AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್​ ರೇವ್ ಪಾರ್ಟಿ ತನಿಖೆ ಸಮೀರ್ ವಾಂಖೆಡೆಯಿಂದಲೇ ಮುಂದುವರಿಕೆ: ಎನ್​ಸಿಬಿ

ವಾಂಖಡೆ ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಗಮನಾರ್ಹ ಮತ್ತು ವಿಶ್ವಾಸಾರ್ಹ ದಾಖಲೆಗಳು ಲಭ್ಯವಾಗುವವರೆಗೂ ಈ ಪ್ರಕರಣದ ತನಿಖೆಯನ್ನು ಅವರೇ ನಿರ್ವಹಿಸಲಿದ್ದಾರೆ ಎಂದು ಎನ್​ಸಿಬಿ ತಿಳಿಸಿದೆ.

ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್​ ರೇವ್ ಪಾರ್ಟಿ ತನಿಖೆ ಸಮೀರ್ ವಾಂಖೆಡೆಯಿಂದಲೇ ಮುಂದುವರಿಕೆ: ಎನ್​ಸಿಬಿ
ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮತ್ತು ಡ್ರಗ್ಸ್​​ ಪ್ರಕರಣದ ಆರೋಪಿ ಆರ್ಯನ್ ಖಾನ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 27, 2021 | 8:56 PM

Share

ದೆಹಲಿ: ಕ್ರೂಸ್ ರೇವ್ ಪಾರ್ಟಿ ಪ್ರಕರಣದ ತನಿಖೆಯನ್ನು ಮಾದಕ ವಸ್ತು ನಿಯಂತ್ರಣ ದಳದ (Narcotics Control Bureau – NCB) ಮುಂಬೈ ವಲಯದ ಮುಖ್ಯಸ್ಥರಾದ ಸಮೀರ್ ವಾಂಖೆಡೆಯೇ ಮುಂದುವರಿಸಲಿದ್ದಾರೆ ಎಂದು ಎನ್​ಸಿಬಿಯ ಮಹಾನಿರ್ದೇಶಕ ಜ್ಞಾನೇಶ್ವರ ಸಿಂಗ್ ಬುಧವಾರ ಸ್ಪಷ್ಟಪಡಿಸಿದ್ದಾರೆ. ವಾಂಖಡೆ ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಗಮನಾರ್ಹ ಮತ್ತು ವಿಶ್ವಾಸಾರ್ಹ ದಾಖಲೆಗಳು ಲಭ್ಯವಾಗುವವರೆಗೂ ಈ ಪ್ರಕರಣದ ತನಿಖೆಯನ್ನು ಅವರೇ ನಿರ್ವಹಿಸಲಿದ್ದಾರೆ ಎಂದು ಎನ್​ಸಿಬಿ ತಿಳಿಸಿದೆ.

ವಾಂಖಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಎನ್​ಸಿಬಿ ಜಾಗೃತ ದಳದ ಐವರು ಸದಸ್ಯರ ತಂಡ ಮುಂಬೈಗೆ ಬುಧವಾರ ತಲುಪಿದ್ದು, ಎನ್​ಸಿಬಿಯ ಮುಂಬೈ ಕಚೇರಿಯಿಂದ ಹಲವು ದಾಖಲೆಗಳು ಮತ್ತು ರೆಕಾರ್ಡಿಂಗ್​ಗಳನ್ನು ಸಂಗ್ರಹಿಸಿದೆ. ವಾಂಖೆಡೆ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು ಎಲ್ಲ ವಿಚಾರಗಳನ್ನೂ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಆಗುವುದಿಲ್ಲ ಎಂದು ಜ್ಞಾನೇಶ್ವರ ಸಿಂಗ್ ಹೇಳಿದ್ದಾರೆ.

ಮಾದಕ ವಸ್ತು ದಾಸ್ತಾನು, ಸೇವನೆಗೆ ಸಂಬಂಧಿಸಿದಂತೆ ಖ್ಯಾನ ನಟ ಶಾರೂಖ್​ ಖಾನ್ ಮಗ ಆರ್ಯನ್ ಖಾನ್ ವಿರುದ್ಧ ನಡೆಯುತ್ತಿರುವ ವಿಚಾರಣೆ ಇಡೀ ದೇಶದ ಗಮನ ಸೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನಿಂದ ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಳ್ಳಲಾಯಿತು ಎಂದು ಪ್ರಭಾಕರ್ ಸೈಲ್ ಎನ್ನುವವರು ಆರೋಪ ಮಾಡಿದ್ದರು. ಎನ್​ಸಿಬಿಯ ಕೆಲ ಅಧಿಕಾರಿಗಳು ₹ 25 ಕೋಟಿ ಲಂಚ ಪಡೆಯಲು ಬೇಡಿಕೆಯಿಟ್ಟಿದ್ದರು. ಇದರಲ್ಲಿ ಒಂದಿಷ್ಟು ಮೊತ್ತವನ್ನು ವಾಂಖೆಡೆ ಪಡೆದುಕೊಳ್ಳಲು ಉದ್ದೇಶಿಸಿದ್ದರು. ಅವರು ಪರಸ್ಪರ ಮಾತಾಡಿಕೊಳ್ಳುತ್ತಿದ್ದಾಗ ಈ ವಿಚಾರ ನನ್ನ ಕಿವಿಗೆ ಬಿದ್ದಿತ್ತು ಎಂದು ಪ್ರಭಾಕರ್ ಸೈಲ್ ಹೇಳಿದ್ದರು.

ತನಿಖಾ ತಂಡದ ಪ್ರತಿಕ್ರಿಯೆ ಹೈಪ್ರೊಫೈಲ್ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಾಂಖೆಡೆ​ ಹೇಳಿಕೆ ಪಡೆದಿದ್ದೇವೆ ಎಂದು ಎನ್​ಸಿಬಿ ಜಾಗೃತ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸುದೀರ್ಘ ನಾಲ್ಕು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದೇವೆ. ವಿಚಾರಣೆ ವೇಳೆ ಸಮೀರ್ ಹಲವಾರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಗತ್ಯಬಿದ್ದರೆ ಸಮೀರ್​​​ರನ್ನು ಮತ್ತೆ ವಿಚಾರಣೆಗೆ ಕರೆಯಲಾಗುತ್ತದೆ ಎಂದು ಎನ್​ಸಿಬಿ ಡಿಡಿಜಿ ಜ್ಞಾನೇಶ್ವರ ಸಿಂಗ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ananya Pandey: ಆರ್ಯನ್ ಖಾನ್ ಬಂಧನ ಪ್ರಕರಣ; ಎನ್​ಸಿಬಿ ವಿಚಾರಣೆ ವೇಳೆ ಭಯಗೊಂಡು ಕಣ್ಣೀರಿಟ್ಟಿದ್ದ ಅನನ್ಯಾ ಪಾಂಡೆ ಇದನ್ನೂ ಓದಿ: ಸಮೀರ್ ವಾಂಖೆಡೆ ವಾಟ್ಸಪ್ ಚಾಟ್ ಪರಿಶೀಲಿಸಿದರೆ ನಕಲಿ ಎನ್​ಸಿಬಿ ಕೇಸ್ ಪತ್ತೆಯಾಗುತ್ತದೆ: ನವಾಬ್ ಮಲ್ಲಿಕ್

Published On - 8:21 pm, Wed, 27 October 21

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ