ಏರ್ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಆರೋಪಿ ಉದ್ಯಮಿ ಶಂಕರ್ ಮಿಶ್ರಾ ಎಂಬುವವರನ್ನು ಪೊಲೀಸರು ಹುಡುಕುತ್ತಿದ್ದಾರೆ.ಇದೀಗ ಮಹಿಳೆ ಹಾಗೂ ಆರೋಪಿಯ ನಡುವೆ ನಡೆದ ವಾಟ್ಸ್ಆ್ಯಪ್ ಸಂಭಾಷಣೆ ಇದೀಗ ಬಹಿರಂಗಗೊಂಡಿದೆ. ಶಂಕರ್ನನ್ನು ಕ್ಷಮಿಸಿದ್ದೇನೆ, ದೂರು ದಾಖಲಿಸುವ ಉದ್ದೇಶ ನನಗಿಲ್ಲ ಎನ್ನುವ ರೀತಿಯಲ್ಲಿ ಸಂಭಾಷಣೆ ನಡೆದಿದೆ. ಆರೋಪಿ ಮತ್ತು ಮಹಿಳೆಯ ನಡುವಿನ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ, ಆರೋಪಿ ನವೆಂಬರ್ 28 ರಂದು ಬಟ್ಟೆ ಮತ್ತು ಬ್ಯಾಗ್‌ಗಳನ್ನು ಸ್ವಚ್ಛಗೊಳಿಸಿದ್ದಾರೆ ಮತ್ತು ನವೆಂಬರ್ 30 ರಂದು ಅದನ್ನು ತಲುಪಿಸಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮಹಿಳೆ ಆಪಾದಿತನ ಕೃತ್ಯವನ್ನು ಸ್ಪಷ್ಟವಾಗಿ ಕ್ಷಮಿಸಿದ್ದಾರೆ ಮತ್ತು ದೂರು ದಾಖಲಿಸುವ ಉದ್ದೇಶವನ್ನು ಹೊಂದಿಲ್ಲ. ಮಹಿಳೆ ಏರ್ ಇಂಡಿಯಾಕ್ಕೆ ಪರಿಹಾರಕ್ಕಾಗಿ ಡಿಸೆಂಬರ್ 20 ರಂದು ದೂರು ನೀಡಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮಿಶ್ರಾ ಅವರು ನವೆಂಬರ್ 28 ರಂದು ಇಬ್ಬರ ನಡುವೆ ಒಪ್ಪಂದ ಮಾಡಿಕೊಂಡು PayTM ನಲ್ಲಿ ಒಪ್ಪಂದದಂತೆ ಪರಿಹಾರವನ್ನು ಪಾವತಿಸಿದ್ದಾರೆ. ಘಟನೆಗೆ ಯಾವುದೇ ಪ್ರತ್ಯಕ್ಷದರ್ಶಿಗಳಿಲ್ಲ ಮತ್ತು ಕಕ್ಷಿದಾರರ ನಡುವಿನ ಒಪ್ಪಂದವು ಕ್ಯಾಬಿನ್ ಸಿಬ್ಬಂದಿಯ ಹೇಳಿಕೆಗಳಿಂದ ದೃಢೀಕರಿಸಲ್ಪಟ್ಟಿದೆ.
ಶಂಕರ್ ಮಿಶ್ರಾ ಅವರು ತಮ್ಮ ವಕೀಲರಾದ ಇಶಾನಿ ಶರ್ಮಾ ಮತ್ತು ಅಕ್ಷತ್ ಬಾಜ್‌ಪೇಯ್ ಮೂಲಕ ಹೇಳಿಕೆಯೊಂದರಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
ಮತ್ತಷ್ಟು ಓದಿ: Air India ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ಘಟನೆ ಬೆಳಕಿಗೆ
ಆರೋಪಿಯು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದು, ತನಿಖಾ ಪ್ರಕ್ರಿಯೆಗೆ ಸಹಕರಿಸಲಿದ್ದಾರೆ ಹೇಳಿಕೆಯಲ್ಲಿ ತಿಳಿಸಲಾಗಿದೆ. ನವೆಂಬರ್ 26 ರಂದು AI 102 ಬೋರ್ಡ್‌ನಲ್ಲಿ ಮಧ್ಯಾಹ್ನದ ಊಟದ ಬಳಿಕ ದೀಪಗಳನ್ನು ಆಫ್ ಮಾಡಿದ ಸ್ವಲ್ಪ ಸಮಯದ ನಂತರ, ಬಿಸಿನೆಸ್ ಕ್ಲಾಸ್ ಸೀಟ್ 8A ನಲ್ಲಿ ಕುಳಿತಿದ್ದ ಶಂಕರ್ ಮಿಶ್ರಾ ಮಹಿಳೆಯೊಬ್ಬಳ ಸೀಟ್ ಬಳಿ ಹೋಗಿ ಆಕೆಯ ಮೇಲೆ ಮೂತ್ರ ವಿಸರ್ಜಿಸಿದ್ದ. ಇದೀಗ ಆತ ತಲೆಮರೆಸಿಕೊಂಡಿದ್ದು, ಈ ವಿಚಾರವಾಗಿ ಪೊಲೀಸರು ಎರಡು ತಂಡಗಳನ್ನು ರಚನೆ ಮಾಡಿದ್ದು ಒಂದು ತಂಡ ಬೆಂಗಳೂರಿನಲ್ಲಿದ್ದರೆ ಮತ್ತೊಂದು ತಂಡ ಮುಂಬೈನಲ್ಲಿ ಬೀಡುಬಿಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ