Agnipath Scheme: ಜಮ್ಮು ಕಾಶ್ಮೀರದಿಂದ ಅಗ್ನಿವೀರ್​​ಗಳ ಮೊದಲ ಬ್ಯಾಚ್ ಭಾರತೀಯ ಸೇನೆಗೆ ತರಬೇತಿಗೆ ಸೇರ್ಪಡೆ

| Updated By: Digi Tech Desk

Updated on: Dec 27, 2022 | 11:45 AM

ದೈಹಿಕ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆಗಳು, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಸೇರಿದಂತೆ ಕಠಿಣ ಪರೀಕ್ಷೆಗಳ ನಂತರ ಸುಮಾರು 200 ಅಭ್ಯರ್ಥಿಗಳನ್ನು ಅಗ್ನಿವೀರ್​​ಗಳಾಗಿ ಆಯ್ಕೆ ಮಾಡಲಾಗಿದೆ.

Agnipath Scheme: ಜಮ್ಮು ಕಾಶ್ಮೀರದಿಂದ ಅಗ್ನಿವೀರ್​​ಗಳ ಮೊದಲ ಬ್ಯಾಚ್ ಭಾರತೀಯ ಸೇನೆಗೆ ತರಬೇತಿಗೆ ಸೇರ್ಪಡೆ
ಸಾಂದರ್ಭಿಕ ಚಿತ್ರ
Image Credit source: India Today
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕೇಂದ್ರಾಡಳಿತ ಪ್ರದೇಶದಿಂದ ಭಾರತ ಸರ್ಕಾರದ ಪ್ರಾಯೋಜಿತ ಅಗ್ನಿಪಥ್ ಯೋಜನೆಯಡಿ (Agnipath Scheme) ಆಯ್ಕೆಯಾದ ಮೊದಲ ಬ್ಯಾಚ್​ನ “ಅಗ್ನಿವೀರ್​ಗಳು” (Agniveer) ಹಲವಾರು ಹುದ್ದೆಗಳಿಗೆ ತರಬೇತಿಗಾಗಿ ಭಾರತೀಯ ಸೇನೆಯನ್ನು (Indian Army) ಸೇರಿಕೊಂಡಿದ್ದಾರೆ. ದೈಹಿಕ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆಗಳು, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಸೇರಿದಂತೆ ಕಠಿಣ ಪರೀಕ್ಷೆಗಳ ನಂತರ ಸುಮಾರು 200 ಅಭ್ಯರ್ಥಿಗಳನ್ನು ಅಗ್ನಿವೀರ್​​ಗಳಾಗಿ ಆಯ್ಕೆ ಮಾಡಲಾಗಿದೆ.

ಈ ಅಭ್ಯರ್ಥಿಗಳನ್ನು ಶ್ರೀನಗರದಲ್ಲಿರುವ ಸೇನಾ ನೇಮಕಾತಿ ಕಚೇರಿಯಿಂದ ಭಾರತೀಯ ಸೇನೆಯ ವಿವಿಧ ರೆಜಿಮೆಂಟ್‌ಗಳ ಸುಮಾರು 30 ತರಬೇತಿ ಕೇಂದ್ರಗಳಿಗೆ ಡಿಸೆಂಬರ್ 24ರಂದು ಕಳುಹಿಸಲಾಗಿದೆ. ಅಭ್ಯರ್ಥಿಗಳು ಡಿಸೆಂಬರ್ 25ರಿಂದ 30ರವರೆಗೆ ತರಬೇತಿ ಪಡೆಯಲಿದ್ದಾರೆ.

ಇದನ್ನೂ ಓದಿ: Agniveer Scheme: ಅಗ್ನಿವೀರ್ ಯೋಜನೆಯಡಿ ಭಾರತೀಯ ನೌಕಾಪಡೆಗೆ ಮೊದಲ ಬಾರಿಗೆ 341 ಮಹಿಳೆಯರ ನೇಮಕ

ಅಗ್ನಿಪಥ್ ಯೋಜನೆಯು 17.5ರಿಂದ 21 ವರ್ಷ ವಯಸ್ಸಿನ ಯುವಕರನ್ನು 4 ವರ್ಷಗಳ ಅವಧಿಗೆ “ಅಗ್ನಿವೀರ್​ಗಳು” ಎಂದು 3 ಸೇವೆಗಳಲ್ಲಿ ಯಾವುದನ್ನಾದರೂ ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಜೂನ್ 14ರಂದು ಅನಾವರಣಗೊಂಡ ಅಗ್ನಿಪಥ್ ಯೋಜನೆಯು ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿಗೆ ನಿಯಮಗಳನ್ನು ರೂಪಿಸುತ್ತದೆ. ಈ ನಿಯಮಗಳ ಪ್ರಕಾರ, ಹದಿನೇಳೂವರೆ ಮತ್ತು 21 ವರ್ಷ ವಯಸ್ಸಿನವರು ಅಗ್ನಿಪಥ್ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅವರನ್ನು 4 ವರ್ಷಗಳ ಅಧಿಕಾರಾವಧಿಗೆ ಸೇರಿಸಿಕೊಳ್ಳಲಾಗುತ್ತದೆ. ಈ ಯೋಜನೆಯು ಜಾರಿಗೆ ಬಂದ ನಂತರ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ನಂತರ, ಈ ವರ್ಷ ಸರ್ಕಾರವು ಅಗ್ನಿಪಥ್ ಯೋಜನೆಯ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Tue, 27 December 22