AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ರಾತ್ರಿ ಊಟ ಬಡಿಸದಿದ್ದಕ್ಕೆ ಹೆಂಡತಿಯನ್ನು ಕೊಡಲಿಯಲ್ಲಿ ಕೊಚ್ಚಿ ಕೊಂದ ಗಂಡ

ಯೋಗೇಂದ್ರ ಅವರ 8 ವರ್ಷದ ಮಗ ಮತ್ತು 10 ವರ್ಷದ ಮಗಳು ತಮ್ಮ ತಾಯಿಯ ಕಿರುಚಾಟವನ್ನು ಕೇಳಿ, ಸ್ಥಳಕ್ಕೆ ಓಡಿಬಂದು ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು.

Crime News: ರಾತ್ರಿ ಊಟ ಬಡಿಸದಿದ್ದಕ್ಕೆ ಹೆಂಡತಿಯನ್ನು ಕೊಡಲಿಯಲ್ಲಿ ಕೊಚ್ಚಿ ಕೊಂದ ಗಂಡ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Dec 27, 2022 | 10:37 AM

Share

ನವದೆಹಲಿ: ಮನೆಗೆ ಹೋದ ಬಳಿಕ ರಾತ್ರಿ ಊಟ ನೀಡಲು ನಿರಾಕರಿಸಿದ ಹೆಂಡತಿಯನ್ನು ಗಂಡ ಕೊಡಲಿಯಿಂದ ಕೊಚ್ಚಿ ಕೊಂದ (Murder) ಘಟನೆ ಛತ್ತೀಸ್​ಗಢದಲ್ಲಿ (Chhattisgarh) ನಡೆದಿದೆ. ಈ ಆರೋಪದ ಮೇಲೆ ಛತ್ತೀಸ್‌ಗಢ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಛತ್ತೀಸ್​ಗಢದ ಕೊರ್ಬಾದ ಖಾಸಗಿ ಕ್ಲಿನಿಕ್‌ನಲ್ಲಿ ಕಾಂಪೌಂಡರ್ ಆಗಿರುವ ಯೋಗೇಂದ್ರ ಶ್ರೀವಾಸ್ ಎಂಬ 38 ವರ್ಷದ ವ್ಯಕ್ತಿ ಕೆಲಸ ಮುಗಿಸಿ ಹಿಂತಿರುಗಿ ಬಂದು, ಪುಸ್ತಕ ಓದುತ್ತಿದ್ದಾಗ ತನ್ನ ಪತ್ನಿಗೆ ರಾತ್ರಿ ಊಟ ಬಡಿಸುವಂತೆ ಹೇಳಿದ್ದ. ಆದರೆ, 32 ವರ್ಷದ ಮಂಜೀತಾ ತನ್ನ ಗಂಡನಿಗೆ ಊಟ ಬಡಿಸಲು ನಿರಾಕರಿಸಿದ್ದಾಳೆ. ಇದಾದ ನಂತರ ದಂಪತಿಗಳ ನಡುವೆ ಜಗಳ ನಡೆದಿದೆ.

ಕೋಪದ ಭರದಲ್ಲಿ ಯೋಗೇಂದ್ರ ತನ್ನ ಹೆಂಡತಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ನಂತರ, ಅವರ 8 ವರ್ಷದ ಮಗ ಮತ್ತು 10 ವರ್ಷದ ಮಗಳು ತಮ್ಮ ತಾಯಿಯ ಕಿರುಚಾಟವನ್ನು ಕೇಳಿ, ಸ್ಥಳಕ್ಕೆ ಓಡಿಬಂದು ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು.

ಇದನ್ನೂ ಓದಿ: Bird Flu: ಕೇರಳದಲ್ಲಿ ಹೆಚ್ಚಿದ ಹಕ್ಕಿ ಜ್ವರ; ಕೊಟ್ಟಾಯಂನಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

ತಾಯಿ ಕೊಲೆಯಾದ ಬಗ್ಗೆ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಯೋಗೇಂದ್ರನೇ ತಾನು ಹೆಂಡತಿಯನ್ನು ಕೊಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪೋಲೀಸರ ಪ್ರಕಾರ, ದಂಪತಿಗಳು ಆಗಾಗ್ಗೆ ಸಣ್ಣ ವಿಷಯಗಳಿಗೆ ಜಗಳವಾಡುತ್ತಿದ್ದರು. ಆರೋಪಿಯು ತನ್ನ ಹೆಂಡತಿಯ ವಾದದ ಸ್ವಭಾವದಿಂದ ಬಹಳ ಕಿರಿಕಿರಿ ಅನುಭವಿಸುತ್ತಿದ್ದನು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:26 am, Tue, 27 December 22