ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ; ಏಪ್ರಿಲ್ 12 ರಂದೇ ಡಿಸಿಜಿಐ ನಿಂದ ಗ್ರೀನ್ ಸಿಗ್ನಲ್
ಮಾಸ್ಕೋ ಮತ್ತು ನವದೆಹಲಿ ಮೂಲದ ರಾಜತಾಂತ್ರಿಕರ ಪ್ರಕಾರ, ಕೊರೊನಾ ತಡೆಗಟ್ಟುವ 150,000 ಲಸಿಕೆಯನ್ನು ಹೊತ್ತ ವಿಮಾನವು ಇಂದು ಬೆಳಿಗ್ಗೆ ರಷ್ಯಾದ ತೀರದಿಂದ ಹೊರಟು ಡಾ. ರೆಡ್ಡಿ ಅವರ ಪ್ರಯೋಗಾಲಯಗಳಿಗೆ ಬಂದು ತಲುಪಲಿದೆ.
ದೆಹಲಿ: ರಷ್ಯಾದಲ್ಲಿ ತಯಾರಾದ ಸ್ಪುಟ್ನಿಕ್ ವಿ ಕೊವಿಡ್ ಲಸಿಕೆ ಇಂದು ಭಾರತಕ್ಕೆ ಬಂದಿದೆ. ಮಾಸ್ಕೋದಿಂದ ಸುಮಾರು 1,50,000 ಡೋಸ್ ಲಸಿಕೆ ಇಂದು ಸಂಜೆ ತಲುಪಿದೆ. ಈ ತಿಂಗಳಲ್ಲಿ ಇನ್ನೂ ಮೂರು ಲಕ್ಷ ಡೋಸ್‌ಗಳು ರಷ್ಯಾದಿಂದ ಭಾರತಕ್ಕೆ ರವಾನೆ ಆಗಲಿವೆ.
ಮಾಸ್ಕೋ ಮತ್ತು ನವದೆಹಲಿ ಮೂಲದ ರಾಜತಾಂತ್ರಿಕ ಮೂಲದ ಪ್ರಕಾರ, ಕೊರೊನಾ ತಡೆಗಟ್ಟುವ 150,000 ಲಸಿಕೆಯನ್ನು ಹೊತ್ತ ವಿಮಾನವು ಇಂದು ಬೆಳಗ್ಗೆ ರಷ್ಯಾದಿಂದ ಹೊರಟು ಡಾ. ರೆಡ್ಡಿ ಅವರ ಪ್ರಯೋಗಾಲಯಗಳಿಗೆ ಬಂದು ತಲುಪಲಿದೆ. ಬಳಿಕ ಇದನ್ನು ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿ ಕಸೂಲಿಗೆ ಹಸ್ತಾಂತರಿಸಲಾಗುವುದು ನಂತರ ಇಲ್ಲಿ ಅನುಮೊದನೆ ಪಡೆದು ಜನರಿಗೆ ನೀಡಲಾಗುತ್ತದೆ.
ಸ್ಪುಟ್ನಿಕ್ ವಿ ಲಸಿಕೆಯು ಮಾನವ ಅಡೆನೊವೈರಲ್ ವಾಹಕಗಳನ್ನು ಆಧರಿಸಿದ್ದು, ಇದು ಪ್ರಮುಖ ಮೂರು ಲಸಿಕೆಗಳಲ್ಲಿ ಒಂದಾಗಿದೆ (ಇತರ ಎರಡು ಫಿಜರ್ ಮತ್ತು ಮಾಡರ್ನಾ). ಸ್ಪುಟ್ನಿಕ್ ವಿ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಶೇಕಡಾ 90 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಹೊರಾಡುತ್ತದೆ. ಸ್ಪುಟ್ನಿಕ್ ವಿ ಲಸಿಕೆಗೆ ಏಪ್ರಿಲ್ 12 ರಂದು ಭಾರತದಲ್ಲಿ ಅನುಮೋದನೆ ನೀಡಲಾಯಿತು. ಆ ಪ್ರಕಾರ 21 ದಿನಗಳ ಅಂತರದಲ್ಲಿ ಎರಡು ಡೋಸ್ ಲಸಿಕೆಯನ್ನು ನೀಡಲಾಗುವುದು. ಇದನ್ನು ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ರಷ್ಯಾ ದೇಶ ಬೆಂಬಲಿಸಿದೆ.
ಅಧಿಕಾರಿಗಳ ಪ್ರಕಾರ, ಸುಮಾರು ಐದು ಲಕ್ಷ ಸ್ಪುಟ್ನಿಕ್ ವಿ ಬಾಟಲಿಗಳು ಜೂನ್‌ನಲ್ಲಿ ಕಂಟೇನರ್‌ನ ಮೂಲಕ ರಷ್ಯಾದಿಂದ ಬರಲಿದೆ ಮತ್ತು ಜುಲೈನಲ್ಲಿ ಸುಮಾರು 10 ಲಕ್ಷ ಲಸಿಕೆಗಳು ಬರಲಿವೆ. ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಭಾರತೀಯರಿಗೆ ಲಸಿಕೆ ನೀಡಲು ಬಯಸಿದ್ದರಿಂದ ದೆಹಲಿ ಮಾಸ್ಕೋವನ್ನು ಚುಚ್ಚುಮದ್ದಿನ ಪೂರೈಕೆಗಾಗಿ ಕೇಳಿಕೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ ನಂತರ ಸ್ಪುಟ್ನಿಕ್ ವಿ ಲಸಿಕೆ ವಿತರಣೆಯು ಪ್ರಾರಂಭವಾಯಿತು. ರಷ್ಯಾದ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಈ ಮಾತುಕತೆ ತುಂಬ ಆಪ್ತವಾಗಿ, ಸ್ನೇಹಪರವಾಗಿತ್ತು ಎಂದು ಮಾಸ್ಕೋದ ರಾಜತಾಂತ್ರಿಕ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:
ಲಸಿಕೆಯೇ ನಮ್ಮ ಸುರಕ್ಷಾ ಕವಚ: 18 ವರ್ಷ ಮೇಲ್ಪಟ್ಟವರಿಗಾಗಿ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ
Published On - 4:01 pm, Sat, 1 May 21