ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್!

ಬೆಂಗಳೂರು- ದೆಹಲಿ ಏರ್ ಇಂಡಿಯಾ ವಿಮಾನ ಹಾರಾಟ ನಡೆಸುವ ಮುನ್ನ ಪೈಲಟ್ ಕಾಕ್‌ಪಿಟ್‌ನಲ್ಲಿ ಕುಸಿದು ಬಿದ್ದಿದ್ದಾರೆ. ಈ ಘಟನೆಯಿಂದಾಗಿ, ಏರ್ ಇಂಡಿಯಾ ವಿಮಾನ AI2414 ಹಾರಾಟ ವಿಳಂಬವಾಯಿತು. ನಂತರ ವಿಮಾನಯಾನ ಸಂಸ್ಥೆಯ ಕಾಕ್‌ಪಿಟ್ ಸಿಬ್ಬಂದಿಯ ಮತ್ತೊಬ್ಬ ಸದಸ್ಯರಿಂದ ವಿಮಾನ ಹಾರಾಟ ನಡೆಸಲಾಯಿತು. ಇದರಿಂದ ದುರಂತವೊಂದು ತಪ್ಪಿದಂತಾಗಿದೆ.

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್!
Air India Flight

Updated on: Jul 04, 2025 | 11:08 PM

ಬೆಂಗಳೂರು, ಜುಲೈ 4: ಇಂದು (ಶುಕ್ರವಾರ) ಮುಂಜಾನೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಹಾರಾಟ ನಡೆಸುವ ಮುನ್ನ ಪೈಲಟ್ ಕಾಕ್‌ಪಿಟ್‌ನಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನವನ್ನು ಕೆಲಕಾಲ ಏರ್​ಪೋರ್ಟ್​ನಲ್ಲೇ ನಿಲ್ಲಿಸಲಾಯಿತು. ಏರ್ ಇಂಡಿಯಾ (Air India) ಪೈಲಟ್ ಅನಾರೋಗ್ಯದಿಂದಾಗಿ ಇಂದು (ಜುಲೈ 4) ಬೆಳಿಗ್ಗೆ ಬೆಂಗಳೂರಿನಿಂದ ದೆಹಲಿಗೆ ತೆರಳಬೇಕಿದ್ದ ವಿಮಾನಕ್ಕೆ ಸ್ವಲ್ಪ ಅಡಚಣೆ ಉಂಟಾಯಿತು. ವಿಮಾನ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಪೈಲಟ್ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮೂಲಗಳ ಪ್ರಕಾರ, ಬೆಂಗಳೂರಿನಿಂದ ದೆಹಲಿಗೆ AI2414 ವಿಮಾನ ಹಾರಾಟ ನಡೆಸುವ ಮುನ್ನ ಪೈಲಟ್ ಕುಸಿದು ಬಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಬದಲು ಬೇರೆ ಪೈಲಟ್‌ ನಿಯೋಜನೆ ಮಾಡಿದ ನಂತರ ವಿಮಾನ ಹಾರಾಟ ನಡೆಸಲಾಯಿತು. ಇದಕ್ಕೆ ಏರ್ ಇಂಡಿಯಾ ವಿಮಾನವನ್ನು ಚಲಾಯಿಸಲು ಬದಲಿ ಪೈಲಟ್ ವ್ಯವಸ್ಥೆ ಮಾಡಿತು. ಈ ಅನಿರೀಕ್ಷಿತ ಘಟನೆಯಿಂದಾಗಿ, ಪ್ರಯಾಣಿಕರು ಸ್ವಲ್ಪ ತಡವಾಗಿ ದೆಹಲಿಯನ್ನು ತಲುಪಿದರು.  ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ದೃಢಪಡಿಸಿದೆ.

ಇದನ್ನೂ ಓದಿ: ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಮಂದಿ ಸಾವು; ಸರ್ಕಾರದಿಂದ ಅಧಿಕೃತ ಘೋಷಣೆ

“ಜುಲೈ 4ರ ಮುಂಜಾನೆ ನಮ್ಮ ಪೈಲಟ್‌ಗಳಲ್ಲಿ ಒಬ್ಬರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಇತ್ತು. ಇದರ ಪರಿಣಾಮವಾಗಿ ಆ ಪೈಲಟ್ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗದೆ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಏರ್ ಇಂಡಿಯಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.


ಪೈಲಟ್ ಈಗ ಸ್ಥಿರ ಸ್ಥಿತಿಯಲ್ಲಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:00 pm, Fri, 4 July 25