AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Most Polluted Cities ವಾಯು ಮಾಲಿನ್ಯದಿಂದ ತತ್ತರಿಸಿದ ಭಾರತದ ನಗರಗಳು; ಅತೀ ಕಲುಷಿತ ನಗರವಿರುವುದು ಬಿಹಾರದಲ್ಲಿ

ಭೂಮಿ ಮತ್ತು ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಮುನ್ಸೂಚಕ ಏಜೆನ್ಸಿಯಾದ ಸಫರ್ ಪ್ರಕಾರ, ಪ್ರತಿಕೂಲವಾದ ಗಾಳಿಯಿಂದಾಗಿ ದೆಹಲಿಯ ಪಿಎಂ 2.5 ಮಾಲಿನ್ಯದಲ್ಲಿ ಶುಕ್ರವಾರ ಶೇ 30 ಇದ್ದದ್ದು ಶನಿವಾರ ಶೇ 21 ಕ್ಕೆ ಇಳಿದಿದೆ.

Most Polluted Cities ವಾಯು ಮಾಲಿನ್ಯದಿಂದ ತತ್ತರಿಸಿದ ಭಾರತದ ನಗರಗಳು; ಅತೀ ಕಲುಷಿತ ನಗರವಿರುವುದು ಬಿಹಾರದಲ್ಲಿ
ದೆಹಲಿ ವಾಯಮಾಲಿನ್ಯ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Nov 08, 2022 | 12:55 PM

Share

2022 ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯದ (Air Pollution) ಮಟ್ಟವು ಹದಗೆಟ್ಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಬಿಹಾರದ ಕತಿಹಾರ್ ನವೆಂಬರ್ 7 ರಂದು 163 ಭಾರತೀಯ ನಗರಗಳಲ್ಲಿ 360 ರಷ್ಟು AQI (ವಾಯು ಗುಣಮಟ್ಟ ಸೂಚ್ಯಂಕ) ಅನ್ನು ಹೊಂದಿತ್ತು. ದೆಹಲಿಯ ಎಕ್ಯೂಐ 354, ನೋಯ್ಡಾ 328 ಮತ್ತು ಗಾಜಿಯಾಬಾದ್ 304 ರಷ್ಟಿದೆ ಎಂದು ಡೇಟಾ ತೋರಿಸುತ್ತದೆ. ಬೇಗುಸರಾಯ್ (ಬಿಹಾರ), ಬಲ್ಲಬ್‌ಗಢ್, ಫರಿದಾಬಾದ್, ಕೈತಾಲ್ ಮತ್ತು ಹರಿಯಾಣದ ಗುರುಗ್ರಾಮ್ ಮತ್ತು ಗ್ವಾಲಿಯರ್ (ಮಧ್ಯ ಪ್ರದೇಶ) ಸೋಮವಾರ ಬಿಡುಗಡೆ ಮಾಡಲಾದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿದೆ. ಡೇಟಾವು ಭಾರತಕ್ಕೆ ಎಚ್ಚರಿಕೆಯ ಕರೆಯಂತಿದೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಪಂಜಾಬ್‌ನಲ್ಲಿ ಬುಧವಾರ 3,634 ಕೃಷಿ ತ್ಯಾಜ್ಯಗಳಿಗೆ ಬೆಂಕಿ ವರದಿ ಮಾಡಿದೆ, ಇದು ಈ ವರ್ಷ ಇದುವರೆಗಿನ ಅತಿ ಹೆಚ್ಚು.

ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪರಿಸರ ಸಚಿವ ಗೋಪಾಲ್ ರಾಯ್ ಅವರು ಉತ್ತರ ಪ್ರದೇಶ ಮತ್ತು ಹರಿಯಾಣ ಮುಖ್ಯಮಂತ್ರಿಗಳಿಗೆ ರಾಜಧಾನಿಯ ಗಡಿಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಅನಗತ್ಯ ಸರಕುಗಳನ್ನು ಸಾಗಿಸುವ ಟ್ರಕ್‌ಗಳನ್ನು ಬೇರೆಡೆಗೆ ತಿರುಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಭೂಮಿ ಮತ್ತು ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಮುನ್ಸೂಚಕ ಏಜೆನ್ಸಿಯಾದ ಸಫರ್ ಪ್ರಕಾರ, ಪ್ರತಿಕೂಲವಾದ ಗಾಳಿಯಿಂದಾಗಿ ದೆಹಲಿಯ ಪಿಎಂ 2.5 ಮಾಲಿನ್ಯದಲ್ಲಿ ಶುಕ್ರವಾರ ಶೇ 30 ಇದ್ದದ್ದು ಶನಿವಾರ ಶೇ 21 ಕ್ಕೆ ಇಳಿದಿದೆ. ಆ ಕಡೆಯಿಂದ ಈ ಕಡೆ ದೂಳಿನ ಕಣ ಕರೆದೊಯ್ಯುವ ಗಾಳಿಯು ವಾತಾವರಣದ ಕೆಳಮಟ್ಟದ ಎರಡು ಪದರಗಳಲ್ಲಿ ಬೀಸುತ್ತದೆ. ಟ್ರೋಪೋಸ್ಫಿಯರ್ ಮತ್ತು ಸ್ಟ್ರಾಟೋಸ್ಪಿಯರ್ ಈ ಎರಡು ಪದರಗಳಲ್ಲಿ ಅದು ಬೀಸುತ್ತದೆ. ಇದೇ ಗಾಳಿ ಕೃಷಿ ತಾಜ್ಯ ಸುಡುವ ಬೆಂಕಿಯ ಹೊಗೆಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಒಯ್ಯುತ್ತದೆ.

ವಾಯು ಗುಣಮಟ್ಟ ಸೂಚ್ಯಂಕ ಅಥವಾ AQI PM 2.5 ಮಟ್ಟಗಳ ಸಾಂದ್ರತೆಯನ್ನು ಅಳೆಯುತ್ತದೆ. 2.5 ಮೈಕ್ರಾನ್‌ಗಳಿಗಿಂತ ಕಡಿಮೆಯಿರುವ ಸೂಕ್ಷ್ಮ ಕಣಗಳು ರಕ್ತಪ್ರವಾಹವನ್ನು ಪ್ರವೇಶಿಸಬಹುದು ಮತ್ತು ಶ್ವಾಸಕೋಶಗಳು ಮತ್ತು ಹೃದಯವನ್ನು ಭೇದಿಸಬಹುದು. ಇದು ದೀರ್ಘಕಾಲದ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದೆ.

ವಿಷಕಾರಿ ಗಾಳಿಯು ಆರೋಗ್ಯಕರ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಲ್ಲದೆ, ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಅಕಾಲಿಕ ಮರಣವನ್ನು ಉಂಟುಮಾಡುತ್ತದೆ. ಗ್ರೀನ್‌ಪೀಸ್ ಪ್ರಕಾರ, ವಾಯು ಮಾಲಿನ್ಯದಿಂದಾಗಿ 2017 ರಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.

Published On - 12:51 pm, Tue, 8 November 22

Follow Us
TV9 Web
TV9 Web

TV9 Kannada

Read More
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?