AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನ ದುರಂತ; ರನ್​ ವೇಯಿಂದ ಜಾರಿ ಬದಿಗೆ ನಿಂತ ಫ್ಲೈಟ್​

ವಿಮಾನಗಳು ಇಳಿಯುವ ಮತ್ತು ಟೇಕ್​ ಆಫ್ ಆಗುವ ​ ಪಾಯಿಂಟ್​ ವಿಮಾನ ನಿಲ್ದಾಣದಿಂದ ತುಸು ದೂರದಲ್ಲಿದ್ದು, ಅಲ್ಲಿಯವರೆಗೆ ರನ್​ ವೇ ನಿರ್ಮಿಸಲಾಗಿರುತ್ತದೆ.

ಮಧ್ಯಪ್ರದೇಶದಲ್ಲಿ ಸ್ವಲ್ಪದರಲ್ಲೇ ತಪ್ಪಿದ ವಿಮಾನ ದುರಂತ; ರನ್​ ವೇಯಿಂದ ಜಾರಿ ಬದಿಗೆ ನಿಂತ ಫ್ಲೈಟ್​
ರನ್​ ವೇ ತಪ್ಪಿದ ವಿಮಾನ
TV9 Web
| Edited By: |

Updated on: Mar 12, 2022 | 4:31 PM

Share

ಅಲಯನ್ಸ್​ ಏರ್​ ಸಂಸ್ಥೆಯ ವಿಮಾನ ರನ್​ ವೇಯಿಂದ ಜಾರಿದ (Runway Excursion) ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಎಟಿಆರ್​ 72 ಎಂಬ ವಿಮಾನ ಇದಾಗಿದ್ದು, 55 ಪ್ರಯಾಣಿಕರು ಇದ್ದರು. ಬೆಳಗ್ಗೆ 11.32ಕ್ಕೆ ದೆಹಲಿಯಿಂದ ಹೊರಟಿತ್ತು. ಲ್ಯಾಂಡ್ ಆಗಿ ನಿಲ್ದಾಣದವರೆಗೆ  ಬರುವಾಗ ರನ್​ ವೇ ತಪ್ಪಿದೆ. ಇದು ಸಣ್ಣಮಟ್ಟದ ಅವಘಡ ಆಗಿದ್ದು, ಯಾವುದೇ ಪ್ರಯಾಣಿಕರಿಗೂ ಅಪಾಯ ಆಗಿಲ್ಲ ಎಂದು ಅಲಯನ್ಸ್ ಏರ್​ ತಿಳಿಸಿದೆ.  

ವಿಮಾನಗಳು ಯಾವುದೇ ನಿಲ್ದಾಣದಲ್ಲಿ ಒಮ್ಮೆಲೇ ಬಂದು ಇಳಿಯುವುದಿಲ್ಲ ಮತ್ತು ನಿಲ್ದಾಣದಿಂದಲೇ ಟೇಕ್​ ಆಫ್​ ಆಗುವುದಿಲ್ಲ. ಅವುಗಳ ಇಳಿಯುವ ಮತ್ತು ಟೇಕ್​ ಆಫ್​ ಆಗುವ ಪಾಯಿಂಟ್​ ವಿಮಾನ ನಿಲ್ದಾಣದಿಂದ ತುಸು ದೂರದಲ್ಲಿದ್ದು, ಅಲ್ಲಿಯವರೆಗೆ ರನ್​ ವೇ ನಿರ್ಮಿಸಲಾಗಿರುತ್ತದೆ. ಈ ಪಾಯಿಂಟ್​ವರೆಗೆ ಅವು ಪುಟ್ಟ ಗಾಲಿಯಲ್ಲಿ ಸಂಚರಿಸುತ್ತವೆ. ಆದರೆ ಆ ರನ್​ ವೇಯಿಂದ ಜಾರಿದರೆ ಬಹುದೊಡ್ಡ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ಈ ವಿಮಾನ ರನ್​ ವೇಯಿಂದ ಬಹುದೂರ ಹೋಗಿ ನಿಂತಿದ್ದರೂ ಅದೃಷ್ಟವಶಾತ್​ ಯಾರಿಗೂ ಏನೂ ಆಗಲಿಲ್ಲ.

ಈ ರನ್​ ವೇದಲ್ಲಿಯೇ ವಿಮಾನಗಳು ಭೀಕರ ಅಪಘಾತಕ್ಕೀಡಾಗಿ, ಅನೇಕರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. 2010ರಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಹುದೊಡ್ಡ ದುರಂತ ನಡೆದು ಹೋಗಿತ್ತು. ದುಬೈನಿಂದ ಬಂದಿದ್ದ ಏರ್​ ಇಂಡಿಯಾ ವಿಮಾನ ಮಂಗಳೂರಿನ ವಿಮಾನ ನಿಲ್ದಾಣದ ಬಳಿ ರನ್​ ವೇದಲ್ಲಿ ಲ್ಯಾಂಡ್ ಆಗುವಾಗ ರನ್​ ವೇದಲ್ಲಿಯೇ ಅಪಘಾತಕ್ಕೀಡಾಗಿತ್ತು. ಇದರಲ್ಲಿ 160ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಇದನ್ನೂ ಓದಿ: ಉಕ್ರೇನ್​​ಗೆ ಜಗತ್ತಿನ ಡೆಡ್ಲಿ ಸ್ನೈಪರ್​ ವಾಲಿ ಬಲ; ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದಾರಂತೆ ಈ ಯೋಧ !

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ