ಲಡಾಖ್‌ನ ಮಾರ್ಕಾ ಕಣಿವೆಯಲ್ಲಿ ಸಿಲುಕಿಕೊಂಡಿದ್ದ ಇಸ್ರೇಲ್ ಪ್ರಜೆಯನ್ನು ರಕ್ಷಿಸಿದ ವಾಯುಪಡೆ
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಎತ್ತರದ ಪ್ರದೇಶದಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದ ಇಸ್ರೇಲ್ ಪ್ರಜೆ ನೋಮ್ ಗಿಲ್ ಅವರನ್ನು ಭಾರತೀಯ ವಾಯುಪಡೆ ರಕ್ಷಣೆ ಮಾಡಿದೆ.
ಲಡಾಖ್‌ನ ಮಾರ್ಕಾ ಕಣಿವೆಯ ಬಳಿ ಸಿಲುಕಿಕೊಂಡಿದ್ದ ಇಸ್ರೇಲ್ ಪ್ರಜೆಯನ್ನು ಭಾರತೀಯ ವಾಯುಪಡೆ ಶನಿವಾರ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು (ಶನಿವಾರ) 1040 ಗಂಟೆಗಳಲ್ಲಿ (ಬೆಳಿಗ್ಗೆ 10.40) 114 ಹೆಲಿಕಾಪ್ಟರ್ ಘಟಕವು ಮಾರ್ಖಾ ಕಣಿವೆಯ ಸಮೀಪವಿರುವ ನಿಮಾಲಿಂಗ್ ಶಿಬಿರದಿಂದ ಅಪಘಾತದ ಸ್ಥಳಾಂತರಕ್ಕಾಗಿ ಕಾರ್ಯಚಾರಣೆಯನ್ನು ಮಾಡಿತ್ತು. ಇಸ್ರೇಲ್ ಪ್ರಜೆಯಾದ ನೋಮ್ ಗಿಲ್ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಮತ್ತು ಎತ್ತರದ ಪ್ರದೇಶದಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದರು. ಅವರ ಆಮ್ಲಜನಕದ ಮಟ್ಟವು 68% ಕ್ಕೆ ಇಳಿದಿತ್ತು. ಅವರ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಈ ಸ್ಥಳದಿಂದ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ಹೇಳಿದರು.
ವಿಂಗ್ ಕಮಾಂಡರ್ ಆಶಿಶ್ ಕಪೂರ್ ನೇತೃತ್ವದಲ್ಲಿ 114 ಹೆಲಿಕಾಪ್ಟರ್ ಘಟಕದ ಫ್ಲೈಟ್ ಕಮಾಂಡರ್, ಫ್ಲೈಟ್ ಲೆಫ್ಟಿನೆಂಟ್ ಕುಶಾಗ್ರಾ ಸಿಂಗ್ ಮತ್ತು ವಿಂಗ್ ಕಮಾಂಡರ್ ಎಸ್ ಬಡಿಯಾರಿ ಜೊತೆಗೆ ಸ್ಕ್ವಾಡ್ರನ್ ಲೀಡರ್ ಎಸ್ ನಾಗ್ಪಾಲ್, ಈ ಕಾರ್ಯಾಚರಣೆಗಾಗಿ 20 ನಿಮಿಷಗಳಲ್ಲಿ ವಾಯುಗಾಮಿಯನ್ನು ಬಳಸಿಕೊಳ್ಳಲಾಗಿದೆ.
30 ನಿಮಿಷಗಳ ನಿರಂತರ ಹುಡುಕಾಟದ ನಂತರ, ಕಣಿವೆಯ ಕೆಳಭಾಗದಲ್ಲಿರುವ ಗಾರ್ಜ್ ನದಿಯಲ್ಲಿ ಇಸ್ರೇಲ್ ಪ್ರಜೆಯಾದ ನೋಮ್ ಗಿಲ್ ಕಾಣಿಸಿಕೊಂಡರು. ಕಣಿವೆಯು ತುಂಬಾ ಕಿರಿದಾಗಿರುವುದರಿಂದ ಹೆಲಿಕಾಪ್ಟರ್ ನಡೆಸಲು ಕಷ್ಟವಾಯಿತು” ಎಂದು ಸೇನಾ ವಕ್ತಾರರು ಹೇಳಿದರು. ಸತತ ಪ್ರಯತ್ನದಿಂದ ಆ ಇಸ್ರೇಲ್ ಪ್ರಜೆಯನ್ನು ಲೇಹ್‌ಗೆ ಸ್ಥಳಾಂತರಿಸಲಾಗಿದೆ