AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್​ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ

Aligarh Muslim University teacher Rao Danish Ali shot dead: ಉತ್ತರಪ್ರದೇಶದ ಆಲಿಗಡ್ ಮುಸ್ಲಿಂ ಯೂನಿವರ್ಸಿಟಿಯ ಎಬಿಕೆ ಸ್ಕೂಲ್​ನ ಟೀಚರ್ ರಾವ್ ದಾನಿಶ್ ಅಲಿ ಅವರನ್ನು ಹತ್ಯೆಗೈಯಲಾಗಿದೆ. ಯೂನಿವರ್ಸಿಟಿ ಕ್ಯಾಂಪಸ್ ಪ್ರದೇಶದಲ್ಲೇ ಡಿಸೆಂಬರ್ 24ರಂದು ರಾತ್ರಿ 9ಗಂಟೆಗೆ ಈ ಘಟನೆ ನಡೆದಿದೆ. ರಾವ್ ಅವರು ವಾಕಿಂಗ್​ಗೆ ಹೋದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಂದಿದ್ದಾರೆ.

ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್​ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ
ಘಟನೆ ನಡೆದ ಯೂನಿವರ್ಸಿಟಿ ಕ್ಯಾಂಟೀನ್ ಸ್ಥಳ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 25, 2025 | 11:34 AM

Share

ಕಾನಪುರ್, ಡಿಸೆಂಬರ್ 9: ಆಲಿಗಡ್ ಮುಸ್ಲಿಂ ಯೂನಿವರ್ಸಿಟಿಯ (Aligarh Muslim University) ಬೋಧಕರೊಬ್ಬರನ್ನು ಕ್ಯಾಂಪಸ್​ನಲ್ಲೇ ಹತ್ಯೆ ಮಾಡಿದ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಎಬಿಕೆ ಸ್ಕೂಲ್​ನಲ್ಲಿ ಬೋಧಕರಾಗಿರುವ ರಾವ್ ದಾನಿಸ್ ಅಲಿಯನ್ನು ಗುಂಡಿಟ್ಟು ಸಾಯಿಸಲಾಗಿದೆ. ಆಲಿಗಡ್​ನಲ್ಲಿರುವ ಯೂನಿವರ್ಸಿಟಿ ಕ್ಯಾಂಪಸ್​ನ ಮೌಲಾನ ಆಜಾದ್ ಲೈಬ್ರರಿ ಪ್ರದೇಶದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ.

ಈ ಹತ್ಯೆಗೈದ ಹಂತಕರು ಯಾರೆಂದು ಗೊತ್ತಾಗಿಲ್ಲ. ದಾನಿಶ್ ಅಲಿ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಮೌಲಾನ ಆಜಾದ್ ಲೈಬ್ರರಿ ಸಮೀಪದ ಕ್ಯಾಂಟೀನ್​ಗೆ ವಾಕಿಂಗ್​ಗೆ ಹೋಗಿದ್ದರು. ಆಗ ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ, ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಘಟನೆಯ ನಂತರ ಮತ್ತೊಂದು ಭಯಾನಕ ಅಪಘಾತ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು

ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು, ರಾವ್ ಅಲಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರ ಪ್ರಾಣ ಉಳಿಯಲಿಲ್ಲ. ಇಬ್ಬರು ಅಪರಿಚಿತ ವ್ಯಕ್ತಿಗಳು ಈ ಹತ್ಯೆಗೈದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಅಲಿಗಡ್ ಪೊಲೀಸರ ಟ್ವೀಟ್

ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ಸದ್ಯ ಪೊಲೀಸರು ತನಿಖೆ ನಡೆಸತೊಡಗಿದ್ದಾರೆ. ಸುತ್ತಮುತ್ತಲಿನ ಸ್ಥಳದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗುತ್ತಿದ್ದು, ಹಂತಕರನ್ನು ಪತ್ತೆ ಮಾಡುವ ಪ್ರಯತ್ನವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ