Agni-V: 5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ
ಜಲಾಂತರ್ಗಾಮಿಗಳಿಂದಲೂ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸುವ ವ್ಯವಸ್ಥೆಯನ್ನು ಭಾರತ ಸಿದ್ಧಪಡಿಸುತ್ತಿದ್ದು, ಸಂಭಾವ್ಯ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿದೆ.
ದೆಹಲಿ: ಅಣ್ವಸ್ತ್ರ ಸಿಡಿತಲೆ ಹೊತ್ತು 5000 ಕಿಮೀ ದೂರದ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯವಿರುವ ಅಗ್ನಿ-5 ಖಂಡಾಂತರ ಕ್ಷಿಪಣಿಯನ್ನು ಭಾರತ ಬುಧವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ಅಗ್ನಿ-5 ಕ್ಷಿಪಣಿಯನ್ನು ಪರೀಕ್ಷಿಸುವ ಮೂಲಕ ಚೀನಾಕ್ಕೆ ಭಾರತ ಪರೋಕ್ಷವಾಗಿ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗಿದೆ. ಒಡಿಶಾ ಕಡಲ ತೀರದ ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪದಿಂದ ರಾತ್ರಿ 7.50ಕ್ಕೆ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಯಿತು.
ಮೂರು ಹಂತದ ಘನ ಇಂಧನ ಎಂಜಿನ್ ಹೊಂದಿರುವ ಈ ಕ್ಷಿಪಣಿಯು ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿ ಧ್ವಂಸಗೊಳಿಸಬಲ್ಲದು. ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ಈ ಹಿಂದಿನ ನಿರ್ಧಾರಕ್ಕೆ ಇಂದಿಗೂ ಭಾರತ ಬದ್ಧವಾಗಿದೆ. ಹೀಗಾಗಿಯೇ ನಿಖರವಾಗಿ ಗುರಿ ಮುಟ್ಟಬಲ್ಲ ಖಂಡಾಂತರ ಕ್ಷಿಪಣಿಗಳಿಗೆ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವವಿದೆ. ಜಲಾಂತರ್ಗಾಮಿಗಳಿಂದಲೂ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸುವ ವ್ಯವಸ್ಥೆಯನ್ನು ಭಾರತ ಸಿದ್ಧಪಡಿಸುತ್ತಿದ್ದು, ಸಂಭಾವ್ಯ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿದೆ.
ಟ್ರಕ್ ಮೇಲೆ ಲೋಡ್ ಮಾಡಿ ಅಗ್ನಿ-5 ಕ್ಷಿಪಣಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಬಹುದಾಗಿದೆ. ನಿಖರವಾಗಿ ಗುರಿ ಮುಟ್ಟುವ ಸಾಮರ್ಥ್ಯ ಇರುವುದು ಈ ಕ್ಷಿಪಣಿಯ ಪ್ರಮುಖ ವೈಶಿಷ್ಟ್ಯವಾಗಿದೆ. ಭಾರತದ ಬಳಿ ಇಂಥ ಮಹತ್ವದ ಕ್ಷಿಪಣಿಗಳು ಇದೆ ಎನ್ನುವುದು ಇತರ ದೇಶಗಳು ಭಾರತದ ವಿರುದ್ಧ ಯುದ್ಧ ಘೋಷಿಸಲು ಹತ್ತು ಸಲ ಯೋಚಿಸುವಂತೆ ಮಾಡುತ್ತವೆ. ರಕ್ಷಣಾ ವಿಜ್ಞಾನಿ ನಟರಾಜನ್ 2007ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮಾಡಿದ್ದರು.
ಈ ಕ್ಷಿಪಣಿಯು ಏಷ್ಯಾವನ್ನು ಇಡಿಯಾಗಿ, ಯೂರೋಪ್ ಮತ್ತು ಆಫ್ರಿಕಾದ ಕೆಲ ಭಾಗಗಳನ್ನು ಗುರಿಯಾಗಿಸಬಲ್ಲದು. ಈ ಕ್ಷಿಪಣಿಯು ಬಳಸುವ ಎಂಜಿನ್ ಸಹ ವೈಶಿಷ್ಟ್ಯಪೂರ್ಣವಾದುದು. ಎಂಐಆರ್ವಿ (Multiple Independently Targetable Re-entry Vehicles – MIRV) ತಂತ್ರಜ್ಞಾನದ ಈ ಎಂಜಿನ್ ಬಳಸಿ ಉಡಾಯಿಸಿದ ಕ್ಷಿಪಣಿಯು ಹಲವು ಗುರಿಗಳನ್ನು ಏಕಕಾಲಕ್ಕೆ ಧ್ವಂಸ ಮಾಡಬಲ್ಲದು.
Breaking News …
India successfully flight tested its potent surface to surface Agni V ballistic missile from Abdul Kalam Island off Odisha coast today.
Three stage Agni 5 has a striking range of more than 5,000 km.
Agni V range can be enhanced by a lighter payload. pic.twitter.com/RikXRfVeQo
— DD News Odia (ଡ଼ିଡ଼ି ନ୍ୟୁଜ ଓଡିଆ) (@DDOdiaNews) October 27, 2021
ಇದನ್ನೂ ಓದಿ: ಸದ್ದಿಲ್ಲದೆ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗ ನಡೆಸಿದ ಚೀನಾ: ಅಮೆರಿಕಕ್ಕೆ ಭದ್ರತೆಯ ಆತಂಕ, ಭಾರತದಿಂದ ಎಚ್ಚರಿಕೆಯ ಪ್ರತಿಕ್ರಿಯೆ ಇದನ್ನೂ ಓದಿ: Missile Power: ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆ, ಮೇಲುಗೈಗೆ ಸಾಕ್ಷಿಯಾದ ಸೂಪರ್ಸಾನಿಕ್ ಬ್ರಹ್ಮೋಸ್, ಸಬ್ಸಾನಿಕ್ ನಿರ್ಭಯ್
Published On - 9:26 pm, Wed, 27 October 21