ಮೂವರು ಶಂಕಿತ ಉಗ್ರರ ಬಂಧನ; ಇವರಲ್ಲಿಬ್ಬರು ಎಂಜಿನಿಯರ್, ಒಬ್ಬ ಪಿಎಚ್‌ಡಿ: ಪೊಲೀಸ್
ಶಹನವಾಜ್ನ ದೆಹಲಿ ಅಡಗುತಾಣದಲ್ಲಿ ಪಾಕಿಸ್ತಾನದಿಂದ ಪಿಸ್ತೂಲ್, ಬಾಂಬ್ ತಯಾರಿಕೆಗೆ ಬಳಸುವ ವಸ್ತುಗಳು, ರಾಸಾಯನಿಕಗಳು ಮತ್ತು ಜಿಹಾದಿ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಶಂಕಿತರು ದೇಶದ ವಿವಿಧ ಭಾಗಗಳಲ್ಲಿ ಬಾಂಬ್‌ಗಳನ್ನು ಪರೀಕ್ಷಿಸಿದ್ದರು ಎಂದು ಧಲಿವಾಲ್ ಹೇಳಿದ್ದಾರೆ.
ದೆಹಲಿ ಅಕ್ಟೋಬರ್ 02: ಇಂದು (ಸೋಮವಾರ) ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ (Uttar Pradesh) ಐಸಿಸ್ ಜಾಲವನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಬಂಧಿತರಾಗಿರುವ ಮೂವರು ಶಂಕಿತ ಉಗ್ರರು ಇಂಜಿನಿಯರ್‌ಗಳಾಗಿದ್ದು, ಬಾಂಬ್‌ಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಘಟಕ (Delhi Police Special Cell) ಹಿರಿಯ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಅವರು, ಇಂದು ಬಂಧಿಸಲಾದ ಮೂವರು ಶಂಕಿತ ಉಗ್ರರಲ್ಲಿ ಮೊಹಮ್ಮದ್ ಶಹನವಾಜ್ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದನು. ದೇಶದ ವಿವಿಧ ಭಾಗಗಳಲ್ಲಿ ನಡೆದ ಸ್ಫೋಟಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಹನವಾಜ್ ಮತ್ತು ಇತರ ಇಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ ಕಳೆದ ತಿಂಗಳು ತಲಾ ₹ 3 ಲಕ್ಷ ನಗದು ಬಹುಮಾನ ಘೋಷಿಸಿತ್ತು. ಶಹನವಾಜ್ ಸಹಚರರಾದ ಮೊಹಮ್ಮದ್ ರಿಜ್ವಾನ್ ಅಶ್ರಫ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಬಂಧಿಸಲಾಗಿದೆ ಎಂದು ಧಲಿವಾಲ್ ಹೇಳಿದರು.
ಶಹನವಾಜ್ ನ್ನು ದೆಹಲಿಯ ಜೈತ್‌ಪುರದಲ್ಲಿ ಬಂಧಿಸಿದರೆ, ರಿಜ್ವಾನ್ ಮತ್ತು ಅಶ್ರಫ್ ನ್ನು ಕ್ರಮವಾಗಿ ಲಕ್ನೋ ಮತ್ತು ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಬಂಧಿಸಲಾಯಿತು.
ಶಹನವಾಜ್ನ ದೆಹಲಿ ಅಡಗುತಾಣದಲ್ಲಿ ಪಾಕಿಸ್ತಾನದಿಂದ ಪಿಸ್ತೂಲ್, ಬಾಂಬ್ ತಯಾರಿಕೆಗೆ ಬಳಸುವ ವಸ್ತುಗಳು, ರಾಸಾಯನಿಕಗಳು ಮತ್ತು ಜಿಹಾದಿ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಶಂಕಿತರು ದೇಶದ ವಿವಿಧ ಭಾಗಗಳಲ್ಲಿ ಬಾಂಬ್‌ಗಳನ್ನು ಪರೀಕ್ಷಿಸಿದ್ದರು ಎಂದು ಧಲಿವಾಲ್ ಹೇಳಿದ್ದಾರೆ.
ಅವರು ತಮ್ಮ ಐಸಿಸ್ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ನಿಯಮಿತವಾಗಿ ವರದಿಗಳನ್ನು ಹಂಚಿಕೊಳ್ಳುತ್ತಾರೆ. ಅವರ ಕೆಲಸದಲ್ಲಿ ಬಾಹ್ಯ ಪಾತ್ರವು ಬಹಿರಂಗವಾಗದಂತೆ ಸ್ಥಳೀಯವಾಗಿ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಖರೀದಿಸಲು ಅವರಿಗೆ ಸೂಚಿಸಲಾಗಿದೆ ಎಂದು ಪೋಲಿಸ್ ಹೇಳಿದರು.
ಇದನ್ನೂ ಓದಿ: Mangalyana-2: ಮತ್ತೊಮ್ಮೆ ಮಂಗಳದತ್ತ ಭಾರತ, ಮಂಗಳಯಾನ-2ಗೆ ಇಸ್ರೋ ಸಕಲ ಸಿದ್ಧತೆ
ಶಹನವಾಜ್ ಜಾರ್ಖಂಡ್‌ನ ಹಜಾರಿಬಾಗ್ ನವನು ಎಂದು ಪೊಲೀಸರು ತಿಳಿಸಿದ್ದಾರೆ. ಗಣಿಗಾರಿಕೆ ಇಂಜಿನಿಯರ್ ಆಗಿದ್ದ ಈತನಿಹೆ ಇಂಜಿನಿಯರಿಂಗ್ ಸ್ಫೋಟಗಳ ಬಗ್ಗೆ ಜ್ಞಾನವಿತ್ತು. ಅವರ ಪತ್ನಿ ಹುಟ್ಟಿನಿಂದ ಹಿಂದೂ ಆಗಿದ್ದು ಮದುವೆಯಾಗುವ ಮೊದಲು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆಕೆ ಈಗ ಪರಾರಿಯಾಗಿದ್ದಾಳೆ
ಮೊಹಮ್ಮದ್ ಅರ್ಷದ್ ವಾರ್ಸಿ ಕೂಡ ಜಾರ್ಖಂಡ್ ಮೂಲದವನುಪ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಅಲಿಗಢ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪೂರ್ಣಗೊಳಿಸಿದ್ದು, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದ.
ಮೊಹಮ್ಮದ್ ರಿಜ್ವಾನ್ ಅಶ್ರಫ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದು, ಮೂಲತಃ ಉತ್ತರ ಪ್ರದೇಶದ ಅಜಂಗಢದವ.ಈತ ವರು ಧರ್ಮಗುರುಗಳಾಗಿಯೂ ತರಬೇತಿ ಪಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:53 pm, Mon, 2 October 23