ಮುಖ್ತಾರ್ ಅನ್ಸಾರಿಯ ಸಹೋದರ ಅನರ್ಹಗೊಂಡ ಸಂಸದ ಅಫ್ಜಲ್​​ ಅನ್ಸಾರಿಗೆ ಜಾಮೀನು

|

Updated on: Jul 24, 2023 | 6:05 PM

ದೀಗ ಅಲಹಾಬಾದ್ ಹೈಕೋರ್ಟ್‌ ಅಫ್ಜಲ್ ಅನ್ಸಾರಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಅದೇ ವೇಳೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ತಡೆಹಿಡಿಯಲು ನ್ಯಾಯಾಲಯ ನಿರಾಕರಿಸಿದೆ

ಮುಖ್ತಾರ್ ಅನ್ಸಾರಿಯ ಸಹೋದರ ಅನರ್ಹಗೊಂಡ ಸಂಸದ ಅಫ್ಜಲ್​​ ಅನ್ಸಾರಿಗೆ ಜಾಮೀನು
ಅಫ್ಜಲ್ ಅನ್ಸಾರಿ
Follow us on

ದೆಹಲಿ ಜುಲೈ 24: ಗ್ಯಾಂಗ್​​ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಯ ಸಹೋದರ ಅಫ್ಜಲ್ ಅನ್ಸಾರಿ (Afzal Ansari )ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ ನಂತರ ಸಂಸದ ಸ್ಥಾನ ಕಳೆದುಕೊಂಡಿದ್ದರು. ಇದೀಗ ಅಲಹಾಬಾದ್ ಹೈಕೋರ್ಟ್‌ (Allahabad High Court) ಅಫ್ಜಲ್ ಅನ್ಸಾರಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಅದೇ ವೇಳೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ತಡೆಹಿಡಿಯಲು ನ್ಯಾಯಾಲಯ ನಿರಾಕರಿಸಿದೆ. ಗಾಜಿಪುರದ ಲೋಕಸಭಾ ಸದಸ್ಯ ಅಫ್ಜಲ್ ಅನ್ಸಾರಿಗೆ ಎಂಪಿ/ಎಂಎಲ್ಎ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಗಾಜಿಪುರದ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದ ಕಾರಣ ಮೇ ತಿಂಗಳಲ್ಲಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.

ಶಿಕ್ಷೆಯನ್ನು ತಡೆಹಿಡಿಯಬೇಕು ಮತ್ತು ಜಾಮೀನು ನೀಡುವಂತೆ ಕೋರಿ ಅನ್ಸಾರಿ ನ್ಯಾಯಾಲಯದ ಮೊರೆ ಹೋಗಿದ್ದರು.

1997 ರಲ್ಲಿ ವಾರಣಾಸಿ ಮೂಲದ ವ್ಯಾಪಾರಿ ನಂದ್ ಕಿಶೋರ್ ರುಂಗ್ಟಾ ಅವರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣ, 2005 ರ ನವೆಂಬರ್ 29 ರಂದು ಗಾಜಿಪುರದ ಆಗಿನ ಶಾಸಕ ಕೃಷ್ಣಾನಂದ ರಾಯ್ ಅವರ ಹತ್ಯೆಯಲ್ಲಿಯೂ ಅನ್ಸಾರಿ ಭಾಗಿಯಾಗಿದ್ದರು.

ಮುಖ್ತಾರ್ ಅನ್ಸಾರಿ ಕೂಡ ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಮುಖ್ತಾರ್ ಅನ್ಸಾರಿ 2006 ರಿಂದ ಜೈಲಿನಲ್ಲಿದ್ದು, ಅವರ ವಿರುದ್ಧ ಕೊಲೆ ಮತ್ತು ಅಪಹರಣ ಸೇರಿದಂತೆ 40 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ.
ಮಾಯಾವತಿಯವರ ಬಹುಜನ ಸಮಾಜ ಪಕ್ಷದಿಂದ ಗಾಜಿಪುರ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಲು ಅಫ್ಜಲ್ ಅನ್ಸಾರಿಗೆ ಟಿಕೆಟ್ ನೀಡಿದಾಗ ಅವರು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಬಿಎಸ್ಪಿ 2010ರಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗಾಗಿ ಮುಖ್ತಾರ್ ಅನ್ಸಾರಿಯನ್ನು ಉಚ್ಚಾಟಿಸಿತ್ತು.

ಇದನ್ನೂ ಓದಿ: ಅಸ್ಸಾಂನಲ್ಲಿ ಚುನಾವಣಾ ಆಯೋಗದ ಡಿಲಿಮಿಟೇಶನ್ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

ನಂತರ ಅವರು ತಮ್ಮದೇ ಆದ ಪಕ್ಷಕ್ವಾಮಿ ಏಕತಾ ದಳ ಸ್ಥಾಪಿಸಿ, 2017 ರಲ್ಲಿ ಅದನ್ನು ಬಿಎಸ್ಪಿಯೊಂದಿಗೆ ವಿಲೀನಗೊಳಿಸಿದರು.
“ಇತರ ಪಕ್ಷಗಳಲ್ಲಿ ದೊಡ್ಡ ಗೂಂಡಾಗಳು (ಅಪರಾಧಿಗಳು) ಇದ್ದಾರೆ” ಎಂದು ಮಾಯಾವತಿ ಇದನ್ನು ಸಮರ್ಥಿಸಿಕೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ