Shraddha Walker Murder case: ಆರೋಪಿ ಅಫ್ತಾಬ್ ಪೂನಾವಾಲಾಗೆ ಮತ್ತೆ 4 ದಿನ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್
ಶ್ರದ್ಧಾ ಕೊಲೆ ಪ್ರಕರಣ ಸಂಬಂಧಿಸಿದಂತೆ ದೆಹಲಿಯ ಸಾಕೇತ್ ಕೋರ್ಟ್ ಆರೋಪಿ ಅಫ್ತಾಬ್ ಪೂನಾವಾಲಾಗೆ ನ್ಯಾಯಾಂಗ ಬಂಧನವನ್ನು 4 ದಿನಗಳವರೆಗೆ ವಿಸ್ತರಿಸಿದೆ.
ದೆಹಲಿ: ಶ್ರದ್ಧಾ ಕೊಲೆ ಪ್ರಕರಣ ಸಂಬಂಧಿಸಿದಂತೆ ದೆಹಲಿಯ ಸಾಕೇತ್ ಕೋರ್ಟ್ ಆರೋಪಿ ಅಫ್ತಾಬ್ ಪೂನಾವಾಲಾಗೆ ನ್ಯಾಯಾಂಗ ಬಂಧನವನ್ನು 4 ದಿನಗಳವರೆಗೆ ವಿಸ್ತರಿಸಿದೆ. ಜನವರಿ 10ರಂದು ಅವರನ್ನು ಭೌತಿಕವಾಗಿ ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಮೇ 18 ರಂದು ದೆಹಲಿಯ ಮೆಹ್ರೋಲಿಯಲ್ಲಿ ಶ್ರದ್ಧಾ ವಾಕರ್ (26) ಅನ್ನು ಆಕೆಯ ಗೆಳೆಯ ಅಫ್ತಾಬ್ ಹತ್ಯೆ ಮಾಡಿದ್ದ, ಹತ್ಯೆಯ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ಎಸೆದಿದ್ದ, ಶ್ರದ್ಧಾ ತಂದೆ ನಾಪತ್ತೆ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಿ, ತನಿಖೆ ನಡೆಸಲಾಗಿದೆ. ಈಗಾಗಲೇ ಆತನ ನ್ಯಾಯಂಗ ಬಂಧನದಲ್ಲಿದ್ದು, ಮತ್ತೆ ಈ ನ್ಯಾಯಂಗ ಬಂಧನವನ್ನು ವಿಸ್ತರಿಸಿದೆ, ಜೊತೆಗೆ ಜ.10 ನ್ಯಾಯಂಗ ಕರೆದುಕೊಂಡು ಬರುವಂತೆ ತಿಳಿಸಿದೆ. ಇದೇ ರೀತಿ ಪ್ರಕರಣಗಳು ಅನೇಕ ಕಡೆ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
Shraddha murder case | Delhi’s Saket Court extends the judicial custody of accused Aftab Poonawala for 4 days. The court directs to produce him physically on January 10.
(File photo) pic.twitter.com/Z7eAFsr4Ul
ಪ್ರಕರಣದಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ
ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಕಳೆದ ಕೆಲ ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ. ಅಫ್ತಾಬ್ ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸರು ಮೆಹ್ರೌಲಿ ಅರಣ್ಯದಿಂದ ಮೃತದೇಹದ ಕೆಲವು ತುಣುಕುಗಳನ್ನು ಸಂಗ್ರಹಿಸಿದ್ದರು. ಈ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಡಿಎನ್‌ಎ ವರದಿ ಬಂದಿತ್ತು
ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುದೀರ್ಘ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆ ಮೆಹ್ರೌಲಿ ಮತ್ತು ಗುರುಗ್ರಾಮ್ ಅರಣ್ಯದಿಂದ ಪೊಲೀಸರಿಗೆ ಕೆಲವು ಮೂಳೆಗಳು ಸಿಕ್ಕಿದ್ದವು. ಈ ಮೂಳೆಗಳು ಶ್ರದ್ಧಾ ಅವರ ತಂದೆ ಮತ್ತು ಸಹೋದರನ ಡಿಎನ್‌ಎಯೊಂದಿಗೆ ಹೊಂದಿಕೆಯಾಗಿದ್ದು, ಈ ಹಿಂದೆ ಪೊಲೀಸರಿಗೆ ತನಿಖಾ ವರದಿ ಬಂದಿತ್ತು. ಇದರಲ್ಲಿ ಪೊಲೀಸರಿಗೆ ಕಾಡಿನಿಂದ ಪತ್ತೆಯಾದ ಮೂಳೆಗಳು ಶ್ರದ್ಧಾ ಅವರದೇ ಎಂಬುದು ದೃಢಪಟ್ಟಿದೆ.
Published On - 4:36 pm, Fri, 6 January 23