Sign In

By signing in or creating an account, you agree with Associated Broadcasting Company's Terms & Conditions and Privacy Policy.

Akasa Airlines: ಆಗಸ್ಟ್ 7 ರಂದು ಆಕಾಶ ಏರ್​ಲೈನ್ಸ್​ನ ಮೊದಲ ವಿಮಾನ ಹಾರಾಟ ಆರಂಭ, ಬುಕಿಂಗ್ ಶುರು

ಆಗಸ್ಟ್ 7 ರಂದು ಆಕಾಶ ಏರ್​ಲೈನ್ಸ್​ನ ಮೊದಲ ವಿಮಾನ ಹಾರಾಟ ನಡೆಸಲಿದ್ದು, ಬುಕಿಂಗ್ ಶುರುವಾಗಿದೆ.

Akasa Airlines: ಆಗಸ್ಟ್ 7 ರಂದು ಆಕಾಶ ಏರ್​ಲೈನ್ಸ್​ನ ಮೊದಲ ವಿಮಾನ ಹಾರಾಟ ಆರಂಭ, ಬುಕಿಂಗ್ ಶುರು
Akasa
Follow us
TV9 Web
| Updated By: ನಯನಾ ರಾಜೀವ್

Updated on:Jul 22, 2022 | 11:22 AM

ಆಗಸ್ಟ್ 7 ರಂದು ಆಕಾಶ ಏರ್​ಲೈನ್ಸ್​ನ ಮೊದಲ ವಿಮಾನ ಹಾರಾಟ ನಡೆಸಲಿದ್ದು, ಬುಕಿಂಗ್ ಶುರುವಾಗಿದೆ. ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ತನ್ನ ಮೊದಲ ಸೇವೆಯನ್ನು ಆರಂಭಿಸುವ ಮೂಲಕ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ತಿಳಿಸಿದೆ.

ಆಗಸ್ಟ್ 7 ರಿಂದ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರಕ್ಕೊಮ್ಮೆ ಕಾರ್ಯನಿರ್ವಹಿಸುವ 28 ವಿಮಾನಗಳು ಮತ್ತು ಆಗಸ್ಟ್ 13 ರಿಂದ ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ 28 ವಿಮಾನಗಳ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ ಎಂದು ಆಕಾಶ ಏರ್ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ಎರಡು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಲ್ಲಿ ಹಾರಾಟ ಕಾರ್ಯಾಚರಣೆ ನಡೆಸಲಾಗುವುದು ಎಂದು ಏರ್‌ಲೈನ್ ಹೇಳಿದೆ.

ಭಾರತದ ವಾರನ್‌ ಬಫೆಟ್‌ ಖ್ಯಾತಿಯ ರಾಕೇಶ್‌ ಜುಂಜುನ್‌ವಾಲಾ ಅವರ ಬೆಂಬಲದಲ್ಲಿ ಆಕಾಶ ಏರ್‌ ಭಾರತೀಯ ವಿಮಾನಯಾನ ಸೇವೆಗೆ ದಾಪುಗಾಲಿಡಲು ಸಂಪೂರ್ಣ ಸಿದ್ಧವಾಗಿದೆ.

ಮುಂಬೈ ಮತ್ತು ಅಹಮದಾಬಾದ್ ನಡುವಿನ ವಿಮಾನಗಳೊಂದಿಗೆ ಹೊಚ್ಚಹೊಸ ಬೋಯಿಂಗ್ 737 ಮ್ಯಾಕ್ಸ್ ವಿಮಾನದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ” ಎಂದು ಆಕಾಶ ಏರ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್ ಹೇಳಿದ್ದಾರೆ.

ಮುಂಬೈ ಮೂಲದ ಸಂಸ್ಥೆ ಇದಾಗಿದ್ದು ಕಳೆದ ಅಕ್ಟೋಬರ್‌ನಲ್ಲಿ, ವಿಮಾನಯಾನ ಸಂಸ್ಥೆ ಆರಂಭಿಸಲು ಅಗತ್ಯವಾಗಿರುವ ನಿರಪೇಕ್ಷಣಾ ಪತ್ರವನ್ನು ನಾಗರಿಕ ವಿಮಾನಯಾನ ಸಚಿವಾಲಯದಿಂದ ಪಡೆದುಕೊಂಡಿತ್ತು. ಆದರೆ ಮೊದಲ ವಿಮಾನ ಆಗಮಿಸುವುದು ತಡವಾದ್ದರಿಂದ ಜುಲೈನಲ್ಲಿ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆರಂಭಿಸುವುದಾಗಿ ಸಂಸ್ಥೆ ತಿಳಿಸಿತ್ತು.

ಆಕಾಶ್ ಏರ್ 2021 ರ ನವೆಂಬರ್ 26 ರಂದು 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಜೂನ್ ವೇಳೆಗೆ ಮೊದಲ ವಿಮಾನ ವಿತರಣೆಯನ್ನು ನಿರೀಕ್ಷಿಸಲಾಗಿದೆ.

ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ಭಾರತೀಯ ವಿಮಾನಯಾನ ಮಾಡುವವರಿಗೆ ಹೊಂದಿಕೊಳ್ಳುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಈ ಬ್ರಾಂಡ್ ಹೊಂದಿದೆ. ಐದು ದಿನಗಳ ದುಬೈ ಏರ್ ಶೋನಲ್ಲಿ ಬೋಯಿಂಗ್ ಜೊತೆಗಿನ ಕಂಪನಿಯ ಇತ್ತೀಚಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.

ವಿಮಾನಯಾನ ಸಂಸ್ಥೆಯು ದೇಶದಲ್ಲೇ ಅತ್ಯಂತ ಅಗ್ಗದ ವಿಮಾನಯಾನ ದರವನ್ನು ಹೊಂದಿರಲಿದೆ ಎಂಬ ಭರವಸೆ ನೀಡಿದೆ. ಆದ್ದರಿಂದ ಇದು ನಿಮ್ಮ ಆಕಾಶ ಬ ಟ್ಯಾಗ್‌ಲೈನ್ ಅನ್ನು ಇಟ್ಟುಕೊಂಡಿದೆ.

Published On - 11:06 am, Fri, 22 July 22