ಇನ್ನೊಬ್ಬ ಮಹಿಳೆ ಜೊತೆ ಪ್ಲಾನ್ ಮಾಡಿ ಕೊಲೆ; ಏರ್ ಇಂಡಿಯಾ ಪೈಲಟ್ ಸಾವಿನ ಬಗ್ಗೆ ಕುಟುಂಬಸ್ಥರ ಆರೋಪ

ಏರ್ ಇಂಡಿಯಾ ಪೈಲಟ್​ ಆಗಿದ್ದ ಯುವತಿಯ ಸಾವು ಇದೀಗ ಭಾರೀ ಅನುಮಾನಗಳನ್ನು ಹುಟ್ಟುಹಾಕಿದೆ. ಇದು ಆತ್ಮಹತ್ಯೆಯಲ್ಲ, ಪ್ಲಾನ್ ಮಾಡಿ ಮಾಡಲಾದ ಕೊಲೆ. ಈ ಕೊಲೆಯಲ್ಲಿ ಮೃತ ಯುವತಿಯ ಪ್ರಿಯಕರನ ಜೊತೆ ಇನ್ನೋರ್ವ ಮಹಿಳೆಯೂ ಭಾಗಿಯಾಗಿದ್ದಾಳೆ ಎಂದು ಮೃತ ಪೈಲಟ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನೊಬ್ಬ ಮಹಿಳೆ ಜೊತೆ ಪ್ಲಾನ್ ಮಾಡಿ ಕೊಲೆ; ಏರ್ ಇಂಡಿಯಾ ಪೈಲಟ್ ಸಾವಿನ ಬಗ್ಗೆ ಕುಟುಂಬಸ್ಥರ ಆರೋಪ
ಸೃಷ್ಟಿ
Follow us
ಸುಷ್ಮಾ ಚಕ್ರೆ
|

Updated on: Nov 28, 2024 | 8:04 PM

ನವದೆಹಲಿ: ಮುಂಬೈನ ಅಂಧೇರಿಯ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾದ 25 ವರ್ಷದ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ ಸಾವು ಭಾರೀ ಚರ್ಚೆಗೆ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಂಡು ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿತ್ತು. ಆದರೆ, ಇದೊಂದು ಕೊಲೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ಆಕೆ ಸಾವನ್ನಪ್ಪಿದ್ದಾಳೆ ಎಂದು ಸುದ್ದಿ ತಿಳಿಯುವ 15 ನಿಮಿಷ ಮೊದಲು ಆಕೆ ತನ್ನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಖುಷಿಯಾಗಿ ಮಾತನಾಡಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಸೃಷ್ಟಿಯನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸೃಷ್ಟಿಯ 27 ವರ್ಷದ ಪ್ರೇಮಿ ಆದಿತ್ಯ ಪಂಡಿತ್ ಆಕೆಗೆ ಸಾರ್ವಜನಿಕವಾಗಿ ಬೈದು, ಮಾನಸಿಕ ಹಿಂಸೆ ನೀಡಿದ್ದ ಎಂದು ಅವರು ಆರೋಪಿಸಿದ್ದಾರೆ. ಸೃಷ್ಟಿಯ ಚಿಕ್ಕಪ್ಪ ವಿವೇಕ್ ತುಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಸೃಷ್ಟಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದ್ದಾರೆ. ಆದರೆ ಆಕೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಆಕೆಯ ಪ್ರೇಮಿಯೇ ಏನೋ ಮಾಡಿರುತ್ತಾನೆ. 15 ನಿಮಿಷ ಮೊದಲು ಸೃಷ್ಟಿ ತನ್ನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಮಾತನಾಡುವಾಗ ತುಂಬಾ ಖುಷಿಯಾಗಿ ಮಾತನಾಡಿದ್ದಳು. ಅವಳ ಧ್ವನಿಯಲ್ಲಿ ಯಾವುದೇ ನೋವಾಗಲಿ ಬೇಸರವಾಗಲಿ ಇರಲಿಲ್ಲ. ಅದಾದ 15 ನಿಮಿಷದಲ್ಲಿ ಆಕೆ ಸಾವನ್ನಪ್ಪಿರುವ ವಿಷಯ ನಮಗೆ ತಿಳಿಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral: ಪ್ರಾಣ ಪಣಕ್ಕಿಟ್ಟು ರೈಲ್ವೆ ಸೇತುವೆಯಲ್ಲಿ ನಿಂತಿದ್ದ ರೈಲಿನಡಿ ಹೋಗಿ ದುರಸ್ತಿ ಕಾರ್ಯ ಮಾಡಿದ ಲೋಕೋ ಪೈಲಟ್

ಈ ಬಗ್ಗೆ ವಿವೇಕ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆದಿತ್ಯನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸೃಷ್ಟಿ ಮೃತದೇಹ ಪತ್ತೆಯಾದ ಫ್ಲಾಟ್​ನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆದಿತ್ಯ ಸೋಮವಾರ ತನ್ನ ಕಾರಿನಲ್ಲಿ ಫರಿದಾಬಾದ್‌ಗೆ ತೆರಳಿದಾಗ ಸೃಷ್ಟಿ ಅವರಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವುದಾಗಿ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದಿತ್ಯ ಹೆದರಿ ಫ್ಲಾಟ್‌ಗೆ ವಾಪಾಸ್ ಬಂದಾಗ ಅದರ ಬಾಗಿಲು ಲಾಕ್ ಆಗಿತ್ತು. ಆದಿತ್ಯ ಮತ್ತು ಇನ್ನೊಬ್ಬ ಮಹಿಳಾ ಪೈಲಟ್ ಆ ಫ್ಲಾಟ್​ನ ಬೀಗ ಇರುವ ಇನ್ನೊಬ್ಬರನ್ನು ಕರೆತಂದರು. ಅವರು ಬಾಗಿಲು ತೆರೆದರು. ಆಗ ಕುತ್ತಿಗೆಗೆ ಡೇಟಾ ಕೇಬಲ್‌ ಸುತ್ತಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸೃಷ್ಟಿಯನ್ನು ನೋಡಿದ ಅವರು ತಕ್ಷಣ ಸೃಷ್ಟಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು ಎಂದು ಆದಿತ್ಯ ವಿವರಿಸಿದ್ದಾನೆ.

ಇದನ್ನೂ ಓದಿ: ಆಗ್ರಾ ಬಳಿ ಮಿಗ್-29 ಯುದ್ಧ ವಿಮಾನ ಪತನ; ಪೈಲಟ್‌ಗಳು ಪಾರು

ಇನ್ನೋರ್ವ ಮಹಿಳಾ ಪೈಲಟ್ ಜೊತೆ ಸಂಬಂಧ ಹೊಂದಿದ್ದ ಆದಿತ್ಯ ಆಕೆಯ ಕಾರಣದಿಂದ ಸೃಷ್ಟಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ್ದ. ಅವಳನ್ನು ನಡುರಸ್ತೆಯಲ್ಲಿ ಕಾರಿನಿಂದ ಇಳಿಸಿ ನಿಂದಿಸಿದ್ದ. ಅದೇ ಮಹಿಳೆಯ ಜೊತೆ ಸೇರಿ ಸೃಷ್ಟಿಯನ್ನು ಕೊಂದು ಅವರಿಬ್ಬರೂ ಇದೊಂದು ಆತ್ಮಹತ್ಯೆ ಎಂದು ನಾಟಕವಾಡುತ್ತಿದ್ದಾರೆ ಎಂದು ಸೃಷ್ಟಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಗಲೆಲ್ಲ ಬಸನಗೌಡ ಯತ್ನಾಳ್ ವಿಷಯದಲ್ಲಿ ಮಾತಾಡುವುದು ಇಷ್ಟವಿಲ್ಲ: ವಿಜಯೇಂದ್ರ
ಹಗಲೆಲ್ಲ ಬಸನಗೌಡ ಯತ್ನಾಳ್ ವಿಷಯದಲ್ಲಿ ಮಾತಾಡುವುದು ಇಷ್ಟವಿಲ್ಲ: ವಿಜಯೇಂದ್ರ
ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್​ಗೆ ಬೆಚ್ಚಿದ ಆಸೀಸ್
ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್​ಗೆ ಬೆಚ್ಚಿದ ಆಸೀಸ್
ಯತ್ನಾಳ್ ಲಿಂಗಾಯತರ ಕ್ಷಮಾಪಣೆ ಕೇಳಿ ಗೌರವ ಉಳಿಸಿಕೊಳ್ಳಲಿ: ಸ್ವಾಮೀಜಿ
ಯತ್ನಾಳ್ ಲಿಂಗಾಯತರ ಕ್ಷಮಾಪಣೆ ಕೇಳಿ ಗೌರವ ಉಳಿಸಿಕೊಳ್ಳಲಿ: ಸ್ವಾಮೀಜಿ
ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು: ವಿಮಾನದಲ್ಲಿ ಪ್ರವಾಸ
ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು: ವಿಮಾನದಲ್ಲಿ ಪ್ರವಾಸ
ಆನೇಕಲ್: ಗಂಗೊಂಡಹಳ್ಳಿಯಲ್ಲಿ ಜಮೀನಿಗೆ ನುಗ್ಗಿದ 8 ಕಾಡಾನೆಗಳ ಹಿಂಡು
ಆನೇಕಲ್: ಗಂಗೊಂಡಹಳ್ಳಿಯಲ್ಲಿ ಜಮೀನಿಗೆ ನುಗ್ಗಿದ 8 ಕಾಡಾನೆಗಳ ಹಿಂಡು
ಮಾತಾಡಿದರೆ ಯತ್ನಾಳ್ ಸರಿಹೋಗುತ್ತಾರೆ, ಸಮಸ್ಯೆಯೇನೂ ಇಲ್ಲ: ಯಡಿಯೂರಪ್ಪ
ಮಾತಾಡಿದರೆ ಯತ್ನಾಳ್ ಸರಿಹೋಗುತ್ತಾರೆ, ಸಮಸ್ಯೆಯೇನೂ ಇಲ್ಲ: ಯಡಿಯೂರಪ್ಪ
ಅಂಬೇಡ್ಕರ್ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವೆಂದು ಆಚರಣೆ
ಅಂಬೇಡ್ಕರ್ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವೆಂದು ಆಚರಣೆ
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ