ರಾಹುಲ್ ಗಾಂಧಿಯ ಪೌರತ್ವ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ವಜಾಗೊಳಿಸಿದ್ದು, ಅರ್ಜಿದಾರರಿಗೆ ಇತರ ಪರ್ಯಾಯ ಕಾನೂನು ಪರಿಹಾರಗಳನ್ನು ಅನ್ವೇಷಿಸಲು ಅವಕಾಶ ನೀಡಿದೆ. ನ್ಯಾಯಮೂರ್ತಿ ಎ.ಆರ್. ಮಸೂದಿ ಮತ್ತು ನ್ಯಾಯಮೂರ್ತಿ ರಾಜೀವ್ ಸಿಂಗ್ ಅವರನ್ನೊಳಗೊಂಡ ಲಕ್ನೋ ಹೈಕೋರ್ಟ್ ಪೀಠವು ಕೇಂದ್ರ ಸರ್ಕಾರವು ಪಿಐಎಲ್ ಕುರಿತು ಅಂತಿಮ ನಿರ್ಧಾರಕ್ಕೆ ಬರುವಂತೆ ಕೇಳಿದೆ ಮತ್ತು ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡಿದೆ.

ರಾಹುಲ್ ಗಾಂಧಿಯ ಪೌರತ್ವ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
Rahul Gandhi

Updated on: May 05, 2025 | 5:44 PM

ಲಕ್ನೋ, ಮೇ 5: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪೌರತ್ವ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ಅನ್ನು ಅಲಹಾಬಾದ್ ಹೈಕೋರ್ಟ್ (ಲಕ್ನೋ ಪೀಠ) ವಜಾಗೊಳಿಸಿದೆ. ಎರಡು ವಿದೇಶಿ ಸರ್ಕಾರಗಳ ನಡುವಿನ ಸಂವಹನವನ್ನು ಒಳಗೊಂಡಿರುವುದರಿಂದ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮತ್ತು ಅರ್ಜಿದಾರರಿಗೆ ತಕ್ಷಣ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶಿಸಿದೆ. ಕೇಂದ್ರ ಸರ್ಕಾರವು ಅಂತಿಮ ನಿರ್ಧಾರವನ್ನು ತೆಗೆದುಕೊಂಡ ನಂತರ ನ್ಯಾಯಾಲಯವನ್ನು ಮತ್ತೆ ಸಂಪರ್ಕಿಸಲು ನ್ಯಾಯಾಲಯ ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿದೆ.

ನ್ಯಾಯಮೂರ್ತಿ ಎ.ಆರ್. ಮಸೂದಿ ಮತ್ತು ನ್ಯಾಯಮೂರ್ತಿ ರಾಜೀವ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರವು ಅರ್ಜಿದಾರರ ದೂರನ್ನು ಪರಿಹರಿಸಲು ನಿರ್ದಿಷ್ಟ ಸಮಯವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ ಅರ್ಜಿಯನ್ನು ಬಾಕಿ ಇಡಲು ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರಾದ ಎಸ್. ವಿಘ್ನೇಶ್ ಶಿಶಿರ್ ಅವರಿಗೆ ನ್ಯಾಯಾಲಯವು ಈ ಪ್ರಕರಣವನ್ನು ಮುಂದುವರಿಸಲು ಬಯಸಿದರೆ ಪರ್ಯಾಯ ಕಾನೂನು ಪರಿಹಾರಗಳನ್ನು ಅನುಸರಿಸುವ ಸ್ವಾತಂತ್ರ್ಯವನ್ನು ನೀಡಿದೆ.

ಇದನ್ನೂ ಓದಿ: ಯಾವಾಗ ಮಾಡ್ತೀರ ಹೇಳಿ; ಕೇಂದ್ರ ಸರ್ಕಾರದ ಜಾತಿ ಗಣತಿಯ ನಿರ್ಧಾರಕ್ಕೆ ರಾಹುಲ್ ಗಾಂಧಿ ಸ್ವಾಗತ

ಇದನ್ನೂ ಓದಿ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಐಎಂಎಫ್​​​ಗೆ ಅಯ್ಯರ್; ಪಾಕಿಸ್ತಾನಕ್ಕೆ ಇದೆಯಾ ಆಪತ್ತು?
ಭಾರತಕ್ಕೆ ಹಾನಿ ಮಾಡುವ ಮುನ್ನ ಪಾಕ್ 100 ಬಾರಿ ಯೋಚಿಸಬೇಕು
ಜರ್ಮನಿಯಲ್ಲಿ ಹಿಂದೂ ಸಮುದಾಯದ ಒಗ್ಗಟ್ಟಿನ ಸಂದೇಶ ಸಾರಿದ ಭಾರತೀಯರು

ರಾಹುಲ್ ಗಾಂಧಿ ವಿರುದ್ಧದ ಅರ್ಜಿಯನ್ನು ಸದ್ಯಕ್ಕೆ ಮುಕ್ತಾಯಗೊಳಿಸಲಾಗಿದ್ದರೂ, ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸುವ ಅವಕಾಶವಿದೆ.

ವಕೀಲ ಮತ್ತು ಬಿಜೆಪಿ ನಾಯಕರೂ ಆಗಿರುವ ವಿಘ್ನೇಶ್ ಶಿಶಿರ್ ಎಂಬುವವರು ಸಲ್ಲಿಸಿದ ಅರ್ಜಿಯಲ್ಲಿ, ರಾಹುಲ್ ಗಾಂಧಿ ಅವರು ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್) ಮತ್ತು ಭಾರತ ಎರಡರ ದ್ವಿಪೌರತ್ವವನ್ನು ಹೊಂದಿದ್ದಾರೆ. ಆದ್ದರಿಂದ ಸಂವಿಧಾನದ 84(A) ವಿಧಿಯ ಅಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಇಡಿ ಆರೋಪಪಟ್ಟಿ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ದೆಹಲಿ ಕೋರ್ಟ್ ನೋಟಿಸ್ ಜಾರಿ

ಹಿಂದಿನ ವಿಚಾರಣೆಯ ಸಮಯದಲ್ಲಿ ರಾಹುಲ್ ಗಾಂಧಿ ಭಾರತೀಯ ಪ್ರಜೆಯೇ ಎಂಬುದನ್ನು ನೇರವಾಗಿ ತಿಳಿಸಲು ವಿಫಲವಾದ ಗೃಹ ಸಚಿವಾಲಯದ ಬಗ್ಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತ್ತು. ನಂತರ ನ್ಯಾಯಪೀಠವು ದ್ವಿಪೌರತ್ವ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿಯವರ ಪೌರತ್ವ ಸ್ಥಿತಿಯನ್ನು ಸ್ಪಷ್ಟಪಡಿಸುವ ಪರಿಷ್ಕೃತ ವರದಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ 10 ದಿನಗಳ ಕಾಲಾವಕಾಶ ನೀಡಿತ್ತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ