ಯಾವಾಗ ಮಾಡ್ತೀರ ಹೇಳಿ; ಕೇಂದ್ರ ಸರ್ಕಾರದ ಜಾತಿ ಗಣತಿಯ ನಿರ್ಧಾರಕ್ಕೆ ರಾಹುಲ್ ಗಾಂಧಿ ಸ್ವಾಗತ
ಕೇಂದ್ರ ಸರ್ಕಾರ ಜನ ಗಣತಿಯ ಜೊತೆ ಜಾತಿ ಗಣತಿಯನ್ನು ಮಾಡುವುದಾಗಿ ಇಂದು ಘೋಷಿಸಿದೆ. ಮೋದಿ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ನಮ್ಮ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ, ಜಾತಿಗಣತಿಯನ್ನು ಯಾವಾಗ ಮಾಡುತ್ತೀರ ಎಂದು ಮಾಹಿತಿಯನ್ನು ಕೂಡ ನೀಡಿ ಎಂದು ಇಂದು ಸುದ್ದಿಗೋಷ್ಠಿ ನಡೆಸಿ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಜಾತಿಗಣತಿ ನಡೆಸಲು ಕೇಂದ್ರ ಸರ್ಕಾರದ ಮೇಲೆ ಬಹಳ ಒತ್ತಡ ಹೇರಿತ್ತು. ಹಾಗೇ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಯನ್ನು ನಡೆಸಿತ್ತು.

ನವದೆಹಲಿ, ಏಪ್ರಿಲ್ 30: ಮುಂಬರುವ ಜನಗಣತಿ ಪ್ರಕ್ರಿಯೆಯಲ್ಲಿ ಜಾತಿ ಗಣತಿಯನ್ನು (Caste Census) ಪಾರದರ್ಶಕ ರೀತಿಯಲ್ಲಿ ಸೇರಿಸಲಾಗುವುದು ಎಂದು ಮೋದಿ ಸರ್ಕಾರ ಘೋಷಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜಾತಿ ಜನಗಣತಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೆ ಸ್ಪಷ್ಟ ಸಮಯದಸೂಚಿಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಯಾವಾಗ ಜಾತಿ ಗಣತಿ ನಡೆಸುತ್ತೀರೆಂದು ಟೈಮ್ ಲೈನ್ ನೀಡಿ ಎಂದು ರಾಹುಲ್ ಗಾಂಧಿ (Rahul Gandhi) ಆಗ್ರಹಿಸಿದ್ದಾರೆ. ಇಂದು ರಾಜಕೀಯ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಜನಗಣತಿ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಲವು ರಾಜ್ಯಗಳು ಸಮೀಕ್ಷೆಗಳ ಹೆಸರಿನಲ್ಲಿ ಜಾತಿ ಗಣತಿ ಮಾಡಿವೆ ಎಂದು ಟೀಕಿಸಿದ್ದರು.
“ನಾವು ಜಾತಿ ಜನಗಣತಿ ನಡೆಸುತ್ತೇವೆ ಎಂದು ಸಂಸತ್ತಿನಲ್ಲಿ ಹೇಳಿದ್ದೆವು. ಇದೀಗ ಇದ್ದಕ್ಕಿದ್ದಂತೆ 11 ವರ್ಷಗಳ ನಂತರ ಜಾತಿ ಜನಗಣತಿಯನ್ನು ಘೋಷಿಸಲಾಗಿದೆ. ನಾವು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ ನಮಗೆ ಒಂದು ಕಾಲಮಿತಿ ಬೇಕು. ಜಾತಿ ಗಣತಿ ಯಾವಾಗ ನಡೆಯುತ್ತದೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಇದು ಮೊದಲ ಹೆಜ್ಜೆ. ಜಾತಿ ಜನಗಣತಿಯಲ್ಲಿ ತೆಲಂಗಾಣವು ಮಾದರಿಯಾಗಿದೆ. ಜಾತಿ ಜನಗಣತಿಯನ್ನು ವಿನ್ಯಾಸಗೊಳಿಸುವಲ್ಲಿ ನಾವು ಸರ್ಕಾರಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ” ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
WATCH ||
Cabinet Committee on Political Affairs decides that Caste Enumeration will be included in the forthcoming census: Union Minister @AshwiniVaishnaw #CabinetDecisions pic.twitter.com/FrvD7byMsH
— All India Radio News (@airnewsalerts) April 30, 2025
ಇದನ್ನೂ ಓದಿ: ಭಾರತದಲ್ಲಿ ಜನಗಣತಿ ಜೊತೆಗೆ ಜಾತಿಗಣತಿ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ
ಜನಗಣತಿಗೆ ತಮ್ಮ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, ಜಾತಿ ಗಣತಿಯನ್ನು ನಡೆಸುವುದನ್ನು ಮತ್ತು ಮೀಸಲಾತಿಯ ಮೇಲಿನ 50% ಮಿತಿಯನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳುವುದಾಗಿ ಹೇಳಿದರು. ಹಾಗೇ, ಪ್ರಧಾನಿ ಮೋದಿ ಹೇಳಿದಂತೆ ಕೇವಲ 4 ವಿಶಾಲ ಜಾತಿ ವರ್ಗಗಳನ್ನು ಗುರುತಿಸುವ ಕಲ್ಪನೆಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಆದರೆ ಜನಗಣತಿಯನ್ನು ಯಾವಾಗ ನಡೆಸಲಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆ ಬೇಕು ಎಂದು ಒತ್ತಾಯಿಸಿದರು.
LIVE: Press Conference | AICC Office, New Delhi https://t.co/DwEZrmT1aC
— Rahul Gandhi (@RahulGandhi) April 30, 2025
“ನಾವು ಸರ್ಕಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ತೆಲಂಗಾಣದ ಮಾದರಿಗಳನ್ನು ಬಳಸಿಕೊಂಡು ಜಾತಿ ಜನಗಣತಿಯನ್ನು ವಿನ್ಯಾಸಗೊಳಿಸಲು ಸಹಾಯ ಮಾಡಲು ಸಿದ್ಧರಿದ್ದೇವೆ. ಆದರೆ ಸರ್ಕಾರವು ಒಂದು ಸಮಯವನ್ನು ನೀಡಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








