ಭಾರತ ಯಾರಿಗೆ ಶತ್ರು, ಯಾರಿಗೆ ಮಿತ್ರ? ಚೀನಾ ಮತ್ತಿತರ ದೇಶಗಳ ದೃಷ್ಟಿ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸರ್ವೆ

ECFR Survey Details: ರಷ್ಯಾ, ಅಮೆರಿಕ, ಯೂರೋಪಿಯನ್ ಯೂನಿಯನ್, ಬ್ರಿಟನ್, ಟರ್ಕಿ ಮತ್ತು ಚೀನಾ ದೇಶಗಳ ಬಗ್ಗೆ ಭಾರತೀಯರಿಗೆ ಯಾವ ಭಾವನೆ ಇದೆ? ಆ ದೇಶಗಳ ಜನರಿಗೆ ಭಾರತದ ಬಗ್ಗೆ ಏನು ಧೋರಣೆ ಇದೆ? ಇಸಿಎಫ್​ಆರ್ ಸಮೀಕ್ಷೆ ಕೆಲ ಇಂಟರೆಸ್ಟಿಂಗ್ ಸಂಗತಿಗಳನ್ನು ಹೊರಹಾಕಿದೆ. ಭಾರತೀಯರು ಚೀನಾವನ್ನು ಮಿತ್ರನಾಗಿ ಕಾಣುವುದಕ್ಕಿಂತ ಚೀನೀಯರು ಭಾರತವನ್ನು ಮಿತ್ರದೇಶವನ್ನಾಗಿ ಕಾಣುವುದು ಹೆಚ್ಚಂತೆ. ಭಾರತೀಯರು ಪಶ್ಚಿಮ ದೇಶಗಳೊಂದಿಗೆ ಮೈತ್ರಿಗೆ ಹೆಚ್ಚು ಒಲವು ತೋರುತ್ತಾರೆ. ಆದರೆ, ಆ ಪಾಶ್ಚಿಮಾತ್ಯ ದೇಶಗಳ ಜನರಿಗೆ ಭಾರತ ಮಿತ್ರ ದೇಶವಾಗುವುದಕ್ಕಿಂತ ಸ್ಟ್ರಾಟಿಜಿಕ್ ಪಾರ್ಟ್ನರ್ ಆಗಿ ತೋರುತ್ತದೆ.

ಭಾರತ ಯಾರಿಗೆ ಶತ್ರು, ಯಾರಿಗೆ ಮಿತ್ರ? ಚೀನಾ ಮತ್ತಿತರ ದೇಶಗಳ ದೃಷ್ಟಿ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸರ್ವೆ
ಇಸಿಎಫ್​ಆರ್ ಸಮೀಕ್ಷೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 06, 2024 | 12:53 PM

ನವದೆಹಲಿ, ಮೇ 6: ಅಂತಾರಾಷ್ಟ್ರೀಯ ರಾಜಕೀಯ (International politics) ಬಹಳ ಸಂಕೀರ್ಣವಾದುದು. ಕಷ್ಟದ ಕಾಲಕ್ಕೆ ಯಾರು ಮಿತ್ರರಾಗುತ್ತಾರೆ, ಯಾರು ಶತ್ರುವಾಗುತ್ತಾರೆ ಎಂದು ಹೇಳುವುದು ಕಷ್ಟ. ಉಕ್ರೇನ್ ದೇಶದ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಪಶ್ಚಿಮ ದೇಶಗಳು ನೆರವಿಗೆ ಬಂದವು. ರಷ್ಯಾಗೆ ಉಕ್ರೇಜ್ ಸುಲಭ ತುತ್ತಾಗದಂತೆ ಮಿತ್ರದೇಶಗಳು ಸಹಾಯ ಮಾಡಿವೆ. ಇರಾಕ್ ಮೇಲೆ ಅಮೆರಿಕದ ಯುದ್ಧ ಮಾಡಿದಾಗ ಯಾವ ಇರಾಕ್​ಗೆ ಯಾವ ದೇಶಗಳೂ ನೆರವಿಗೆ ಬರಲಿಲ್ಲ. ಭಾರತದ ಗಡಿ ಭಾಗದಲ್ಲಿ ಚೀನಾ ದಾಳಿ ಮಾಡಿ ಒಂದಷ್ಟು ಪ್ರದೇಶವನ್ನು ಕಿತ್ತುಕೊಂಡಾಗಲೂ ಯಾವ ದೇಶ ಭಾರತದ ಸಹಾಯಕ್ಕೆ ಬರಲಿಲ್ಲ. ಅಂತಾರಾಷ್ಟ್ರೀಯ ರಾಜಕೀಯ ಎಂಬುದು ಬಹಳ ಸೂಕ್ಷ್ಮವಾಗಿರುವ ಮತ್ತು ಸಂಕೀರ್ಣವಾಗಿರುವ ಒಂದು ವ್ಯವಸ್ಥೆ. ಈ ವಿಚಾರದಲ್ಲಿ ಸಮೀಕ್ಷೆಯೊಂದು ಕುತೂಹಲ ಮೂಡಿಸುವ ಕೆಲ ಅಂಶಗಳನ್ನು ಹೊರತೆಗೆದಿದೆ. ಇಸಿಎಫ್​ಆರ್ ಸಮೀಕ್ಷೆಯಲ್ಲಿ (ecfr survey) ಭಾರತೀಯರು ಯಾರನ್ನು ಮಿತ್ರನಾಗಿ ನೋಡುತ್ತಾರೆ, ಶತ್ರು, ಸಹವರ್ತಿ, ಪ್ರತಿಸ್ಪರ್ಧಿಯಾಗಿ ನೋಡುತ್ತಾರೆ ಎಂಬುದನ್ನು ತೋರಿಸಲಾಗಿದೆ. ಹಾಗೆಯೇ, ಭಾರತದ ಬಗ್ಗೆ ಈ ದೇಶಗಳು ಯಾವ ಅಭಿಪ್ರಾಯ ಹೊಂದಿವೆ ಎನ್ನುವುದೂ ಕೂಡ ಇದರಲ್ಲಿದೆ.

ರಷ್ಯಾ, ಅಮೆರಿಕ, ಯೂರೋಪ್, ಬ್ರಿಟನ್, ಟರ್ಕಿ ಮತ್ತು ಚೀನಾ ದೇಶಗಳನ್ನು ಸಮೀಕ್ಷೆಗೆ ಆಯ್ದುಕೊಳ್ಳಲಾಗಿದೆ. ಕುತೂಹಲ ಎಂದರೆ, ಈ ದೇಶಗಳನ್ನು ಭಾರತೀಯರು ನೋಡುವ ರೀತಿಗೂ, ಆ ದೇಶಗಳ ಜನರು ಭಾರತವನ್ನು ನೋಡುವ ರೀತಿಗೂ ಪ್ರಮುಖ ವ್ಯತ್ಯಾಸ ಗೋಚರ ಆಗುತ್ತದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಭಾರತದ ಚುನಾವಣಾ ಪ್ರಕ್ರಿಯೆ ನೋಡಲು ಬಂದ 23 ದೇಶಗಳ 75 ಪ್ರತಿನಿಧಿಗಳು

ಚೀನಾ ಮತ್ತು ಭಾರತದ ಮಧ್ಯೆ ಈ ವೈರುದ್ಧ್ಯ

ಈ ಸಮೀಕ್ಷೆ ಪ್ರಕಾರ ಶೇ. 5ರಷ್ಟು ಭಾರತೀಯರು ಮಾತ್ರ ಚೀನಾವನ್ನು ಮಿತ್ರದೇಶವಾಗಿ ನೋಡುತ್ತಾರೆ. ಶೇ. 39ರಷ್ಟು ಜನರು ಶತ್ರುವಾಗಿ ಕಾಣುತ್ತಾರೆ. ಶೇ. 37ರಷ್ಟು ಜನರಿಗೆ ಭಾರತಕ್ಕೆ ಚೀನಾ ಪ್ರತಿಸ್ಪರ್ಧಿಯಾಗಿ ತೋರುತ್ತದೆ. ಶೇ. 17ರಷ್ಟು ಜನರು ಭಾರತ ಮತ್ತು ಚೀನಾ ಪಾರ್ಟ್ನರ್ ಆಗಬಹುದು ಎಂದು ಭಾವಿಸುತ್ತಾರೆ.

ಅದೇ ಚೀನೀಯರಿಗೆ ಭಾರತದ ಬಗ್ಗೆ ಏನಿದೆ ಅಭಿಪ್ರಾಯ? ಶೇ. 13ರಷ್ಟು ಚೀನೀಯರು ಭಾರತವನ್ನು ಶತ್ರುವಾಗಿ ಕಾಣುತ್ತಾರೆ. ಶೇ. 37ರಷ್ಟು ಮಂದಿಗೆ ಭಾರತ ಪ್ರತಿಸ್ಪರ್ಧಿಯಾಗಿ ಕಾಣುತ್ತದೆ. ಆದರೆ, ಶೇ. 14ರಷ್ಟು ಚೀನೀಯರು ಭಾರತವನ್ನು ಮಿತ್ರ ದೇಶವನ್ನಾಗಿ ಕಾಣುತ್ತಾರೆ. ಶೇ. 31ರಷ್ಟು ಜನರು ಭಾರತ ಮತ್ತು ಚೀನಾ ಸಹಕಾರದಲ್ಲಿ ಮುನ್ನಡೆಯಬಹುದು ಎಂದು ಭಾವಿಸುತ್ತಾರೆ.

ಇದನ್ನೂ ಓದಿ: ಹೂಗ್ಲಿಯಲ್ಲಿ ಬಾಂಬ್​ ಸ್ಫೋಟ, ಓರ್ವ ಸಾವು, ಇಬ್ಬರಿಗೆ ಗಾಯ

ಪಶ್ಚಿಮ ದೇಶಗಳ ಮೇಲೆ ಭಾರತಕ್ಕೆ ಪ್ರೀತಿ

ಸಮೀಕ್ಷೆ ಮಾಡಲಾದ ಆರು ದೇಶಗಳ ಪೈಕಿ ಭಾರತಕ್ಕೆ ಅತಿಹೆಚ್ಚು ಸ್ನೇಹ ಎನಿಸುವುದು ರಷ್ಯಾದ ಮೇಲೆ. ಶೇ. 51ರಷ್ಟು ಭಾರತೀಯರಿಗೆ ರಷ್ಯಾ ಸ್ನೇಹ ರಾಷ್ಟ್ರವಾಗಿದೆ. ಅಮೆರಿಕ, ಯೂರೋಪಿಯನ್ ಯೂನಿಯನ್ ಮತ್ತು ಬ್ರಿಟನ್ ದೇಶಗಳ ಬಗ್ಗೆ ಭಾರತೀಯರಿಗೆ ನಿರೀಕ್ಷೆ ಹೆಚ್ಚಿದೆ. ಈ ದೇಶಗಳು ಭಾರತವನ್ನು ಮಿತ್ರದೇಶವನ್ನಾಗಿ ಕಾಣುವುದಕ್ಕಿಂತ ಪಾರ್ಟ್ನರ್ ದೇಶವಾಗಿ ಕಾಣುವುದು ಹೆಚ್ಚು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Mon, 6 May 24

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ