AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India Flight: ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ದೆಹಲಿಗೆ ವಾಪಸ್

ವಿಮಾನ ಸಿಬ್ಬಂದಿಯೊಂದಿಗೆ ಪ್ರಯಾಣಿಕರೊಬ್ಬರು ಜಗಳವಾಡಿದ ಪರಿಣಾಮ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನವು ಮತ್ತೆ ದೆಹಲಿಗೆ ಬಂದಿಳಿದಿದೆ.

Air India Flight: ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ದೆಹಲಿಗೆ ವಾಪಸ್
ಏರ್ ಇಂಡಿಯಾ
ನಯನಾ ರಾಜೀವ್
|

Updated on: Apr 10, 2023 | 11:18 AM

Share

ವಿಮಾನ ಸಿಬ್ಬಂದಿಯೊಂದಿಗೆ ಪ್ರಯಾಣಿಕರೊಬ್ಬರು ಜಗಳವಾಡಿದ ಪರಿಣಾಮ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನವು ಮತ್ತೆ ದೆಹಲಿಗೆ ಬಂದಿಳಿದಿದೆ. ಪ್ರಯಾಣಿಕರು ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ವಿಮಾನವು ಹಿಂದಿರುಗಿತು ಮತ್ತೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿತು.  ಘಟನೆ ಕುರಿತು ವಿಮಾನಯಾನ ಸಂಸ್ಥೆ ದೆಹಲಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಲಾಗಿದೆ. ಈ ಪ್ರಯಾಣಿಕ ಪ್ರಸ್ತುತ ದೆಹಲಿ ವಿಮಾನ ನಿಲ್ದಾಣದಲ್ಲಿದ್ದಾರೆ. ವಿಮಾನದಲ್ಲಿ 225 ಪ್ರಯಾಣಿಕರಿದ್ದರು. ಸ್ವಲ್ಪ ಸಮಯದ ಬಳಿಕ ವಿಮಾನವು ಲಂಡನ್​ಗೆ ಹಾರಿತು.

ಇತ್ತೀಚೆಗೆ ನಡೆದ ಮತ್ತೊಂದು ಘಟನೆ

ಲಂಡನ್- ಮುಂಬೈ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಮೇರಿಕ ಪ್ರಜೆಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದು, 37 ವರ್ಷದ ರಮಾಕಾಂತ್ ವಿರುದ್ಧ ಮುಂಬೈ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಓದಿ:  Air India: ವಿಮಾನದಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಾಗ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಕೈಕಾಲು ಕಟ್ಟಿ ಕೂರಿಸಿದ ಸಹ ಪ್ರಯಾಣಿಕರು

ಮಾ.11 ರಂದು ಚಲಿಸುತ್ತಿದ್ದ ವಿಮಾನದಲ್ಲಿ ಈ ವ್ಯಕ್ತಿ, ತನ್ನ ಸಹ ಪ್ರಯಾಣಿರೊಂದಿಗೆ ಅನುಚಿತವಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 336 (ಮಾನವನ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದ್ದು) ಮತ್ತು ಏರ್‌ಕ್ರಾಫ್ಟ್ ಆಕ್ಟ್ 1937, 22 (ಪೈಲಟ್-ಇನ್-ಕಮಾಂಡ್ ನೀಡಿದ ಕಾನೂನುಬದ್ಧ ಸೂಚನೆಯನ್ನು ಅನುಸರಿಸಲು ನಿರಾಕರಿಸಿದ್ದು), ಸೆಕ್ಷನ್ 23 ರ ಪ್ರಕಾರ (ಆಕ್ರಮಣ ಮತ್ತು ಇತರ ಕ್ರಿಯೆಗಳು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ ಅಥವಾ ಉತ್ತಮ ಕ್ರಮ ಮತ್ತು ಶಿಸ್ತಿಗೆ ಅಪಾಯವನ್ನುಂಟುಮಾಡುತ್ತವೆ) ಮತ್ತು ಧೂಮಪಾನ ಮಾಡಿದ್ದಕ್ಕಾಗಿ ಸೆಕ್ಷನ್ 25 ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ