ವಾಷಿಂಗ್ಟನ್ ಡಿಸಿ: ಭಾರತದಲ್ಲಿ ಕೊವಿಡ್ ಸೋಂಕು ಹರಡುವುದನ್ನು ತಡೆಯಲು ತಕ್ಷಣವೇ ಇಡೀ ದೇಶದಲ್ಲಿ ಕೆಲ ವಾರಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಿಸಬೇಕು ಎಂದು ಅಮೆರಿಕಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೊನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ. ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಕೊವಿಡ್ ತಡೆಯಲು ಭಾರತದಲ್ಲಿ ಕೊವಿಡ್ ಲಸಿಕೆ, ಔಷಧ ಮತ್ತು ಪಿಪಿಇ ಕಿಟ್ಗಳನ್ನು ಸಂಗ್ರಹಿಸುವುದು ಸಹ ಅತಿ ಪ್ರಮುಖ ಅಂಶವಾಗಿದೆ. ಕೊವಿಡ್ ಸುಳಿಯ ಅಪಾಯಕ್ಕೆ ಸಿಲುಕಿದವರನ್ನು ಅತ್ಯಂತ ಸಂಘಟನಾತ್ಮಕವಾಗಿ ರಕ್ಷಿಸುವ ಅಗತ್ಯವಿದೆ ಎಂದು ಡಾ ಫೌಸಿ ತಿಳಿಸಿದ್ದಾರೆ.
ತಮ್ಮ ಸಂದರ್ಶನದಲ್ಲಿ ಯಾವುದೇ ಸರ್ಕಾರದ ಹೆಸರು ಉಲ್ಲೇಖಿಸದೇ ಭಾರತದ ಕೊವಿಡ್ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಕೊವಿಡ್ ವಿರುದ್ಧದ ಗೆಲುವನ್ನು ಅತ್ಯಂತ ಅಕಾಲಿಕವಾಗಿ ಮ್ತತು ಬೇಗ ಘೋಷಿಸಲಾಯಿತು. ಸದ್ಯ ಭಾರತಕ್ಕೆ ಎದುರಾಗಲಿರುವ ಮುಂದಿನ ಅಪಾಯದಿಂದ ಪಾರಾಗಲು ತಾತ್ಕಾಲಿಕ ಲಾಕ್ಡೌನ್ ಘೋಷಿಸಬೇಕು. ವೈರಾಣುವಿನ ವಿರುದ್ಧದ ಹೋರಾಟದಲ್ಲಿ ಮುಂಚಿನಿಂದಲೂ ವಿವರಿಸಿದಂತೆ ತ್ವರಿತ, ಮಧ್ಯಂತರ ಮತ್ತು ದೀರ್ಘಕಾಲಿಕ ಯೋಜನೆಗಳಿರುತ್ತವೆ. ಅಂತಹ ಯೋಜನೆಗಳನ್ನು ರೂಪಿಸಿಕೊಂಡರೆ ಮಾತ್ರ ವೈರಾಣುವಿನ ದಾಳಿಯಿಂದ ದೇಶವನ್ನು ಪಾರು ಮಾಡಬಹುದು ಎಂದರು.
ಸದ್ಯದ ಅತೀ ಪ್ರಮುಖ ವಿಷಯವೆಂದರೆ ತಕ್ಷಣವೇ ವೈದ್ಯಕೀಯ ಆಕ್ಸಿಜನ್ನ ಪೂರೈಕೆ ಮಾಡುವುದು. ಔಷಧ, ಪಿಪಿಇ ಕಿಟ್ ಮತ್ತು ಲಸಿಕೆಯನ್ನು ಸಮರ್ಪಕವಾಗಿ ಪೂರೈಸುವುದು. ಇವುಗಳೆಲ್ಲವುಗಳ ಜತೆಗೆ ತಕ್ಷಣಕಜ್ಕೆ ಕೈಗೊಳ್ಳಬೇಕಾದ ಇನ್ನೊಂದು ನಿರ್ಧಾರವೆಂದೆರ ತಾತ್ಕಾಲಿಕವಾಗಿ ಲಾಕ್ಡೌನ್ ಮಾಡುವುದು ಎಂದು ಅವರು ವಿವರಿಸಿದ್ದಾರೆ. ಚೀನಾದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಒಂದು ವರ್ಷದ ಹಿಂದೆ ಚೀನಾದಲ್ಲಿ ಕೊವಿಡ್ ವೈರಾಣುವಿನ ಅತಿ ದೊಡ್ಡ ಸ್ಫೋಟವಾಗಿತ್ತು. ಆಗ ಇಡೀ ಚೀನಾವನ್ನು ಲಾಕ್ಡೌನ್ ಮಾಡಲಾಯಿತು. ಈ ದಾರಿಯ ಮೂಲಕ ಚೀನಾ ಬಹುದೊಡ್ಡ ಅಪಾಯದಿಂದ ಬಚಾವಾಯಿತು ಎಂದು ಅವರು ಸಂದರ್ಶನದಲ್ಲಿ ತಿಳಿಸಿದರು.
ತಾತ್ಕಾಲಿಕವಾಗಿ ಒಂದು ತಿಂಗಳ ಮಟ್ಟಿಗಾದರೂ ಭಾರತವನ್ನು ಲಾಕ್ಡೌನ್ ಮಾಡುವ ಮೂಲಕ ಕೊರೊನಾ ಹಾವಳಿಯನ್ನು ಕಡಿಮೆ ಮಾಡಬಹುದು. ಆರು ತಿಂಗಳಷ್ಟು ದೀರ್ಘಕಾಲ ಕಾಲ ಲಾಕ್ಡೌನ್ ಮಾಡುವ ಅಗತ್ಯವಿಲ್ಲ. ಆದರೆ ವೈರಸ್ನ ಚೈನ್ ಲಿಂಕ್ಗಳನ್ನು ಮುರಿಯುವ ಮೂಲಕವೇ ಈ ಅಪಾಯದಿಂದ ಆಚೆ ಬರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !
Covid Helpline Numbers: ಆಕ್ಸಿಜನ್, ರೆಮ್ಡೆಸಿವರ್ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ
(Americas Dr Dr Anthony Fauci advises total lockdown in India for few weeks)
Published On - 3:23 pm, Sat, 1 May 21