ಮಧ್ಯಪ್ರದೇಶ: ಗುನಾದಲ್ಲಿ ಆಂಬ್ಯುಲೆನ್ಸ್​ ಟೈರ್ ಪಂಕ್ಚರ್, ರೋಗಿ ಸಾವು

ರೋಗಿ(Patient)ಯನ್ನು ಕರೆದೊಯ್ಯುತ್ತಿದ್ದ ಆ್ಯಂಬ್ಯುಲೆನ್ಸ್ ಟೈರ್ ಪಂಕ್ಚರ್ ಆದ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ರೋಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಜಗದೀಶ್ ಎಂಬುವವರಿಗೆ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅಧಿಕ ರಕ್ತದೊತ್ತಡವೂ ಇತ್ತು. ಅವರನ್ನು ಮೈನಾ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಅವರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಆ್ಯಂಬ್ಯುಲೆನ್ಸ್​ ರಾಷ್ಟ್ರೀಯ ಹೆದ್ದಾರಿ 46ರಲ್ಲಿ ಅದರ ಒಂದು ಟೈರ್ ಪಂಕ್ಚರ್ ಆಗಿತ್ತು. ಆ್ಯಂಬ್ಯುಲೆನ್ಸ್​ನಲ್ಲಿ ಬೇರೆ ಟೈರ್ ಕೂಡಾ ಇರಲಿಲ್ಲ.

ಮಧ್ಯಪ್ರದೇಶ: ಗುನಾದಲ್ಲಿ ಆಂಬ್ಯುಲೆನ್ಸ್​ ಟೈರ್ ಪಂಕ್ಚರ್, ರೋಗಿ ಸಾವು
ಆಂಬ್ಯುಲೆನ್ಸ್

Updated on: Nov 03, 2025 | 10:08 AM

ಗುನಾ, ನವೆಂಬರ್ 03: ರೋಗಿ(Patient)ಯನ್ನು ಕರೆದೊಯ್ಯುತ್ತಿದ್ದ ಆ್ಯಂಬ್ಯುಲೆನ್ಸ್ ಟೈರ್ ಪಂಕ್ಚರ್ ಆದ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ರೋಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಜಗದೀಶ್ ಎಂಬುವವರಿಗೆ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅಧಿಕ ರಕ್ತದೊತ್ತಡವೂ ಇತ್ತು. ಅವರನ್ನು ಮೈನಾ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಅವರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಆ್ಯಂಬ್ಯುಲೆನ್ಸ್ರಾಷ್ಟ್ರೀಯ ಹೆದ್ದಾರಿ 46ರಲ್ಲಿ ಅದರ ಒಂದು ಟೈರ್ ಪಂಕ್ಚರ್ ಆಗಿತ್ತು. ಆ್ಯಂಬ್ಯುಲೆನ್ಸ್ನಲ್ಲಿ ಬೇರೆ ಟೈರ್ ಕೂಡಾ ಇರಲಿಲ್ಲ.

ಪರಿಣಾಮವಾಗಿ, ವಾಹನವು ಸುಮಾರು ಒಂದು ಗಂಟೆ ರಸ್ತೆಬದಿಯಲ್ಲಿ ನಿಂತಿತ್ತು, ಆ ಸಮಯದಲ್ಲಿ ಓಜಾ ಅವರ ಸ್ಥಿತಿ ಹದಗೆಟ್ಟಿತು ಮತ್ತು ಆಸ್ಪತ್ರೆ ತಲುಪುವ ಮೊದಲೇ ಅವರು ಸಾವನ್ನಪ್ಪಿದ್ದಾರೆ.

ಆ್ಯಂಬ್ಯುಲೆನ್ಸ್ ಚಾಲಕ ಆ ವಾಹನದಲ್ಲಿ ಇದು ತನ್ನ ಮೊದಲ ದಿನ ಎಂದು ಹೇಳಿದ್ದ ಮತ್ತು ಅದರಲ್ಲಿ ಮತ್ತೊಂದು ಟೈರ್ ಇದೆಯೇ ಎಂಬುದು ಆತನಿಗೆ ತಿಳಿದಿರಲಿಲ್ಲ. ಮೈನಾದಿಂದ ರೋಗಿಯನ್ನು ಕರೆದುಕೊಂಡು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಮಾತ್ರ ನನಗೆ ಸೂಚನೆಗಳು ಬಂದಿದೆ ಎಂದು ಚಾಲಕ ಹೇಳಿದ್ದಾನೆ.

ಮತ್ತಷ್ಟು ಓದಿ:  Video: ಕುರ್ಚಿ ಮೇಲೆ ಕುಳಿತು ನಿದ್ರೆಗೆ ಜಾರಿದ ವೈದ್ಯ, ರೋಗಿ ತೀವ್ರ ರಕ್ತಸ್ರಾವದಿಂದ ಸಾವು

ಆ್ಯಂಬ್ಯುಲೆನ್ಸ್ 45 ನಿಮಿಷ ತಡವಾಗಿ ಬಂದಿತು ಎಂದು ಓಜಾ ಅವರ ಮಗ ಆರೋಪಿಸಿದ್ದಾರೆ. ನನ್ನ ತಂದೆಗೆ ಆಗಲೇ ನೋವು ಕಾಣಿಸಿಕೊಂಡಿತ್ತು. ಪ್ರಯಾಣದ ಸುಮಾರು 10 ಕಿ.ಮೀ. ದೂರದಲ್ಲಿ, ಆ್ಯಂಬ್ಯುಲೆನ್ಸ್ ಟೈರ್ ಪಂಕ್ಚರ್ ಆಗಿತ್ತು. ನಾವು ಇನ್ನೊಂದು ವಾಹನವನ್ನು ವ್ಯವಸ್ಥೆ ಮಾಡಿ ಆಸ್ಪತ್ರೆಗೆ ತಲುಪುವ ಹೊತ್ತಿಗೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ಅವರು ಹೇಳಿದರು, ಇದು ನಿರ್ಲಕ್ಷ್ಯದ ಸ್ಪಷ್ಟ ಪ್ರಕರಣವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕ ರಿಷಿ ಅಗರ್ವಾಲ್ ಟೀಕೆ ಮಾಡಿದ್ದಾರೆ, ಅವರು ಆಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆರೋಗ್ಯ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಶಾಸಕರು ಆರೋಪಿಸಿದ್ದಾರೆ, ಆ್ಯಂಬ್ಯುಲೆನ್ಸ್ ಸೇವೆಗಳಲ್ಲಿ 600 ಕೋಟಿ ರೂ.ಗಳಿಗೂ ಹೆಚ್ಚು ದುರುಪಯೋಗವಾಗಿದೆ ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:05 am, Mon, 3 November 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us