ಆಕಾಶ ಏರ್‌ನ ದೆಹಲಿ-ಬೆಂಗಳೂರು ವಿಮಾನಕ್ಕೆ ಬಾಂಬ್ ಬೆದರಿಕೆ
ದೆಹಲಿ-ಬೆಂಗಳೂರು ಆಕಾಶ ಏರ್ ವಿಮಾನ ಬುಧವಾರ ಬಾಂಬ್ ಬೆದರಿಕೆಯ ನಂತರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ. QP 1335 ವಿಮಾನವು ಮಧ್ಯಾಹ್ನ 2 ಗಂಟೆಗೆ ದೆಹಲಿಯಲ್ಲಿ ಇಳಿಯಲು ಸಿದ್ಧವಾಗಿದೆ ಎಂದು ಆಕಾಶ ಏರ್ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಅಕ್ಟೋಬರ್ 16: 174 ಪ್ರಯಾಣಿಕರೊಂದಿಗೆ ಪ್ರಯಾಣ ಬೆಳೆಸಿದ್ದ ದೆಹಲಿ-ಬೆಂಗಳೂರು ಆಕಾಶ ಏರ್ ವಿಮಾನ ಬುಧವಾರ ಬಾಂಬ್ ಬೆದರಿಕೆಯ ನಂತರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ. QP 1335 ವಿಮಾನವು ಮಧ್ಯಾಹ್ನ 2 ಗಂಟೆಗೆ ದೆಹಲಿಯಲ್ಲಿ ಇಳಿಯಲು ಸಿದ್ಧವಾಗಿದೆ ಎಂದು ಆಕಾಶ ಏರ್ ಹೇಳಿಕೆಯಲ್ಲಿ ತಿಳಿಸಿದೆ.
“ಅಕಾಶ ಏರ್ ವಿಮಾನ ಕ್ಯುಪಿ 1335, ಅಕ್ಟೋಬರ್ 16, 2024 ರಂದು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು. ಇದರಲ್ಲಿ 174 ಪ್ರಯಾಣಿಕರು, 3 ಮಕ್ಕಳು ಮತ್ತು 7 ಸಿಬ್ಬಂದಿಯನ್ನು ಇದ್ದು, ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಿದೆ. ಆಕಾಶ ಏರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ ಮತ್ತು ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ವಿಮಾನವನ್ನು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲು ಪೈಲಟ್‌ಗೆ ಸೂಚಿಸಿದ್ದಾರೆ. ದೆಹಲಿಯಲ್ಲಿ ಸುರಕ್ಷಿತ ಲ್ಯಾಂಡಿಂಗ್‌ಗಾಗಿ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಕ್ಯಾಪ್ಟನ್ ಅನುಸರಿಸುತ್ತಿದ್ದಾರೆ ಆಗಮನದ ಅಂದಾಜು ಸಮಯ ಸುಮಾರು 14:00 ಗಂಟೆಗಳು ”ಎಂದು ಆಕಾಶ ಏರ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Hi Team, please note Akasa Air flight QP 1335, flying from Delhi to Bengaluru on October 16, 2024, and carrying 174 passengers, 3 infants and 7 crew members on board, received a security alert.
The Akasa Air Emergency Response teams are monitoring the situation and have…
— Akasa Air (@AkasaAir) October 16, 2024
ಅಮೆರಿಕಕ್ಕೆ ಹೋಗುವ ಒಂದು ವಿಮಾನ ಸೇರಿದಂತೆ ಏಳು ವಿಮಾನಗಳು ಮಂಗಳವಾರ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ, ವಿವಿಧ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂಬೈನಿಂದ ಮೂರು ಅಂತರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದ ಒಂದು ದಿನದ ನಂತರ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ ಮೂಲಕ ಬೆದರಿಕೆಗಳು ಬಂದಿದ್ದು, ನೂರಾರು ಪ್ರಯಾಣಿಕರು ಮತ್ತು ಏರ್‌ಲೈನ್ ಸಿಬ್ಬಂದಿಗೆ ತೊಂದರೆಯಾಗಿದೆ. ಸೋಮವಾರ ಪೋಸ್ಟ್ ಮಾಡಿದ ಸಂದೇಶಗಳು ಹುಸಿ ಎನ್ನಲಾಗಿದೆ.
ಮಂಗಳವಾರ, ದೆಹಲಿಯಿಂದ ಷಿಕಾಗೋಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 777-300 ಇಆರ್ ವಿಮಾನವನ್ನು ಬಾಂಬ್ ಬೆದರಿಕೆಯ ನಂತರ ಕೆನಡಾದ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (ಆರ್‌ಸಿಎಂಪಿ) ಫ್ಲೈಟ್ ನುನಾವುಟ್‌ನ ಇಕಾಲುಯಿಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸಿಬ್ಬಂದಿ ಸೇರಿದಂತೆ ಎಲ್ಲಾ 211 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ
ಏತನ್ಮಧ್ಯೆ, ಕಳೆದ ಎರಡು ದಿನಗಳಲ್ಲಿ, ಕನಿಷ್ಠ 10 ಭಾರತೀಯ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ ಮತ್ತು ಭದ್ರತಾ ತಪಾಸಣೆಯ ನಂತರ, ಆಯಾ ವಿಮಾನಗಳಲ್ಲಿ ಅನುಮಾನಾಸ್ಪದವಾದುದು ಏನೂ ಕಂಡುಬಂದಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ