ ಪ್ರಶ್ನೆಗಳಿಗೆ ಉತ್ತರಗಳನ್ನು ಒಳಗೊಂಡಂತೆ) ಸಭಾಪತಿಗೆ ತಿಳಿಸಲಾಗುತ್ತದೆ. ಆದಾಗ್ಯೂ, ರಾಜ್ಯಸಭೆಯ ಮುಂದಿನ ಅಧಿವೇಶನದಿಂದ ಲಿಂಗ-ತಟಸ್ಥ ಉತ್ತರಗಳನ್ನು ಒದಗಿಸಲು ಸಚಿವಾಲಯಗಳಿಗೆ ತಿಳಿಸಲಾಗುವುದು. ಏತನ್ಮಧ್ಯೆ ಪ್ರಸ್ತುತ ಸಭಾಪತಿ ಪುರುಷರಾಗಿದ್ದು, ಸಭಾಪತಿ ಸ್ಥಾನವನ್ನು ಮಹಿಳೆ ಅಲಂಕರಿಸಿದಾಗ ಅಲ್ಲಿ ಮೇಡಂ ಪದ ಬಳಕೆಯಾಗುತ್ತೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಅದೇನೇ ಇರಲಿ, ಈಗ ಲೋಕಸಭೆಯಲ್ಲೂ ಅದೇ ಲಿಂಗ-ತಟಸ್ಥ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ. ನಮ್ಮ ಸಂವಿಧಾನವು ಸಮಾನತೆಯ ತತ್ವವನ್ನು ಆಧರಿಸಿದೆ. ಇದು ಒಂದು ಸಣ್ಣ ಬದಲಾವಣೆಯಂತೆ ಕಂಡರೂ, ಸಂಸತ್ತಿನ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಅವರ ಪ್ರಾತಿನಿಧ್ಯವನ್ನು ನೀಡುವಲ್ಲಿ ಇದು ಬೃಹತ್ ಹೆಜ್ಜೆ ಎಂದು ಚತುರ್ವೇದಿ ಹೇಳಿದ್ದಾರೆ.

Published On - 9:27 pm, Wed, 21 September 22

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು